ಭಟ್ಕಳ: ತಾಲೂಕಿನ ಸಾರದಹೊಳೆಯ ಪ್ರಸಿದ್ಧ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಏ. ೧೭ ರಂದು ರಾಮನವಮಿ ಉತ್ಸವ ಹಾಗೂ ದ್ವಿತೀಯ ವರ್ಷದ ವರ್ಧಂತ್ಯೋತ್ಸವ ಏಪ್ರಿಲ್ ೨೧ ರಿಂದ ೨೪ ರ ತನಕ ವಿಜೃಂಭಣೆಯಿಂದ ಜರುಗಲಿದೆ.
ಇದನ್ನೂ ಓದಿ : ಮುರುಡೇಶ್ವರ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲು
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಕೆ.ನಾಯ್ಕ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ವಿವರ ನೀಡಿದರು. ಪುರಾತನ ಇತಿಹಾಸವಿರುವ ಸಾರದಹೊಳೆಯ ಶ್ರೀ ಹಳೇಕೋಟೆ ಹನುಮಂತ ದೇವಸ್ತಾನಕ್ಕೆ ತನ್ನದೇ ಆದ ಭಕ್ತರ ಸಮೂಹ ಇದೆ. ನಾಮಧಾರಿ ಸಮಾಜದ ಭಕ್ತರಲ್ಲದೆ ಇತರ ಹಲವಾರು ಸಮಾಜದ ಭಕ್ತರು ಈ ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದಾರೆ. ಎಲ್ಲರ ಸಹಕಾರದೊಂದಿಗೆ ಈ ದೇವಸ್ತಾನ ಅಬಿವೃದ್ದಿ ಹೊಂದುತ್ತಿದೆ. ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಪ್ರತಿದಿನ ಬರುತ್ತಿದ್ದಾರೆ ಎಂದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಏಪ್ರಿಲ್ ೧೭ ರಂದು ಶ್ರೀರಾಮ ನವಮಿ ಉತ್ಸವದ ಪ್ರಯುಕ್ತ ಬೆಳಿಗ್ಗೆ ೯ ಗಂಟೆಗೆ ಗಣಹೋಮ, ಕೋಟೆ ಜಟಕನ ಪೂಜೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ನಂತರ ಪ್ರಸಾದ ವಿತರಣೆ ಇರಲಿದೆ. ಮುಡಿಪ್ರಸಾದ ಏಲಂ ನಂತರ ಪ್ರಸಾಧ ಬೋಜನೆ ನಡೆಯಲಿದೆ. ಸಂಜೆ ೫-೩೦ ರಿಂದ ಬೆಳ್ಳಿ ಪಲ್ಲಕ್ಕಿ ಉತ್ಸವ ಮೆರವಣಿಗೆ ವಿಜೃಂಭ್ರಣೆಯಿಂದ ಜರುಗಲಿದೆ. ಭಜನಾ ಕುಣಿತ ತಂಡದೊಂದಿಗೆ ಮೆರವಣಿಗೆ ಸಾಗಲಿದೆ. ಪಲ್ಲಕ್ಕಿಯು ದೇವಸ್ಥಾನದಿಂದ ದೇವರ ಮೂಲ ಸ್ಥಾನವಾದ ಹಳೇಕೋಟೆಗೆ ತೆರಳಿ ಅಲ್ಲಿಂದ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ಬರಲಿದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಹಾಜರಿರುವರು ಎಂದರು.
ದ್ವಿತೀಯ ವರ್ಷದ ವರ್ಧಂತ್ಯೋತ್ಸವ :
ಏಪ್ರಿಲ್ ೨೧ ರಿಂದ ೨೪ ರವರೆಗೆ ದೇವಸ್ತಾನದಲ್ಲಿ ದ್ವಿತೀಯ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ಜರುಗಲಿದೆ. ವೇದಮೂರ್ತಿ ಆಗಮ ಪ್ರವೀಣ ಶ್ರೀ ಲಕ್ಷ್ಮೀಪತಿ ಗೋಪಾಲಾಚಾರ್ಯ ಪುರೋಹಿತರ ಮಾರ್ಗದರ್ಶನದಲ್ಲಿ ನಡೆಯಲಿದೆ. ಏ ೨೧ ರಂದು ಸಂಜೆ ೫ ಗಂಟೆಗೆ ಗೋದೂಳಿ ಮಹೂರ್ತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ರಾತ್ರಿ ಮಹಾಪೂಜೆ ನಂತರ ರಾತ್ರಿ ೮ ಗಂಟೆಯಿಂದ ೧೦ ಗಂಟೆಯವರೆಗೆ ಪ್ರಸಾದ ಭೋಜನೆ ಹಮ್ಮಿಕೊಳ್ಳಲಾಗಿದೆ.
ಏ.೨೨ ರಂದು ಬೆಳಿಗ್ಗೆ ೬ ಗಂಟೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ ಮಹಾಪೂಜೆ ನಂತರ ಪ್ರಸಾದ ಭೋಜನೆ ನಡೆಯಲಿದೆ. ಸಂಜೆ ೪-೩೦ ಕ್ಕೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಸಂಜೆ ವಿಷ್ಣುಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧ ಹೋಮಗಳು ನಡೆಯುವುದು. ರಾತ್ರಿ ಮಹಾಪೂಜೆ ನಂತರ ೮ ರಿಂದ ೧೦ ಗಂಟೆಯವರೆಗೆ ಪ್ರಸಾದ ಭೋಜನ ಇರುವುದು. ನಂತರ ವೇದಿಕೆ ಹಾಗೂ ಮನೋರಂಜನಾ ಕಾರ್ಯಕ್ರಮ ಜರುಗಲಿರುವುದು.
ಏಪ್ರಿಲ್ ೨೩ ರಂದು ಬೆಳಿಗ್ಗೆ ೬ ಗಂಟೆಗೆ ಸುಪ್ರಭಾತ, ವೇಧಘೋಷ, ಕುಂಬಾಭಿಷೇಕ ನಡೆಯುವುದು. ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ೧೦೮ ಕಳಶಾಭಿಷೇಕದ ಕಾರ್ಯಕ್ರಮ ಜರುಗಲಿರುವುದು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಗುರುಪೂಜೆ ಹಾಗೂ ಗುರುಗಳಿಂದ ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ ೩ ಗಂಟೆಯ ತನಕ ಪ್ರಸಾಧ ಭೋಜನೆ ನಡೆಯಲಿದೆ. ಸಂಜೆ ೪ ಗಂಟೆಗೆ ಶ್ರೀ ದೇವಲ ಪಲ್ಲಕ್ಕಿ ಮೆರವಣಿಗೆ ನಡೆಯಲಿರುವುದು. ರಾತ್ರಿ ೯ ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಮನೋರಂಜನಾ ಕಾರ್ಯಕ್ರಮ ಜರುಗಲಿರುವುದು. ಏಪ್ರಿಲ್ ೨೪ ರಂದು ಬುಧವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ದೇವರಿಗೆ ಓಕುಳಿ ಕಾರ್ಯಕ್ರಮ ಜರುಗಲಿರುವುದು ಎಂದರು.
ಈ ಸಂದರ್ಭದಲ್ಲಿ ಹಳೇಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ, ಉಪಾಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ವಾಸು ನಾಯ್ಕ, ಸದಸ್ಯ ರವೀಂದ್ರ ನಾಯ್ಕ, ಮತ್ತಿತರು ಇದ್ದರು.