ಭಟ್ಕಳ : ಇಲ್ಲಿನ ಪ್ರಸಿದ್ಧ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದ ದ್ವಿತೀಯ ವರ್ಷದ ವರ್ಧಂತ್ಯೋತ್ಸವ ವಿದ್ಯುಕ್ತವಾಗಿ ಚಾಲನೆಗೊಂಡಿತು.

ಇದನ್ನೂ ಓದಿ : ಗರ್ಭಗೃಹ ಶಿಖರ ನವೀಕರಣ, ಸ್ವರ್ಣ ಕಲಶ ಪ್ರತಿಷ್ಠೆ ನಾಳೆಯಿಂದ

ಉತ್ಸವದ ಅಂಗವಾಗಿ ರವಿವಾರ ಸಂಜೆ ಗೋದೋಳಿ ಲಗ್ನ ಮಹೂರ್ತದಲ್ಲಿ ಮಹಾಗಣಪತಿ ಹೋಮ, ನೈವೆಧ್ಯ, ಬಲಿಹರಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿ ರಾತ್ರಿ ಮಹಾಪೂಜೆ ನಂತರ ಪ್ರಸಾದ ಭೋಜನ ನಡೆಯಿತು. ಬುಧವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಸುಪ್ರಭಾತ , ವೇಧಘೋಷ ಮೂಲಕ ದೇವರಿಗೆ ಪಂಚಾಮೃತ ಅಬಿಷೇಕ, ಪರಿವಾರ ದೇವರುಗಳಿಗೆ ವಿಶೇಷ ಪೂಜೆ, ದೇವತಾ ಹೋಮಗಳು ನಡೆದವು. ಮಧ್ಯಾಹ್ನ ಮಹಾಪೂಜೆ ನಂತರ ಅನ್ನ ಸಂತರ್ಪಣೆ ನಡೆಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬ್ರಹ್ಮಾನಂದ ಸ್ವಾಮೀಜಿ ಪುರಪ್ರವೇಶ
ಸಂಜೆ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾರದಹೊಳೆ ಶ್ರೀ ಕ್ಷೇತ್ರಕ್ಕೆ ಪುರಪ್ರವೇಶ ಮಾಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರನ್ನು ಆಡಳಿತ ಮಂಡಳಿಯರು ಪಂಚವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳ ಅಧ್ಯಕ್ಷ ಆರ್.ಕೆ.ನಾಯ್ಕ, ಕಾರ್ಯದರ್ಶಿಯಾದ ವಾಸು ನಾಯ್ಕ, ಧರ್ಮದರ್ಶಿಗಳಾದ ಸುಬ್ರಾಯ ನಾಯ್ಕ, ಮಾಜಿ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಪ್ರಮುಖರಾದ ಈಶ್ವರ ನಾಯ್ಕ, ಮುರುಡೇಶ್ವರ, ಶ್ರೀಧರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಂತರ ಸಾರದಹೊಳೆ ದೇವಸ್ಥಾನದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಧ್ವಜಕುಂಭದ್ವಾರ ತೋರಣ ಪೂಜೆ, ಮಹಾ ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ರಾತ್ರಿ ಮಂಗರಾಳತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನ ಪ್ರಸಾದ ನಡೆಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ನಾಳೆ ಬುಧವಾರದ ದೇವಸ್ಥಾನದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ೧೧ ಗಂಟೆಯವರೆಗೆ ೧೦೮ ಕಳಶಾಭಿಷೇಕ ಗುರುಪೂಜೆ ಹಾಗೂ ಗುರುಗಳಿಂದ ಆಶೀರ್ವಚನ, ಸಂಜೆ ಶ್ರೀದೇವರ ಪಲ್ಲಕ್ಕಿ ಉತ್ಸವ ಜರುಗಲಿರುವುದು.