ಭಟ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ತಾಲೂಕಿನ ತಲಗೋಡ ರಂಗಮಂದಿರದಲ್ಲಿ ಅಪರೂಪದ ಅಜ್ಜಿ ಕೈತುತ್ತು ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಟ್ಕೇಶ್ವರ ಜ್ಞಾನವಿಕಾಸ ಕೇಂದ್ರದ ಕರಿಕಲ್ ಘಟಕದ ಸದಸ್ಯರು, ಅಜ್ಜಿಯಂದಿರು ಮೊಮ್ಮಕ್ಕಳ ಜತೆಗೂಡಿ ಬಂದು ಮನೆಯಲ್ಲಿ ಮಾಡಿಕೊಂಡು ತಂದ ಕೇಸರಿ ಬಾತ್ ಮೊಮ್ಮಕ್ಕಳಿಗೆ ತಿನ್ನಿಸಿ, ಖುಷಿಪಟ್ಟರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಧ್ಯಮ ಪ್ರತಿನಿಧಿ ಈಶ್ವರ ನಾಯ್ಕ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಲಕಾಲಕ್ಕೆ ಅನೇಕ ಸಾಮಾಜಿಕ ಕಾಳಜಿಯುಳ್ಳ ಕೆಲಸ ಮಾಡಿಕೊಂಡು ಬಂದಿದೆ. ಈ ಸಂಸ್ಥೆ ನಡೆಸುವ ಸಾರಾಯಿ ವರ್ಜಕ ಕಾರ್ಯಕ್ರಮಗಳು, ಸ್ತ್ರೀಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುಲು ವಿವಿಧ ಗ್ರಹೋಪಯೋಗಿ ವಸ್ತುಗಳ ತಯಾರಿಕೆ ತರಬೇತಿಯಂತ ಕಾರ್ಯಕ್ರಮಗಳು ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಅಪರೂಪದ ಅಜ್ಜಿ ಕೈತುತ್ತು ಎಂಬ ಈ ಕಾರ್ಯಕ್ರಮದಿಂದ ಕುಟುಂಬದಲ್ಲಿ ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಸೇವಾ ಪ್ರತಿನಿಧಿ ಜಯಂತಿ ನಾಯ್ಕ, ಪಾರ್ವತಿ ಕುಪ್ಪ ಖಾರ್ವಿ ಮತ್ತಿತರು ಭಾಗಿಯಾಗಿದ್ದರು.
ಇದನ್ನೂ ಓದಿ : ಸಾವಿಷ್ಕಾರ್ ಫೆಸ್ಟ್ ನಲ್ಲಿ ಎಐಟಿಎಂ ವಿದ್ಯಾರ್ಥಿಗಳ ಸಾಧನೆ