ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಕುಟುಂಬದ ಸದಸ್ಯರು ಮತ್ತು ಅವರ ನೆರೆಹೊರೆಯವರು ಹಮ್ಮಿಕೊಂಡ ಅಭಿಯಾನದ ಪರಿಣಾಮ ಇಂದು ಪ್ರಾಣಿ ಪಕ್ಷಿಗಳ ದಾಹ ನೀಗುತ್ತಿದೆ. ಬಹುತೇಕ ಮನೆಗಳಲ್ಲಿ ಮೂಕ ಜೀವಿಗಳಿಗೆ ಕುಡಿಯಲು ನೀರು ಮತ್ತು ಆಹಾರವಿಡುವ ವ್ಯವಸ್ಥೆ ತಾಲೂಕಿನಾದ್ಯಂತ ಈಡೇರಿದೆ.
ರೋಟರಿ ಅಧ್ಯಕ್ಷ ಎನ್.ಆರ್.ಗಜು ನೀಡಿದ ಈ ಕರೆಯನ್ನು ಪಾಲಿಸಿದ ರೋಟರಿ ಬಳಗದ ಎಲ್ಲರೂ ಈ ವ್ಯವಸ್ಥೆಯನ್ನು ಅಳವಡಿಸಿ ಮಾನವೀಯತೆ ಮೆರೆದಿದ್ದಾರೆಂದು ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ಹೇಳಿದ್ದಾರೆ.
ಇದನ್ನೂ ಓದಿ : ಪ್ರಾಣಿ – ಪಕ್ಷಿಗಳಿಗೆ ನೀರುಣಿಸುತ್ತಿರುವ ಪೊಲೀಸ್, ಅರಣ್ಯ ಇಲಾಖೆ
ಉರಿ ಬಿಸಿಲಿಗೆ ಪ್ರಾಣಿ-ಪಕ್ಷಿಗಳು ಕುಡಿಯಲು ನೀರು ಸಿಗದೆ ಪರದಾಡುತ್ತಿರುವುದದನ್ನು ನೋಡಿ, ಮೂಕ ಪ್ರಾಣಿಗಳ ಬಾಯಾರಿಕೆ ನೀಗಿಸಲು ಮನೆಯ ಮುಂದುಗಡೆ ಸ್ವಲ್ಪ ನೀರು ಇಟ್ಟರೆ ಅದು ಪುಣ್ಯ ಪ್ರಧಾನ ಕಾರ್ಯವೆಂದು ರೋಟರಿಯ ಕೋಶಾಧ್ಯಕ್ಷ ಸಂದೀಪ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿ ಮಾನವೀಯತೆ ಮೆರೆದ ರೈತ
ಮನೆಯ ಹೊರಗಡೆ ಸಾರ್ವಜನಿಕ ರಸ್ತೆ ಅಂಚಿಗೆ ಪಕ್ಷಿಗಳಿಗಷ್ಟೇ ಅಲ್ಲದೇ ಇತರ ಜಾನುವಾರಗಳ ದಾಹ ನಿವಾರಿಸಲು ಅರ್ಧ ಶತಮಾನಕ್ಕಿಂದ ಹೆಚ್ಚು ಸಮಯದಿಂದ ಪ್ರತಿದಿನ ತಪ್ಪದೇ ವ್ಯವಸ್ಥೆ ಮಾಡಲಾಗುತ್ತಿದೆ. ಮನೆಯ ಉದ್ಯಾನವನದಲ್ಲಿ ಅನೇಕ ಜಲಸಸ್ಯಗಳ ಪಾಲನೆ ಮಾಡುತ್ತಿದ್ದೇವೆ. ಸೊಳ್ಳೆಗಳು ಮೊಟ್ಟೆ ಇಡದಂತೆ ಅವುಗಳಲ್ಲಿ ಚಿಕ್ಕ ಮೀನುಗಳನ್ನು ಸಾಕಿದ್ದೇವೆ ಎಂದು ಜಲಸಸ್ಯಗಳ ಆರೈಕೆಯನ್ನು ಮಾಡುತ್ತಿರುವ ಪ್ರಾತ್ಯಕ್ಷಿಕೆಯನ್ನು ರೋಟರಿಯ ನಿಯೋಜಿತ ಅಧ್ಯಕ್ಷ ಅತುಲ್ ಕಾಮತ ವಿವರಿಸಿದ್ದಾರೆ.
ಇದನ್ನೂ ಓದಿ : ಋಣ ತೀರಿಸಿದರೆ ಮಾತ್ರ ಮೋಕ್ಷ ಪ್ರಾಪ್ತಿ : ಡಾ.ನಾ.ಸೋಮೇಶ್ವರ
ಮನೆಯ ಸುತ್ತಮುತ್ತ, ಟೆರೇಸಿನ ಮೇಲೆ, ತೆರೆದ ಮಡಿಕೆ, ಹೂಜಿಯಲ್ಲಿ ನೀರಿಟ್ಟು ಚಿಕ್ಕಪುಟ್ಟ ಸ್ಥಳದಲ್ಲಿಯೇ ವ್ಯವಸ್ಥೆಗೆ ಅನುವು ಮಾಡಿಕೊಟ್ಟ ಹಲವರಿದ್ದಾರೆ. ಅಂತೆಯೇ ಕಚೇರಿಯಲ್ಲಿ ಬಳಸಿ, ವ್ಯರ್ಥವಾಗಿ ಉಳಿದಿದ್ದ ಪ್ಲಾಸ್ಟಿಕ್ ಕ್ಯಾನ್, ಮಿನರಲ್ ವಾಟರ್ ಬಾಟಲುಗಳಿಂದ ಈ ಪರಿಕರವನ್ನು ತಯಾರಿಸಿದ್ದು ಗಮನಾರ್ಹವೆನಿಸುತ್ತದೆ. ಮನೆಯ ಮಹಿಳೆಯರು, ಮಕ್ಕಳು ನಿತ್ಯ ಪೂಜೆಯಂತೆ ನಡೆಸುವ, ಪ್ರಾಣಿ ಪಕ್ಷಿಗಳ ದಾಹ ನೀಗಿಸುವ ಈ ಪುಟ್ಟ ಸೇವಾಕಾರ್ಯ ಸರ್ವರಿಗೂ ಮಾದರಿಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ನಾಸಿರ್ ಬೋರ್ಸಡ್ವಾಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.