ಕುಮಟಾ : ತಾಲೂಕಿನಲ್ಲಿ ರೈಲ್ವೆ ಅಭಿವೃದ್ಧಿ ಕುರಿತಾಗಿ ಶಾಸಕ ದಿನಕರ ಶೆಟ್ಟಿ ಶನಿವಾರ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು‌.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅತ್ಯುತ್ತಮ ದರ್ಜೆಯ ಎರಡನೇ ಫ್ಲಾಟ್ ಫಾರಂ ನಿರ್ಮಾಣ, ಕುಮಟಾದಲ್ಲಿ ವಂದೇ ಭಾರತ ರೈಲು ನಿಲುಗಡೆ, ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ಬೇಗ ತಲುಪುವಂತೆ ಮಾಡುವುದು, ಪೆರ್ನಿಂ ಕಾರವಾರ ರೈಲನ್ನು ಕುಮಟಾದವರೆಗೆ ವಿಸ್ತರಣೆ ಮಾಡುವುದು ಹಾಗೂ ಇತರ ವಿಚಾರಗಳನ್ನು ಶಾಸಕರು ಪ್ರಸ್ತಾಪಿಸಿದ್ದಾರೆ. ಜನತೆಗೆ ಅನುಕೂಲವಾಗುವ ಯೋಜನೆಗಳನ್ನು ತರುವ ನಿಟ್ಟಿನಿಂದ ಮಾತುಕತೆ ನಡೆಸಿರುವುದಾಗಿ ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜೀವ ಗಾಂವ್ಕರ್ ಹಾಗೂ ಇತರರು ಇದ್ದರು.

ಇದನ್ನೂ ಓದಿ : ಸದ್ಭಾವನಾ ಸೌಹಾರ್ದ ಸಮಾರಂಭ ಸಂಪನ್ನ