ಭಟ್ಕಳ : ತಾಲೂಕಿನಲ್ಲಿ ಸುರಿದ ಭಾರಿ ಗಾಳಿ-ಮಳೆಗೆ ಮನೆಯ ಹಿಂಭಾಗದ ಅರ್ಧ ಭಾಗ ಕುಸಿದ(House collapsed) ಘಟನೆ ಭಟ್ಕಳ (bhatkal) ಪುರಸಭೆ ವ್ಯಾಪ್ತಿಯ ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮಣ್ಕುಳಿಯ ಕಸಲಗದ್ದೆ ಮನೆಯ ಲಕ್ಷ್ಮಿ ಹನುಮಂತ ನಾಯ್ಕ ಎನ್ನುವವರಿಗೆ ಸೇರಿದ ಮನೆ ಇದಾಗಿದೆ. ಮನೆಯ ಹಿಂಭಾಗ ಸಂಪೂರ್ಣವಾಗಿ ಕುಸಿದಿದೆ (house collapsed) ಮನೆಯ ಅರ್ಧ ಭಾಗ ಹಾನಿಯಾಗಿದೆ. ಇನ್ನೂ ಮನೆಯ ಅರ್ಧ ಭಾಗ ಕುಸಿಯುವ ಭೀತಿಯಲ್ಲಿದೆ. ಅದೃಷ್ಟವತಾಸ್ ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ವಿಡಿಯೋ ಸಹಿತ ಈ ಸುದ್ದಿಯನ್ನೂ ಓದಿ : ಸರ್ಕಾರಿ ಶಾಲೆಗೆ ಪ್ರತಿಷ್ಠಿತ ಪ್ರಶಸ್ತಿ- ಯಾಕೆ ಗೊತ್ತಾ?
ಮನೆಯಲ್ಲಿ ವಾಸವಿದ್ದ ಲಕ್ಷ್ಮಿ ಹನುಮಂತ ನಾಯ್ಕ ಇಷ್ಟು ದಿನ ಇದೇ ಮನೆಯಲ್ಲಿ ವಾಸವಿದ್ದರು. ನಿನ್ನೆಯಷ್ಟೇ ತನ್ನ ಮಗನ ಮನೆಗೆ ಹೋಗಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಇನ್ನುಳಿದ ಅರ್ಧ ಮನೆ ಕುಸಿಯುವ ಭೀತಿಯಲ್ಲಿರುವುದರಿಂದ ಸದ್ಯ ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳನ್ನು ಸೇರಿ ಎಲ್ಲವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಕಂದಾಯ (revenue) ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.