ಭಟ್ಕಳ: ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ವಿವಿಧೆಡೆ ಅಪಾರ ಹಾನಿ(rain damage) ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶುಕ್ರವಾರ ಬೆಳಿಗ್ಗೆ ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದೆ. ಬೆಳಿಗ್ಗೆ ಒಮ್ಮೆ ಭಾರಿ ಗಾಳಿ ಸಹಿತ ಮಳೆ ಸುರಿದು ನಿಂತಿದೆ. ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಸುರಿಯುತ್ತಿದೆ. ಮುನ್ನೆಚ್ಚರಿಕೆಯಾಗಿ ಭಟ್ಕಳದಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರೆದಿದೆ.
ಇದನ್ನೂ ಓದಿ : ಪಾದರಕ್ಷೆ ವಿನ್ಯಾಸ ತರಬೇತಿಗೆ ಅರ್ಜಿ ಆಹ್ವಾನ
ಎಲ್ಲೆಲ್ಲಿ ಹಾನಿ ?
ನಿನ್ನೆ ಗಾಳಿ-ಮಳೆಗೆ ಹಲವೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಬಂಗಾರಮಕ್ಕಿ ತಿಮ್ಮಪ್ಪ ಕುಪ್ಪ ನಾಯ್ಕ ಎನ್ನುವರ ಮನೆ ಮೇಲ್ಛಾವಣಿ ಹಾನಿಯಾಗಿದೆ. ತೆಂಗಿನಗುಂಡಿಯ ಬಂದರಿನಲ್ಲಿ ನಾರಾಯಣ ಶನಿಯಾರ ದೇವಾಡಿಗ ಇವರ ದಿನಸಿ ಅಂಗಡಿಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಸುರೇಶ ನಾಗಪ್ಪ ನಾಯ್ಕ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶಃ ಹಾನಿಯಾಗಿದೆ. ಸಣಬಾವಿಯ ದುರ್ಗಮ್ಮ ನಾರಾಯಣ ನಾಯ್ಕ ಮೇಲ್ಛಾವಣಿ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಇದನ್ನೂ ಓದಿ : ಕೊಲ್ಲೂರು ದೇವಿ ದರ್ಶನ ಪಡೆದ ದರ್ಶನ್ ಪತ್ನಿ
ಶಿರಾಲಿ-೧ ಗ್ರಾಮದಲ್ಲಿ ಅಪಾರ ಹಾನಿ
ಶಿರಾಲಿ 1 ಗ್ರಾಮದ ಶನಿಯಾರ ನಾರಾಯಣ ನಾಯ್ಕ ಇವರ ವಾಸ್ತವ್ಯದ ಮನೆಯ ಮೇಲ್ಚಾವಣಿ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಇದೇ ಗ್ರಾಮದ ವೆಂಕಟ್ರಮಣ ಸುಬ್ರಾಯ ಕೆಲ್ಸಿ ಇವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಸಮೀಪದ ನಾರಾಯಣಿ ವೆಂಕಟ್ರಮಣ ದೇವಡಿಗ ಇವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಶೀಟು ಬಿದ್ದು ಭಾಗಶಃ ಹಾನಿಯಾಗಿದೆ. ಭಾರತಿ ಮಂಜುನಾಥ ದೇವಡಿಗ, ದೇವಿದಾಸ ದೇವಯ್ಯ ದೇವಡಿಗ ಹಾಗೂ ಸದಾನಂದ ಲಕ್ಷ್ಮೀನಾರಾಯಣ ಶಿರಾಲಿ ಇವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಶೀಟು ಬಿದ್ದು ಭಾಗಶಃ ಹಾನಿಯಾಗಿದೆ. ಗೋಯ್ದ ಗಣಪಯ್ಯ ದೇವಡಿಗ ಇವರ ವಾಸ್ತವ್ಯದ ಮನೆಯ ಮೇಲ್ಛಾವಣಿಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಇದನ್ನೂ ಓದಿ : ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
ಹೆಬಳೆಯಲ್ಲೂ ಉರುಳಿದ ಮರಗಳು
ತೆಂಗಿನಗುಂಡಿಯ ಹೆಬಳೆಯಲ್ಲಿ ಅಬ್ದುಲ್ ಹಮೀದ್ ಸುಲೆಮಾನ್ ಅಲ್ಲಾವೋ ಅವರ ವಾಸ್ತವ್ಯ ಇರದ ಮನೆಯ ಮೇಲ್ಛಾವಣಿ ಮೇಲೆ ಮಧ್ಯರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ತೆಂಗಿನಮರ ಬಿದ್ದು ಹಾನಿಯಾಗಿದೆ. ಹೆಬಳೆ ಫಿರ್ದೋಸ ನಗರ ಮೆಹರುನ್ನಿಸಾ ಅಬುಬಕ್ಕರ ಬಂಗಾಲಿ ಇವರ ವಾಸ್ತವ್ಯ ಇರದ ಮನೆಯ ಮೇಲ್ಚಾವಣಿ ಮೇಲೆ ಭಾರಿ ಮಳೆ ಮತ್ತು ಗಾಳಿಯಿಂದ ಮಾವಿನ ಮರ ಬಿದ್ದು ಹಾನಿಯಾಗಿದೆ.
ಇದನ್ನೂ ಓದಿ : ಬಾವಿಗೆ ಬಿದ್ದು ಮಗು ದುರ್ಮರಣ
ಶಾಲೆ ಮೇಲೆ ಬಿದ್ದ ಮರ
ಮಾವಳ್ಳಿ 2 ಗ್ರಾಮದ ದಿವಗೇರಿ ರಸ್ತೆ ಮಧ್ಯದಲ್ಲಿ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಿವಗೇರಿ ಮಾವಳ್ಳಿ ೨ ಶಾಲೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಶಾಲೆಗೆ ರಜೆ ಇರುವ ಕಾರಣ ಭಾರಿ ಅನಾಹುತ ತಪ್ಪಿದೆ.
ಇದನ್ನೂ ಓದಿ: ಬಾವಿಗೆ ಬಿದ್ದು ಮಗು ದುರ್ಮರಣ
ಪಡುಶಿರಾಲಿ ಮಾದೇವ ಜಟ್ಟ ನಾಯ್ಕ ಮೇಲ್ಛಾವಣಿ ಮೇಲೆ ಕಾಡು ಜಾತಿಯ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಸಟ್ಟಿಹಕ್ಲುವಿನ ಮಾದೇವ ಸುಕ್ರಯ್ಯ ದೇವಡಿಗ ನಾಯ್ಕ ಇವರ ಮನೆ ಮೇಲ್ಛಾವಣಿ ತಗಡು ಭಾಗಶಃ ಹಾನಿಯಾಗಿದೆ. ಬೈಲೂರು ಗ್ರಾಮದ ತೆಂಗಾರ ಮಜರೆಯ ಗೌರಿ ತಿಮ್ಮಪ್ಪ ದೇವಾಡಿಗ ರವರ ವಾಸ್ತವ್ಯದ ಮನೆಯ ಮುಂಭಾಗದ ಮೇಲ್ಚಾವಣಿ ಕುಸಿದಿದೆ.
ಇದನ್ನೂ ಓದಿ: ಹೆಬ್ಬಾಳ ಸೇತುವೆ ಮುಳುಗಡೆ; ಹೊರನಾಡು ಸಂಪರ್ಕ ಕಡಿತ
ವೆಂಕಟಾಪುರದ ಅನಂತ ದುರ್ಗಪ್ಪ ನಾಯ್ಕ ಇವರ ವಾಸ್ತವ್ಯದ ಮನೆಯು ಮಳೆ ಗಾಳಿಗೆ ಕುಸಿದು ಬಿದ್ದಿದೆ. ಭಾಗಶಃ ಹಾನಿಯಾಗಿ ಅಂದಾಜು ೫೦ ಸಾ. ರೂ. ನಷ್ಟ ಆಗಿದೆ. ರತ್ನಾಬಾಯಿ ಮಹಾಬಲೇಶ್ವರ ಶೇಟರವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದಿದೆ. ಮನೆಯ ಮೇಲ್ಛಾವಣಿ ಹಿಂಬದಿಯು ಪೂರ್ಣವಾಗಿ ಹಾನಿಯಾಗಿದೆ.