ಭಟ್ಕಳ : ಬಿಜೆಪಿ(BJP) ಕರ್ನಾಟಕ ಫೇಸ್‌ಬುಕ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಸಚಿವ ಮಂಕಾಳ ವೈದ್ಯ (Mankal Vaidya) ಅವರನ್ನು ಕೆರಳಿಸಿದೆ. ಶನಿವಾರ ಸಂಜೆ ಆರು ಗಂಟೆಗೆ ರಾಜ್ಯ ಬಿಜೆಪಿ ಮಾಡಿರುವ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ ಆಗಿದ್ದಾರೆ. ಅದಕ್ಕೆ ಪ್ರತಿಯಾಗಿ ಸಚಿವರು ಕೂಡ ಪೋಸ್ಟ್ ಮಾಡಿ, ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶನಿವಾರ ಸಂಜೆ ೬ ಗಂಟೆ ಸುಮಾರಿಗೆ ರಾಜ್ಯ ಬಿಜೆಪಿ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ೬ ಸಚಿವರ ಫೋಟೋ ಬಳಸಿ ಪೋಸ್ಟರ್ ಅಪ್ಲೋಡ್ ಮಾಡಿದೆ. ಪ್ರವಾಹದಿಂದ ಜಿಲ್ಲೆಗಳು ಮುಳುಗುತ್ತಿದ್ದರೂ ಅತ್ತ ಕಡೆ ಇನ್ನೂ ಕಾಲಿಡದೆ ಕಾಣೆಯಾಗಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿದೆ. ದಯವಿಟ್ಟು ಇವರನ್ನು ಹುಡುಕಿಕೊಡಿ ಎಂಬ ಅಡಿ ಬರಹ ಬೇರೆ. ಉತ್ತರ ಕನ್ನಡ ಉಸ್ತುವಾರಿ ಮಂಕಾಳ ವೈದ್ಯ ಸಹಿತ ಬೆಳಗಾವಿ ಉಸ್ತುವಾರಿ ಸತೀಶ ಜಾರಕಿಹೊಳಿ, ಉಡುಪಿ ಉಸ್ತುವಾರಿ ಲಕ್ಷ್ಮಿ ಹೆಬ್ಬಾಳಕರ್, ಶಿವಮೊಗ್ಗ ಉಸ್ತುವಾರಿ ಮಧು ಬಂಗಾರಪ್ಪ, ಕೊಡಗು ಉಸ್ತುವಾರಿ ಕೆ.ಜೆ.ಜಾರ್ಜ್ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ದಿನೇಶ ಗುಂಡೂರಾವ್ ಅವರ ಫೋಟೊ ಈ ಪೋಸ್ಟರ್ ನಲ್ಲಿದೆ.
ಇದನ್ನೂ ಓದಿ : ಮಾರಿ ಮೂರ್ತಿ ಬಿಂಬ ಪೂರ್ಣ
ಬೆಳಗಾವಿ – ಚಿಕ್ಕೋಡಿ ಮುಳುಗುತ್ತಿದೆ, ಉಡುಪಿ- ಸಮುದ್ರದ ದಡ ಸೇರುತ್ತಿದೆ, ದಕ್ಷಿಣ ಕನ್ನಡದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ, ಶಿವಮೊಗ್ಗದಲ್ಲಿ ತೋಟ-ಗದ್ದೆ-ಮನೆಗಳು ಮುಳುಗಿವೆ, ಉತ್ತರ ಕನ್ನಡದಲ್ಲಿ ಗುಡ್ಡ ಕುಸಿದು, ಬದುಕು ಮೂರಾಬಟ್ಟೆಯಾಗಿದೆ, ಚಿಕ್ಕಮಗಳೂರಿನಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ.ಇಷ್ಟಾದರೂ ಜಿಲ್ಲೆಗೆ ಆಗಮಿಸದೆ, ಕಾಣೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಕಾಂಗ್ರೆಸಿಗರೇ!!! ಎಂಬ ವಿವರಣೆ(description) ನೀಡಲಾಗಿದೆ. ಇದಕ್ಕೆ CongressFailsKarnataka ಎಂಬ ಹ್ಯಾಶಟ್ಯಾಗ್ (hashtag) ಬಳಸಲಾಗಿದೆ. ಪೋಸ್ಟ್ ಮಾಡಿದ ಐದು ಗಂಟೆಯೊಳಗೆ ಈ ಪೋಸ್ಟ್ ಗೆ ೨ ಸಾವಿರಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. ೪೦೦ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.
ಇದನ್ನೂ ಓದಿ : ೭ ದಿನ ಪೂರೈಸಿದ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ
ಸಚಿವರಿಂದಲೂ ಕಾಮೆಂಟ್!
ಈ ಪೋಸ್ಟ್ ಗೆ ಕಮೆಂಟ್ ಬಾಕ್ಸ್ ನಲ್ಲಿ ವಾದ-ಪ್ರತಿವಾದ ಶುರುವಾಗಿದೆ. ಪೋಸ್ಟ್ ಪರ- ವಿರೋಧ ಕಮೆಂಟ್ ಗಳು ಬರುತ್ತಿವೆ. ಈವರೆಗೆ ೨೨೦ಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. ಅವರಲ್ಲಿ ಸಚಿವ ಮಂಕಾಳ ವೈದ್ಯ ಕೂಡ ಕಮೆಂಟ್ ಮಾಡಿರುವುದು ವಿಶೇಷ. ಅದೇ ಕಮೆಂಟನ್ಮು ಸಚಿವರು ತಮ್ಮ ಖಾತೆಯಲ್ಲೂ ಒಂದು ಪೋಸ್ಟರ್ ಸಹಿತ ಅಪ್ಲೋಡ್ ಮಾಡಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಆಶೀರ್ವಾದ ಪಡೆದ ಕಾಗೇರಿ
ಸಚಿವರ ತಿರುಗೇಟು :
ಬಿಜೆಪಿ ಅಪ್ಲೋಡ್ ಮಾಡಿದ ಕಾಣೆಯಾಗಿದ್ದಾರೆ ಪೋಸ್ಟರ್ ಜೊತೆಗೆ ಅಂಕೋಲಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾರ ಹಾಕಿಸಿಕೊಳ್ಳುವ ಫೋಟೊ ಬಳಸಿದ ಪೋಸ್ಟರ್ ಅಪ್ಲೋಡ್ ಮಾಡಿ ಸಚಿವ ಮಂಕಾಳ ವೈದ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸುವ ಬಿಜೆಪಿಯವರ ಮನಸ್ಥಿತಿಗೆ ಏನೇನ್ನಬೇಕು? ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿಯ ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿಯೇ. ಸಾವಿನ ಮನೆಯಲ್ಲಿ, ಸೂತಕದ ಛಾಯೆಯಲ್ಲೆಲ್ಲ ರಾಜಕೀಯ ಲಾಭ ಲೆಕ್ಕ ಹಾಕುವ ಬಿಜೆಪಿ ಮನಸ್ಥಿತಿ ನಿಜಕ್ಕೂ ಶೋಚನೀಯ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ : ಹಾಡುವಳ್ಳಿಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ದುರಂತ ನಡೆದ ೧೨ ತಾಸಿನೊಳಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ತಕ್ಷಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ. ದುರಂತದಲ್ಲಿ ಅಸುನೀಗಿದವರ ಕುಟುಂಬಕ್ಕೆ ೨೪ ಗಂಟೆಯೊಳಗೆ ಸಂಕಷ್ಟ ಪರಿಹಾರ ನೀಡಿ ಸಾಂತ್ವನ ಹೇಳಿದ್ದೇವೆ. ಎರಡು ದಿನ ಬಿಟ್ಟು ಮತ್ತೆ ಘಟನಾ ಸ್ಥಳಕ್ಕೆ ಮತ್ತು ದುರಂತದಲ್ಲಿ ನಿರಾಶ್ರಿತರಾದ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಸರ್ಕಾರದ ನೆರವಿನ ಜೊತೆಗೆ ವೈಯಕ್ತಿಕವಾಗಿಯೂ ಕಿಂಚಿತ್ ಸಹಾಯ ಮಾಡಿದ್ದೇನೆ ಹೊರತೂ ಇಡೀ ಜಿಲ್ಲೆ ಆತಂಕದಲ್ಲಿರುವಾಗ ರಾಜಕೀಯ ಲಾಭ ಪಡೆಯುವ ಸಣ್ಣತನ ಮಾಡಿಲ್ಲ ಎಂದು ಅವರು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ : ಒಳಚರಂಡಿ ಅವಾಂತರ, ಬಾವಿ ನೀರು ಕಲುಷಿತ
೧೧ ವರ್ಷಗಳ ಕಾಲ ನಿಮ್ಮದೇ ನಾಯಕನ ಮಾಲೀಕತ್ವದ IRB ಕಂಪನಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತ ಬಂದರೂ, ಅನೇಕ ಸಾವುಗಳು ಸಂಭವಿಸುತ್ತ ಬಂದರೂ ನಿಮ್ಮ ಪಕ್ಷದ ಒಂದೇ ಒಂದು ಶಾಸಕರು, ಸಂಸದರು ಇದುವರೆಗೂ ಧ್ವನಿ ಎತ್ತಿಲ್ಲ. ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಶಿರೂರಿಗೆ ಬಂದು ಸಾವಿನ ನೋವಿನಲ್ಲಿದ್ದವರಿಗೆ ಸಾಂತ್ವನ ಹೇಳುವುದು ಬಿಟ್ಟು ಪಕ್ಷದ ಶಾಲು ಹಾಕಿ ಸನ್ಮಾನ ಮಾಡಿಸಿಕೊಂಡು ನೆನಪಿನ ಕಾಣಿಕೆ ತಕೊಂಡು ಹೋದರಲ್ಲ…. ಇದೇನಾ ಜನ ಸಾಮಾನ್ಯರ ಬಗ್ಗೆ ನಿಮಗಿರುವ ಕಾಳಜಿ. ನಮ್ಮನ್ನು ಟೀಕಿಸುವುದಕ್ಕೆ ನಿಮಗೆಲ್ಲಿಯ ನೈತಿಕತೆ ಇದೆ ಸ್ವಾಮಿ? ಎಂದು ಅವರು ಪ್ರಶ್ನಿಸಿದ್ದಾರೆ.