ಭಟ್ಕಳ: ತಾಲೂಕಿನ‌ ಮಾವಿನಕುರ್ವೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ (health camp) ಇತ್ತೀಚಿಗೆ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಮಾವಿನಕುರ್ವೆಯ ಕೊಂಕಣಿ ಖಾರ್ವಿ ಸಮಾಜ, ಅಮರಲಿಂಗೇಶ್ವರ ಯುವಕ ಮಂಡಲ ಮತ್ತು ಶಿರಾಲಿಯ ಸಮುದಾಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ(health camp) ನಡೆಯಿತು. ಕಾರ್ಯಕ್ರಮವನ್ನು ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಬಾಲಚಂದ್ರ ಮೇಸ್ತ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ : ಗುಡ್ಡಕುಸಿತ; ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ

ಕೊಂಕಣಿ ಖಾರ್ವಿ ಸಮಾಜದ ತಾಲೂಕು ಅಧ್ಯಕ್ಷ ಸುಬ್ರಾಯ ಖಾರ್ವಿ, ಮುಖಂಡರಾದ ವಸಂತ ಖಾರ್ವಿ, ತಿಮ್ಮಪ್ಪ ಖಾರ್ವಿ, ಅಮರಲಿಂಗೇಶ್ವರ ಯುವಕ ಮಂಡಳದ ಅಧ್ಯಕ್ಷ ಅಜೇಯ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು. ರಾಮದಾಸ ಖಾರ್ವಿ ಸ್ವಾಗತಿಸಿದರು. ಪುರಂದರ ಖಾರ್ವಿ ವಂದಿಸಿದರು. ಮಾವಿನಕುರ್ವೆ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಮಾನಸ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ : ಕಾರವಾರ-ಬೆಂಗಳೂರು ನಡುವೆ ರೈಲು ಸಂಚಾರ ರದ್ದು!