ಭಟ್ಕಳ: ವಿದ್ಯಾರ್ಥಿಗೊಂದು ಗುರಿ, ಮಾರ್ಗದರ್ಶನಕ್ಕೆ ಗುರು ಮತ್ತು ಗುರಿಯ ಆಯ್ಕೆಗೆ ಕಾರಣಗಳು ಸ್ಪಷ್ಟವಾಗಿದ್ದರೆ ಯಶಸ್ಸು ಸುಲಭವಾಗುತ್ತದೆ ಎಂದು ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ (P U College) ಹಳೆಯ ವಿದ್ಯಾರ್ಥಿ ಸಿ ಎ ಶಿಯಾಬುದ್ದೀನ ಖಾನ್ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ “ಸಾಧನಾ-೨೦೨೫” ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಯಾವ ಗುರಿಯನ್ನಾದರೂ ಇಟ್ಟುಕೊಳ್ಳಬಹುದು. ಅದನ್ನು ಸಾಧಿಸುವ ಕುರಿತು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ. ಆದರೆ, ವಿದ್ಯಾರ್ಥಿಯಾದವನಿಗೆ ತಾನು ಆಯ್ಕೆ ಮಾಡಿಕೊಂಡ ಗುರಿ ಯಾಕೆ? ಎನ್ನುವ ಸ್ಪಷ್ಟತೆ ಅವನನ್ನು ಗುರಿಯಡೆಗೆ ಸುಲಭವಾಗಿ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದರು.

ಇದನ್ನು ಓದಿ: Drink drive/ ದಂಡದ ಹಣ ಕೋರ್ಟ್‌ಗೆ ಜಮಾ ಮಾಡದೇ ಲೋಪ

ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಸುಭಾಷ ಶೆಟ್ಟಿ ಮಾತನಾಡುತ್ತಾ, ಸಂಸ್ಥೆ ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ನೀಡುವ ಅವಕಾಶವನ್ನು ಶ್ಲಾಘಿಸಿದರು.

ಇದನ್ನು ಓದಿ: NSS/ ಎನ್ಎಸ್ಎಸ್ ವಾರ್ಷಿಕ ಶಿಬಿರ ಸಂಪನ್ನ

ಗೌರವಾನ್ವಿತ ಅತಿಥಿಗಳಾದ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡುತ್ತಾ, ಪಿ ಯು ಕಾಲೇಜಿನಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ದಾಖಲಾತಿಯನ್ನು ಮನಗಂಡು ಉತ್ತಮ ಸೌಕರ್ಯವನ್ನು ಒದಗಿಸಬೇಕೆನ್ನುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬಂದರ್ ರಸ್ತೆಯಲ್ಲಿ ಅತ್ಯಂತ ಸುಸಜ್ಜಿತವಾದ ಕಟ್ಟಡವನ್ನು ಪಿ ಯು ಕಾಲೇಜಿಗಾಗಿ (P U College) ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ: Bhatkal Journalists/ ಭಟ್ಕಳ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಟ್ರಸ್ಟಿ ಸುಮಿತ್ರಾ ಕೌಶಿಕ ಮತ್ತು ಚೇರಮನ್ ಡಾ ಸುರೇಶ ನಾಯಕ ಶುಭ ಹಾರೈಸಿದರು. ಮಹಾವಿದ್ಯಾಲಯದ ವಿಭಾಗವಾರು ಉತ್ತಮ ವಿದ್ಯಾರ್ಥಿಗಳಾಗಿ ಕಲಾ ವಿಭಾಗದಲ್ಲಿ ಭಾವನಾ ನಾಯ್ಕ, ವಾಣಿಜ್ಯ ಸಂಖ್ಯಾ ಶಾಸ್ತç ವಿಭಾಗದಲ್ಲಿ ಸಂಜನಾ ನಾಯ್ಕ, ವಾಣಿಜ್ಯ ಗಣಕಯಂತ್ರ ವಿಭಾಗದಲ್ಲಿ ಅನನ್ಯ ನಾಯ್ಕ, ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ನಾಯ್ಕ ಮತ್ತು ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಯಾಗಿ ಅಂಕಿತಾ ಕಾಮತ ಆಯ್ಕೆಯಾದರು.

ಇದನ್ನು ಓದಿ: Vidyotsava/ ವಿಜೃಂಭಣೆಯಿಂದ ನಡೆದ ವಿದ್ಯೋತ್ಸವ ೨೦೨೫

ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಒಂದೂ ದಿನ ರಜೆ ತೆಗೆದುಕೊಳ್ಳದ ಕನ್ನಡ ಉಪನ್ಯಾಸಕ ರಾಮ ನಾಯ್ಕ ಮತ್ತು ಅರ್ಥಶಾಸ್ತ್ರ ಉಪನ್ಯಾಸಕರಾಗಿ ವಿದ್ಯಾರ್ಥಿಗಳೊಂದಿಗೆ ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ವಿಶ್ವನಾಥ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಇದನ್ನು ಓದಿ: Cleaning/ ಹಿಂದೂ ರುದ್ರಭೂಮಿ ಸ್ವಚ್ಛಗೊಳಿಸಿದ ಕ್ರಿಯೇಟಿವ್ ಬಾಯ್ಸ್

ಪ್ರಾಂಶುಪಾಲ ವಿರೇಂದ್ರ ಶಾನಭಾಗ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ವಸುಧಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಚರಣ ನಾಯ್ಕ ಸ್ವಾಗತಿಸಿದರು. ಶ್ರೀಧರ ಕಾಮತ ವಂದಿಸಿದರು. ಅದಿತಿ ಶೆಟ್ಟಿ, ತನುಜಾ ಭಟ್ ಮತ್ತು ಉಪನ್ಯಾಸಕರಾದ ವಿಶ್ವನಾಥ ಆಚಾರ್ಯ, ದೀಕ್ಷಾ ಭಂಡಾರಿ, ವಿಧಿ ಶಾನಭಾಗ ಮತ್ತು ಕೃಷ್ಣಪ್ಪಾ ನಾಯ್ಕ ನಿರೂಪಿಸಿದರು.

ಇದನ್ನು ಓದಿ: Lecture/ ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ