ಭಟ್ಕಳ : ತಾಲೂಕಿನ ಸೋಡಿಗದ್ದೆಯ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಭಟ್ಕಳದ ಹೆಗಡೆ ಐ ಪೌಂಡೇಷನ್, ಕುಂದಾಪುರದ ವಿ+ ಹೆಲ್ತ್ ಸೆಂಟರ್ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ (Health Camp) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲ ನಾಗರಾಜ ಎಸ್ ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ಇಂತಹ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದು‌ ನೋಡಲು ಅತ್ಯಂತ ಹರ್ಷವೆನಿಸುತ್ತದೆ. ಇವತ್ತಿನ ಆರೋಗ್ಯ ತಪಾಸಣಾ ಶಿಬಿರ(Health Camp)ದಿಂದಾಗಿ ಜನರಿಗೆ ತುಂಬಾ ಅನುಕೂಲವಾಗುತ್ತಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಇದನ್ನೂ ಓದಿ : ಧಾರೇಶ್ವರದಲ್ಲಿ ಗುಡ್ಡಕುಸಿತ

ಕಾರ್ಯಕ್ರಮದಲ್ಲಿ ಕಿವಿ, ಮೂಗು, ಗಂಟಲು ಮತ್ತು ಕಣ್ಣಿಗೆ ಸಂಬಂಧಿಸದಂತೆ ತಪಾಸಣೆ ನಡೆಸಲಾಯಿತು. ತಜ್ಞ ವೈದ್ಯರಾದ ಡಾ. ಅಜಿತ್ ವೈದ್ಯ ಹಾಗೂ ಡಾ. ಹರ್ಷಿತ್ ಹೆಗಡೆ  ಶಿಬಿರಾರ್ಥಿಗಳನ್ನು ತಪಾಸಣೆಗೊಳಪಡಿಸಿ, ಸೂಕ್ತ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಉತ್ತರಕನ್ನಡ ನಿರ್ದೇಶಕ ಮಹೇಶ ಎಮ್.ಡಿ., ಯೋಜನಾಧಿಕಾರಿ ಗಣೇಶ ನಾಯ್ಕ, ಸಮನ್ವಯಾಧಿಕಾರಿ ವಿನೋದಾ, ಸೇವಾ ಪ್ರತಿನಿಧಿ ಪ್ರಭಾಕರ, ಪತ್ರಕರ್ತ ಈಶ್ವರ ನಾಯ್ಕ ಮತ್ತಿತರರು ಇದ್ದರು.