ಭಟ್ಕಳ (bhatkal): ವರಮಹಾಲಕ್ಷ್ಮಿ ಪೂಜೆ, ವೀಕೆಂಡ್ ರಜೆಯ ಮೇಲೆ ರಾಜಧಾನಿ ಬೆಂಗಳೂರಿಗೆ ಬಂದಿರುವ ಊರಿಗೆ ಬಂದಿದ್ದ ಕರಾವಳಿಗರಿಗೆ ಇದು ಶಾಕಿಂಗ್ ನ್ಯೂಸ್! ರಜೆ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳಲು ರೈಲ್ವೆ ಮುಂಗಡ ಟಿಕೆಟ್ ಪಡೆದವರು ಇದೀಗ ಪರದಾಡುವಂತಾಗಿದೆ.(train cancelled)

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇತ್ತೀಚೆಗಷ್ಟೇ ಗುಡ್ಡಕುಸಿತದಿಂದ ವಾರಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡು ಕರಾವಳಿ (coastal) ಮತ್ತು ರಾಜಧಾನಿ (state capital) ನಡುವೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದೇ ಸ್ಥಳದಲ್ಲಿ ಗುಡ್ಡಕುಸಿತವಾಗಿದೆ. ಯಶವಂತಪುರದಿಂದ ಕಾರವಾರಕ್ಕೆ ಹೊರಟಿದ್ದ ರೈಲು ಅರ್ಧದಲ್ಲೇ ನಿಲ್ಲುವಂತಾಗಿದೆ. ಇದಷ್ಟೇ ಅಲ್ಲ ಈ ಭಾಗದಿಂದ ಸಂಚರಿಸುವ ಎಲ್ಲ ರೈಲುಗಳನ್ನು ಆ.೧೯ರವರೆಗೆ ರದ್ದುಗೊಳಿಸಲಾಗಿದೆ (train cancelled).

ವಿಡಿಯೋ ಸಹಿತ ಇದನ್ನೂ ಓದಿ : ಸೋಡಿಗದ್ದೆಯಲ್ಲಿ ವರಮಹಾಲಕ್ಷ್ಮೀ ಪೂಜೆ

ಇಂದು ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಬಳ್ಳುಪೇಟೆ-ಸಕಲೇಶಪುರ ನಡುವೆ ಗುಡ್ಡಕುಸಿತವಾಗಿದೆ. ಹೀಗಾಗಿ ಇಂದು ಹೊರಡಬೇಕಿದ್ದ ೧೬೫೮೫ ಸಂಖ್ಯೆಯ ಬೆಂಗಳೂರು-ಮುರುಡೇಶ್ವರ, ೧೬೫೮೬ ಸಂಖ್ಯೆಯ ಮುರುಡೇಶ್ವರ-ಬೆಂಗಳೂರು ಮತ್ತು ನಾಳೆ ಹೊರಡಬೇಕಿದ್ದ ೧೬೫೧೬ ಸಂಖ್ಯೆಯ ಕಾರವಾರ-ಯಶ್ವಂತಪುರ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಇದನ್ನೂ ಓದಿ : ಮುಸ್ಲಿಂ ಮತಗಳಿಂದ ಗೆದ್ದು ಸಚಿವರಾಗಿರುವವರು ಏಕೆ ಸುಮ್ಮನಿದ್ದಾರೆ?

ಇದಲ್ಲದೆ, ಇಂದು ಯಶವಂತಪುರದಿಂದ ಕಾರವಾರಕ್ಕೆ ಹೊರಟಿದ್ದ ೧೬೫೧೫ ಸಂಖ್ಯೆಯ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಹಾಸನದಲ್ಲೇ ಮೊಟಕುಗಳಿಸಲಾಯಿತು.
೧೬೫೭೬ ಸಂಖ್ಯೆಯ ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಸಕಲೇಶಪುರ ನಿಲ್ದಾಣದಲ್ಲಿ ಸ್ಥಗಿತಗೊಂಡಿತು.

ಇದನ್ನೂ ಓದಿ :  ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ವರಮಹಾಲಕ್ಷ್ಮಿ ಪೂಜೆ

ಮಾರ್ಗ ಬದಲಾವಣೆ:
ಇಂದಿನ ಸಂಖ್ಯೆ ೦೭೩೭೮ ಮಂಗಳೂರು ಸೆಂಟ್ರಲ್ – ವಿಜಯಪುರ ರೈಲು ಕಾರವಾರ, ಮಡಗಾಂವ, ಲೋಂಡಾ, ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದೆ. ೧೬೫೯೫ ಸಂಖ್ಯೆಯ ಬೆಂಗಳೂರು-ಕಾರವಾರ ರೈಲು ಅರಸಿಕೆರೆ, ಹುಬ್ಬಳ್ಳಿ, ಲೋಂಡಾ, ಮಡಗಾಂವ ಮೂಲಕ ಕಾರವಾರಕ್ಕೆ ಬರುತ್ತಿದೆ. ಕಾರವಾರದಿಂದ ಹೊರಡುವ ೧೬೫೯೬ ರೈಲು ಇದೇ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದೆ. ಬೆಂಗಳೂರು-ಕಣ್ಣೂರು ನಡುವಿನ ೧೬೫೧೧ ಮತ್ತು ೧೬೫೧೨ ಸಂಖ್ಯೆಯ ರೈಲುಗಳು ಶೋರಾನೂರು, ಸೇಲಂ, ಜೋಳರಪೆಟ್ಟಾಯಿ ಮಾರ್ಗವಾಗಿ ಸಂಚರಿಸುತ್ತಿದೆ.

ಇದನ್ನೂ ಓದಿ : ಆಗಸ್ಟ್‌ ೧೬ರಂದು ವಿವಿಧೆಡೆ ಅಡಿಕೆ ಧಾರಣೆ

ರದ್ದಾದ ರೈಲುಗಳು :
ಗುಡ್ಡಕುಸಿತವಾದ ಸ್ಥಳದ ಮಾರ್ಗವಾಗಿ ಹೊರಬೇಕಿದ್ದ ೧೨ ರೈಲುಗಳ ಸಂಚಾರವನ್ನು ಆ.೧೯ರವರೆಗೆ ರದ್ದುಮಾಡಲಾಗಿದೆ. ಆ.೧೭ರ ಬೆಂಗಳೂರು- ಮುರುಡೇಶ್ವರ (೧೬೫೮೫), ಮುರುಡೇಶ್ವರ- ಬೆಂಗಳೂರು (೧೬೫೮೬), ಬೆಂಗಳೂರು-ಕಾರವಾರ (೧೬೫೯೫), ಕಾರವಾರ-ಬೆಂಗಳೂರು (೧೬೫೯೬), ಬೆಂಗಳೂರು-ಕಣ್ಣೂರು (೧೬೫೧೧), ಕಣ್ಣೂರು- ಬೆಂಗಳೂರು (೧೬೫೧೨), ಯಶವಂತಪುರ- ಮಂಗಳೂರು ಜಂ. (೧೬೫೩೯), ವಿಜಯಪುರ- ಮಂಗಳೂರು ಸೆಂ.(೦೭೩೭೭) ರದ್ದಾಗಿದೆ. ಆ.೧೮ರ ಮಂಗಳೂರು- ಯಶವಂತಪುರ (೧೬೫೪೦), ಮಂಗಳೂರು ಸೆಂ.-ವಿಜಯಪುರ (೦೭೩೭೮), ಯಶವಂತಪುರ-ಮಂಗಳೂರು ಜಂ. (೧೬೫೭೫) ಮತ್ತು ಆ.೧೯ರ ಮಂಗಳೂರು ಜಂ.-ಯಶವಂತಪುರ (೧೬೫೭೬) ರೈಲುಗಳ ಸಂಚಾರ ರದ್ದು ಮಾಡಲಾಗಿದೆ.