ಹೊನ್ನಾವರ (Honnavar crime) : ಶಾಲಾವರಣದಲ್ಲಿ ಜೆಸಿಬಿಯಿಂದ ನೆಲ ಅಗೆಯುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಎಸ್‌ಡಿಎಂಸಿ ಅಧ್ಯಕ್ಷನಿಗೆ ನಾಲ್ವರು ಸೇರಿ ಅವಾಚ್ಯ ಶಬ್ದಗಳಿಂದ ಬೈದಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚಂದಾವರದ ಹೂವಿನ ಹಿತ್ಲು ನಿವಾಸಿ ಅಬ್ದುಲ್ ವಾಹೀದ್ ಜಾಫರಸಾಬ್ ಮುನಿಯಾರ (೪೨) ಹಲ್ಲೆಗೊಳಗಾದವರು (Attacked). ವ್ಯಾಪಾರಸ್ಥರಾದ ಇವರು ಕಳೆದ ಎರಡು ವರ್ಷಗಳಿಂದ ಚಂದಾವರದ ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (Primary School) ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದಾರೆ. ಸ್ಥಳೀಯರಾದ ಅಖೀಲ್ ಅಬ್ದುಲ್ ಖಾದರ ಖಾಜಿ ಚಂದಾವರ, ಇಮಾಮಸಾಬ್ ಜೈನುದ್ದೀನ್ ಘನಿ ಮಹಮುದಸಾಬ ಚಂದಾವರ, ಸಂಶಿ ನಿವಾಸಿ ಅಬ್ದುಲ್ ಖಾದರ ಮತ್ತು ಕೋಟೆಬಾಗಿಲು ನಿವಾಸಿ ಅಬ್ದುಲ್ ರಶೀದ ಅಯ್ಯೂಬಸಾಬ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ : ಮನೆಯಿಂದ ಹೋದ ಗಂಡ ನಾಪತ್ತೆ
ಆಗಸ್ಟ್ ೧೪ರಂದು ಬೆಳಿಗ್ಗೆ ೧೦.೩೦ರ ಸುಮಾರಿಗೆ ಶಾಲೆಯ ಆವರಣದೊಳಗೆ ನಾಲ್ವರು ಜೆಸಿಬಿ ನಿಲ್ಲಿಸಿಕೊಂಡು ನಿಂತಿದ್ದಾರೆ ಎಂಬ ಮಾಹಿತಿ ಎಸ್‌ಡಿಎಂಸಿ ಸದಸ್ಯ ಕಲೀಮ್ ಕರೆ ಮಾಡಿ ತಿಳಿಸಿದ್ದರು. ಈ ಮಾಹಿತಿ ಪಡೆದ ಅಧ್ಯಕ್ಷ ಅಬ್ದುಲ್ ವಾಹೀದ್ ಸ್ಥಳಕ್ಕೆ ಭೇಟಿ ನೀಡಿದಾಗ ಜೆಸಿಬಿಯಿಂದ ಕರ್ಕಶ ಧ್ವನಿಯಿಂದ ಮಕ್ಕಳ ಗಮನ ಭಂಗಪಡಿಸುತ್ತಿರುವುದಕ್ಕೆ ಪ್ರಶ್ನಿಸಿದ್ದರು. ಶಾಲಾ ಕಮಿಟಿಯವರ ಪರವಾನಿಗೆ ಇಲ್ಲದೆ ಶಾಲಾ ಆವಾರದಲ್ಲಿ ಯಾಕೆ ನೆಲ ಅಗಿಯುತ್ತೀದ್ದೀರಿ ಎಂದು ಕೇಳಿದ್ದಕ್ಕೆ ಆರೋಪಿತರು ಓಮ್ಮೇಲೆ ಏರಿ ಬಂದಿರುವುದಾಗಿ ದೂರಲಾಗಿದೆ. ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ವಾಹೀದ್ ದೂರಿನಲ್ಲಿ ತಿಳಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Honnavar crime), ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಲಾರಿ ಡಿಕ್ಕಿಯಾಗಿ ಬೈಕ್ ಸವಾರರಿಗೆ ಗಾಯ