ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ಘಟಕದ ಭಟ್ಕಳ ಗ್ರಾಮಾಂತರ (Bhatkal rural) ವೃತ್ತದ ಹೆಸರು ಬದಲಾಗಿದೆ. ಈವರೆಗೆ ಇದ್ದ ಭಟ್ಕಳ ಗ್ರಾಮಾಂತರ ವೃತ್ತ ಎಂಬ ಹೆಸರನ್ನು ಮುರುಡೇಶ್ವರ ಪೊಲೀಸ್ ವೃತ್ತ (Murudeshwara Circle) ಎಂದು ಬದಲಾಯಿಸಲಾಗಿದೆ. ಏಪ್ರಿಲ್ 24ರ ಸರ್ಕಾರದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆಯಂತೆ, ಮೂರು ತಿಂಗಳ ಹಿಂದೆಯೇ ಈ ಆದೇಶ ಆಗಿತ್ತು. ಆದರೆ, ಹೆಸರು ಬದಲಾವಣೆ ಕಾರ್ಯಾರೂಪಕ್ಕೆ ಬಂದಿರಲಿಲ್ಲ. ಹೊಸ ಅಧೀಕ್ಷಕರು ಬಂದ ನಂತರ ಈ ಕ್ರಮ ಕೈಗೊಂಡಿದ್ದಾರೆ (Murudeshwara Circle). ಹೆಸರು ಬದಲಾದರೂ, ಸಂಪರ್ಕ ಸಂಖ್ಯೆ (೦೮೩೮೫-೨೨೬೮೧೩) ಹಿಂದಿನಂತೆ ಇರಲಿದೆ. ಹೆಸರು ಬದಲಾವಣೆ ಹಿನ್ನೆಲೆ ಕಚೇರಿ ಮುರುಡೇಶ್ವರಕ್ಕೆ ಸ್ಥಳಾಂತರಗೊಳ್ಳುತ್ತಾ ಎಂಬುದು ಕಾದುನೋಡಬೇಕಿದೆ.

ವಿಡಿಯೋ ಸಹಿತ ಇದನ್ನು ಓದಿ: Goddess Mariyamma/ ಮಾರಿಯಮ್ಮನ ದರ್ಶನಕ್ಕೆ ಜನಸಾಗರ