ಹೊನ್ನಾವರ (Honnavar): ಎದೆಯುರಿಯಿಂದ ಅಸ್ವಸ್ಥಗೊಂಡ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನಲ್ಲಿ ನಿನ್ನೆ ಶನಿವಾರ ನಡೆದಿದೆ (labourer died).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೊದಕೆಶಿರೂರಿನ ಶಿರೂರು ಗ್ರಾಮ ದೇವರು ಹನ್ಮಂತ ನಾಯ್ಕ (೫೯) ಮೃತ ದುರ್ದೈವಿ. ಇವರು ನಿನ್ನೆ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದರು. ಮಧ್ಯಾಹ್ನ ೧.೪೫ರ ಸುಮಾರಿಗೆ ಮನೆಗೆ ಬರುತ್ತಲೇ ಎದೆ ಉರಿ ಉಂಟಾಗುತ್ತಿದೆ, ಕೆಲಸ ಮಾಡಲು ಆಗುತ್ತಿಲ್ಲ ಅಂತ ಮನೆಯಲ್ಲಿ ಹೇಳಿದರು. ಊಟ ಮಾಡಿದರೆ ಎಲ್ಲವೂ ಸರಿಯಾಗುತ್ತೆ ಅಂತ ಮಗ ರಾಘವೇಂದ್ರ ಹೇಳಿದಾಗ ಊಟ ಬಡಿಸಲಾಗಿತ್ತು. ಆದರೆ ಎದೆ ಬಹಳ ಉರಿಯುತ್ತಿದ್ದು, ಊಟ ಮಾಡುವುದಿಲ್ಲ ಎಂದು ನಿರಾಕರಿಸಿದರು.
ಇದನ್ನೂ ಓದಿ : ಕೋಲ್ಕತ್ತಾ ಘಟನೆ ಖಂಡಿಸಿ ‘ಮೊಂಬತ್ತಿ’ ಪ್ರತಿಭಟನೆ
ತಂದೆ ಅಸ್ವಸ್ಥಗೊಂಡಿದ್ದನ್ನು ನೋಡಿದ ರಾಘವೇಂದ್ರ, ಚಿಕ್ಕಪ್ಪ ಲಕ್ಷ್ಮಣ ನಾಯ್ಕ ಜೊತೆ ವಾಹನದ ಮೇಲೆ ಹೊನ್ನಾವರ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾರೆಂಮದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ (labourer died). ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಗ ರಾಘವೇಂದ್ರ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಬಾಂಗ್ಲಾ ಹಿಂಸಾಚಾರ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ