ಭಟ್ಕಳ(bhatkal): ತಾಲೂಕಿನ ಗೋಳಿಕುಂಬ್ರಿಯಲ್ಲಿ ಇತ್ತೀಚೆಗೆ ವೃತ್ತಿಯಿಂದ ನಿವೃತ್ತರಾದ ಪಿ.ಎನ್.ಭಟ್ಟ ಮತ್ತವರ ಪತ್ನಿಗೆ ಬಸ್ತಿಯಿಂದ ಉತ್ತರಕೊಪ್ಪ ತನಕದ ಹವ್ಯಕ ಸಮಾಜದ ವತಿಯಿಂದ ಸನ್ಮಾನ (honoured) ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮ ಉದ್ಘಾಟಿಸಿದ ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಂಭು ಎನ್. ಹೆಗಡೆ ಮಾತನಾಡಿ, ಸೇವಾ ನಿವೃತ್ತರಾದ ಶಿಕ್ಷಕ ಪರಮೇಶ್ವರ ನಾರಾಯಣ ಭಟ್ಟ ಶಿರಾಣಿ ಅವರು ಬಹುಮುಖ ಪ್ರತಿಭೆ ಉಳ್ಳವರಾಗಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ಸಮಾಜಕ್ಕೆ ಅವರ ಕೊಡುಗೆ ಸದಾ ದೊರೆಯಲಿ ಎಂದು ಹೇಳಿದರು.
ಇದನ್ನೂ ಓದಿ : ಸಾರ್ವಜನಿಕರಿಗೆ ನಿರ್ಬಂಧ; ಸಚಿವ ಮಂಕಾಳ ವೈದ್ಯ ಪರಿಶೀಲನೆ
ಪಿ.ಎನ್.ಭಟ್ಟರು ವೃತ್ತಿಯಲ್ಲಿ ಶಿಕ್ಷಕರಾದರೂ ಯಕ್ಷಗಾನ ಕಲಾವಿದರಾಗಿ, ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಅವರ ಬಹುಮುಖ ವ್ಯಕ್ತಿತ್ವ ಎಲ್ಲರೂ ಮೆಚ್ಚುವಂಥದ್ದು ಎಂದರಲ್ಲದೆ ಪತಿ-ಪತ್ನಿಯ ಕುರಿತು ಪ್ರತ್ಯೇಕ ಚುಟುಕನ್ನು ಹೇಳುವ ಮೂಲಕ ಎಲ್ಲರ ಮೆಚ್ಚುಗೆ ಪಡೆದರು.
ಇದನ್ನೂ ಓದಿ : ಮತ್ತೊಂದು ಬೈಕ್‌ಗೆ ಹಿಂಬದಿಯಿಂದ ಗುದ್ದಿದ ಬಸ್
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ, ಸೇವಾ ನಿವೃತ್ತಿ ಹೊಂದಿದ ಶಿಕ್ಷಕರನ್ನು ಈ ರೀತಿಯಾಗಿ ಸಮಾಜದವರು ಗೌರವಿಸುತ್ತಿರುವುದು ಮಾದರಿ ಕಾರ್ಯ. ಅವರ ಸೇವೆ ಸಮಾಜಕ್ಕೆ ಸದಾ ದೊರೆಯುತ್ತಿರಲಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಸಹಕಾರ ದೊರೆಯಲಿ ಎಂದು ಹಾರೈಸಿದರು.
ಇದನ್ನೂ ಓದಿ : ಉ.ಕ.ದಲ್ಲಿ ಬಹು ಅಂಗಾಂಗ ದಾನಕ್ಕೆ ಕಾಣದ ಉತ್ಸಾಹ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ ಪ್ರಕಾಶ ಭಟ್ಟ, ಹಿರಿಯ ಕೃಷಿಕ ನಾರಾಯಣ ಭಟ್ಟ ಮುಂತಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಪಿ.ಎನ್. ಭಟ್ಟ ಹಾಗೂ ಪತ್ನಿ ಮುಕ್ತಾ ಭಟ್ಟ ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು (honoured).
ಇದನ್ನೂ ಓದಿ : ಎದೆಯುರಿ ಕಾಣಿಸಿಕೊಂಡು ಮೃತಪಟ್ಟ ಕೂಲಿ ಕಾರ್ಮಿಕ
ಸ್ವಾಗತಿಸಿದ ಮಾಜಿ ಸೈನಿಕ ಎಂ.ವಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಿ.ಎನ್.ಭಟ್ಟ ಅವರು ಸೇವೆಗೆ ಸೇರಿದಾಗಿನಿಂದ ಗ್ರಾಮೀಣ ಭಾಗದ ಶಾಲೆಗಳಲ್ಲಿಯೇ ಸೇವೆ ಸಲ್ಲಿಸಿದ್ದು ವಿಶೇಷ. ಅನೇಕ ಸಂದರ್ಭಗಳಲ್ಲಿ ರಸ್ತೆ ಸಂಪರ್ಕವೇ ಇಲ್ಲದ ಶಾಲೆಗಳಿಗೆ ಕಿ.ಮೀ.ಗಟ್ಟಲೆ ನಡೆದುಕೊಂಡು ಹೋಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಇದನ್ನೂ ಓದಿ : ಕೋಲ್ಕತ್ತಾ ಘಟನೆ ಖಂಡಿಸಿ ‘ಮೊಂಬತ್ತಿ’ ಪ್ರತಿಭಟನೆ
ಸೀತಾ ಭಟ್ಟ ಪ್ರಾರ್ಥನೆ ಹಾಡಿದರು. ಶ್ರೀಕಾಂತ ಹೆಗಡೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಂತರ ಪ್ರಸಿದ್ಧ ಕಲಾವಿದರ ಯಕ್ಷಗಾನ ಗಾನ ವೈಭವ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.