ಹೊನ್ನಾವರ (Honnavar): ಶರಾವತಿ ಉದ್ದೇಶಿತ ಯೋಜನೆಗಳ (Sharavati projects) ವಿರುದ್ಧ ಇಲ್ಲಿನ ಶರಾವತಿ ಉಳಿಸಿ ಹೋರಾಟ ಸಮಿತಿ ಮತ್ತು ಶರಾವತಿ ನೆರೆಸಂತ್ರಸ್ತರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳ, ವಿವಿಧ ಸಂಘಟನೆಗಳ ಮತ್ತು ಪ್ರಮುಖರ ಪಕ್ಷಾತೀತ ತುರ್ತು ಸಭೆ ಪಟ್ಟಣದ ಸೋಷಿಯಲ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದ ಶರಾವತಿ ನದಿ ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳ ನಿಯೋಗ ಮತ್ತು ವಿವಿಧ ತಜ್ಞರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಶರಾವತಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಒಯ್ಯುವ ಮತ್ತು ಶರಾವತಿ ಪಂಪ್ಡ್ ವಿದ್ಯುತ್‌ ಯೋಜನೆಯ (Sharavati projects) ಸಾಧಕ ಭಾದಕಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಸಾಗರ (Sagar) ಮತ್ತು ಹೊನ್ನಾವರದ (Honnavar) ಶರಾವತಿ ಉಳಿಸಿ ಹೋರಾಟ ಸಮಿತಿ ಪ್ರಮುಖರು ಮಾತನಾಡಿದರು. ಉದ್ದೇಶಿತ ಯೋಜನೆಗಳ ವಿರುದ್ಧ ಪಕ್ಷಾತೀತವಾಗಿ ಚರ್ಚಿಸಿ ಜನಜಾಗೃತಿ ಮೂಡಿಸುವ ಬಗ್ಗೆ ಮತ್ತು ಸರ್ಕಾರದ ಗಮನ ಸೆಳೆಯುವ ಬಗ್ಗೆ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.

ಇದನ್ನೂ ಓದಿ : ದಿನಕರ‌ ದೇಸಾಯಿ ಸಂಸ್ಮರಣೆ ಯಶಸ್ವಿ

ಶಿವಮೊಗ್ಗ ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಅಖಿಲೇಶ್ ಚಿಪಳಿ ಮಾತನಾಡಿ, ಈ ಯೋಜನೆಯಿಂದ ಹಾನಿಯೇ ಹೊರತು ಯಾವ ಲಾಭ ಇಲ್ಲ. ಶರಾವತಿ ಕಣಿವೆ ಮೇಲೆ ದೊಡ್ಡ ದೌರ್ಜನ್ಯ ನಡೆಯುತ್ತಿದೆ. ಇದು ದೇಶದ ಆಸ್ತಿ. ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಇದನ್ನೂ ಓದಿ : ಅರಣ್ಯ ಇಲಾಖೆ ವಾಹನ ಚಾಲಕಗೆ ಶೌರ್ಯ ಪ್ರಶಸ್ತಿ

ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಯ ನೀರನ್ನು ಪೂರ್ವಾಭಿಮುಖವಾಗಿ ತೆಗೆದುಕೊಂಡು ಹೋಗಬಾರದು ಎನ್ನುವ ನೀತಿ ಇದೆ. ೩೦ ಟಿಎಮ್ ಸಿ ನೀರನ್ನು ೩ ಸಾವಿರ ಅಡಿ ಎತ್ತರಕ್ಕೆತ್ತಿ ಗುಡ್ಡಗಾಡುಗಳನ್ನು, ಕಣಿವೆಗಳನ್ನು ಅಗೆದು ಪೈಪ್ ಲೈನ್ ಮಾಡಬೇಕಾಗುತ್ತದೆ. ಇದು ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಸಮುದ್ರದ ನೀರು ಹಿಂದಕ್ಕೆ ಬರುವುದರಿಂದ ರೈತರ ಹೊಲಗದ್ದೆಗಳು ಹಾಳಾಗುತ್ತದೆ. ಇದು ಕಾರ್ಯಸಾಧು ಯೋಜನೆಯಲ್ಲ. ಇದನ್ನು ತಡೆಯಲು ಮಲೆನಾಡಿನ ಜನ ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದರು.

ಇದನ್ನೂ ಓದಿ :  ಸೆಪ್ಟೆಂಬರ್‌ ೧೩ರಂದು ವಿವಿಧೆಡೆ ಅಡಿಕೆ ಧಾರಣೆ

ಹೊನ್ನಾವರ ಶರಾವತಿ ಉಳಿಸಿ ಹೋರಾಟ ಸಮಿತಿಯ ಚಂದ್ರಕಾಂತ ಕೊಚರೇಕರ, ಯೋಗೇಶ ರಾಯ್ಕರ ಉಪ್ಪೋಣಿ, ವಿನೋದ ನಾಯ್ಕ ಮಾವಿನಹೊಳೆ, ವಿದ್ಯುತ್ ಶಕ್ತಿ ಸಲಹೆಗಾರ ಶಂಕರ ಶರ್ಮ, ಉಮಾ ಮಹೇಶ, ಎಸ್ ಡಿ ಹೆಗಡೆ, ಎನ್ ಎಸ್ ಹೆಗಡೆ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಸಮಾಜ ಸೇವಾ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.