ಭಟ್ಕಳ (Bhatkal) : ಪ್ರಧಾನಿ (prime minister) ನರೇಂದ್ರ ಮೋದಿ ಅವರ ಜನ್ಮದಿನದ (Modi’s birthday) ಪ್ರಯುಕ್ತ ಬಿಜೆಪಿ (BJP) ಭಟ್ಕಳ ಮಂಡಲದ ವತಿಯಿಂದ ಇಂದು ಮಂಗಳವಾರ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೋದಿಯವರ ಹುಟ್ಟು ಹಬ್ಬದ (Modi’s birthday) ನಿಮಿತ್ತ ಉನ್ನತಿಗಾಗಿ, ಆಯುರಾರೋಗ್ಯ, ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯ್ಕ, ಸುಬ್ರಾಯ ದೇವಾಡಿಗ, ಮಂಡಲ ಹಿಂದುಳಿದ ಮೋರ್ಚಾ ಅಧ್ಯಕ್ಷ ಉಮೇಶ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಪಕ್ಷದ ಪ್ರಮುಖರಾದ ರವಿ ನಾಯ್ಕ ಜಾಲಿ, ಸುರೇಶ ನಾಯ್ಕ ಕೋಣೆಮನೆ, ಮೋಹನ ನಾಯ್ಕ, ಗಣಪತಿ ದೇವಾಡಿಗ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಭಟ್ಕಳ ತಾಲೂಕಿನೆಲ್ಲೆಡೆ ಅನಂತ ಚತುರ್ದಶಿ ವ್ರತಾಚರಣೆ