ಭಟ್ಕಳ: ತಾಲೂಕಿನ ಮುರುಡೇಶ್ವರದ (murudeshwara) ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಂತರ್ ಶಾಲಾ ಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯು (Competition) ಯಶಸ್ವಿಯಾಗಿ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ, ಪಶ್ಚಿಮ ಘಟ್ಟ (Western Ghat) ಪ್ರಾದೇಶಿಕ ಕೇಂದ್ರ ಕೇರಳದ (Kerala) ವಿಜ್ಞಾನಿ ಡಾ ವಿಶ್ವನಾಥ್ ಡಿ ಹೆಗಡೆ ಆಗಮಿಸಿದ್ದರು. ಇವರು ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾರಂಭಿಕ ವರ್ಷಗಳಲ್ಲಿ ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ತಮ್ಮ ಸಂಶೋಧನೆಯ ಕುತೂಹಲಕಾರಿ ಘಟನೆಗಳು, ಕಾಲೇಜಿನ ಅನುಭವಗಳು, ಆರ್.ಎನ್.ಶೆಟ್ಟಿ ಅವರೊಂದಿಗೆ ಒಡನಾಟ ಹಾಗೂ ಅವರ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೇಟ್ ವಹಿಸಿದ್ದರು.
ಇದನ್ನು ಓದಿ: debate competition/ ಶ್ರೀವಲ್ಲಿ ಪ್ರೌಢಶಾಲೆಯ ನಾಗರಾಜ ನಾಯ್ಕ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ
ಸ್ಪರ್ಧೆಗೆ (competition) ವಿವಿಧ ಶಾಲೆಯ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಇದನ್ನು ಓದಿ: series of accidents/ ಭಟ್ಕಳದಲ್ಲಿ ಭೀಕರ ಸರಣಿ ಅಪಘಾತ



