ಕಾರವಾರ (Karwar) : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಕಾರವಾರ, ಸರಕಾರಿ ಐ.ಟಿ.ಐ ಕುಮಟಾ(Kumta) ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಶಿಶಿಕ್ಷು ಮೇಳ (Job fair) ಸೆ.೨೩ರಂದು ಕುಮಟಾದ ಸರಕಾರಿ ಐ.ಟಿ.ಐ.ನಲ್ಲಿ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉದ್ಯೋಗ ಶಿಶಿಕ್ಷು ಮೇಳದಲ್ಲಿ (job training fair) L&T, HMT, Toyota, kirloskar ಮುಂತಾದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಿವೆ. ಎಸ್.ಎಸ್.ಎಲ್.ಸಿ, ಪಿ..ಯು.ಸಿ, ಐ.ಟಿ.ಐ, ಡಿಪ್ಲೋಮಾ, ಬಿ.ಇ ಮ್ಯಾಕಾನಿಕಲ್, ಪದವಿ ಪಾಸಾದ
ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಇದನ್ನೂ ಓದಿ : Consumer Meeting/ ವಿದ್ಯುತ್‌ ಸಮಸ್ಯೆಯಿದ್ದಲ್ಲಿ ಸಭೆಗೆ ಬನ್ನಿ…

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಕ್ಯೂಆರ್ ಕೋಡ್, ಗೂಗಲ್ ಪಾರ್ಮ್ ಮೂಲಕ
ನೋಂದಾಯಿಸಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆ, ಆಧಾರ ಕಾರ್ಡ್, ಬಯೋಡೆಟಾ ಹಾಗೂ ಭಾವಚಿತ್ರಗಳನ್ನು
ಸಂದರ್ಶನದ ವೇಳೆ ತೆಗೆದುಕೊಂಡು ಬರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೮೮೬೧೯೧೧೯೮೨, ೭೦೧೯೦೮೯೧೧೬ ಅಥವಾ ೮೧೫೧೦೨೦೬೭೦ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Box office toofan/ ೭ ದಿನದಲ್ಲಿ ೬೭ ಕೋಟಿ ರೂ. ದಾಟಿದ ‘ಎ.ಆರ್.ಎಂ.’