ಭಟ್ಕಳ: ಕೆಲಸಕ್ಕೆ ಎಂದು ಹೋದ ಯುವಕ ಕಾಣೆಯಾಗಿರುವ (missing) ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತನ ಮೊಬೈಲ್ ಮನೆಯಲ್ಲಿ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ವೆಂಕ್ಟಾಪುರ ಗ್ರಾಮದ ಹುರುಳಿಸಾಲ್ ಮಿಣಿಹಿತ್ಲ ವಾಸಿ ಮಂಜುನಾಥ ಶಿವಾನಂದ ಆಚಾರಿ (೨೮) ಕಾಣೆಯಾಗಿದ್ದಾನೆ (missing) ಎಂದು ಆತನ ತಂದೆ ಶಿವಾನಂದ ಹುಚ್ಚ ಆಚಾರಿ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: Forest watchman/ ಬೈಕಿನಿಂದ ಬಿದ್ದು ಅರಣ್ಯ ಇಲಾಖೆಯ ವಾಚ್ ಮ್ಯಾನ್ ಸಾವು 

ದೂರಿನಲ್ಲಿ ತಿಳಿಸಿರುವಂತೆ, ಮಂಜುನಾಥ ಆಚಾರ್ಯ ದಿನಾಂಕ: ೧೭-೦೧-೨೦೨೬ ರಂದು ಬೆಳಿಗ್ಗೆ ೮:೩೦ ಗಂಟೆಯ ಸುಮಾರಿಗೆ ಭಟ್ಕಳದ ಸೀಮಾ ರಕ್ತ ತಪಾಸಣಾ ಕೇಂದ್ರಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ. ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಸೀಮಾ ರಕ್ತ ತಪಾಸಣಾ ಕೇಂದ್ರದ ಪ್ರಕಾಶ ನಾಯ್ಕ ಯುವಕನ ತಂದೆಗೆ ಕರೆ ಮಾಡಿ ಮಂಜುನಾಥ ಕೆಲಸಕ್ಕೆ ಯಾಕೆ ಬಂದಿಲ್ಲ ಅಂತ ವಿಚಾರಿಸಿದ್ದಾರೆ. ಆಗ ಬೆಳಿಗ್ಗೆ ೮:೩೦ ಗಂಟೆಗೆ ಕೆಲಸಕ್ಕೆ ಹೋಗುತ್ತೇನೆ ಅಂತ ಮನೆಯಿಂದ ಹೇಳಿ ಹೋದ ಬಗ್ಗೆ ತಿಳಿಸಿದರು.

ಇದನ್ನು ಓದಿ: School children/ ಠಾಣೆಗೆ ಬಂದ ಶಾಲಾ ಮಕ್ಕಳು

ಮಗನಿಗೆ ಮೊಬೈಲ್ ಕರೆ ಮಾಡಿದಾಗ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಹೋಗಿರುವುದು ಗೊತ್ತಾಗಿದೆ. ಮಂಜುನಾಥನು ಸೀಮಾ ರಕ್ತ ತಪಾಸಣಾ ಕೇಂದ್ರಕ್ಕೆ ಕೆಲಸಕ್ಕೂ ಹೋಗದೇ, ಈವರೆಗೆ ವಾಪಾಸ ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: Sodigadde/ ಸೋಡಿಗದ್ದೆ ದೇವಸ್ಥಾನದ ನೀಲನಕ್ಷೆ ಬಿಡುಗಡೆ, ನಿಧಿ ಸಂಗ್ರಹಕ್ಕೆ ಚಾಲನೆ