ಕಾರವಾರ (Karwar): ಅತಿಯಾಸೆಗೆ ಮುರ್ಡೇಶ್ವರದ‌ (Murudeshwar) ಮಹಿಳೆಯೋರ್ವಳು ಅರ್ಧ ಕೋಟಿ ರೂ. ಕಳಕೊಂಡ‌ ಬೆನ್ನಲೇ ಶಿರಸಿಯ (Sirsi) ಬ್ಯಾಂಕ್ ನೌಕರನಿಗೇ ಪಂಗನಾಮ ಬಿದ್ದಿದೆ (Fraud case).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಸಿಯ ಸ್ಟೇಟ್ ಬ್ಯಾಂಕ್ (SBI) ನೌಕರನೋರ್ವ ಅತಿ ಹೆಚ್ಚು ಹಣ ಗಳಿಸುವ ಜಾಹೀರಾತು (Advertisement) ನಂಬಿ ೧೩.೫೦ ಲಕ್ಷ ರೂ. ಕಳಕೊಂಡಿದ್ದಾರೆ. ಕಳೆದ ಆ.೨೦ರಂದು ಬ್ಯಾಂಕ್ ನೌಕರ ಫೇಸ್‌ಬುಕ್‌ (Facebook) ನಲ್ಲೊಂದು ಜಾಹೀರಾತು ನೋಡಿದ್ದರು. ಆದಿತ್ಯ ಬಿರ್ಲಾ (Aditya Birla) ಮನಿ ಲಿಮಿಟೆಡ್ ನಲ್ಲಿ ಹಣ ಹೂಡಿ.‌ ಆನ್ಲೈನ್ ನಲ್ಲಿ ಟ್ರೇಡಿಂಗ್ ಮಾಡಿ ಹೆಚ್ಚು ಹಣ ಗಳಿಸಿ ಎಂಬ ಜಾಹೀರಾತು ಇತ್ತು.‌

ವಿಡಿಯೋ ಸಹಿತ ಇದನ್ನೂ ಓದಿ : ಸಾಮೂಹಿಕ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಸಂಪನ್ನ

ಈ ಜಾಹಿರಾತಿನ ಕೆಳಗೆ ನಮೂದಿಸಿದ್ದ ಲಿಂಕನ್ನು ಕ್ಲಿಕ್ ಮಾಡಿದಾಗ VIP ABML Stock Strategy Group ಎಂಬ ಹೆಸರಿನ ವಾಟ್ಸಪ್ ಗ್ರೂಪ್‌ಗೆ (WhatsApp) ಸೇರಿಕೊಂಡಿದ್ದರು. ಈ ಗ್ರೂಪ್ ನಲ್ಲಿ ಎಡ್ಮಿನಗಳಾಗಿದ್ದ ರಾಹುಲ ಮಿತ್ತಲ್ ಮತ್ತು ಅದಿತಿ ಶರ್ಮಾ ಎಂಬ ಹೆಸರಿನ ಇಬ್ಬರು ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆ ಪ್ರಕಾರ ಬ್ಯಾಂಕ್ ನೌಕರ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಲು ಪ್ರಾರಂಭಿಸಿದರು.

ಇದನ್ನೂ ಓದಿ : ಕಾರವಾರದಿಂದ ತಿರುಪತಿಗೆ ರೈಲು ಓಡಿಸಲು ಆಗ್ರಹ

ಅ. ೨೬ ರಂದು ಬ್ಯಾಂಕ್ ನೌಕರ ತಮ್ಮ ಎಸ್.ಬಿ.ಐ. ಬ್ಯಾಂಕ್ ಖಾತೆಯಿಂದ ಆರೋಪಿತರ ಪಂಜಾಬ & ಸಿಂಡ್ ಬ್ಯಾಂಕ ಖಾತೆಗೆ ರೂ. ೧೩.೫೦ ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಅವರ ಟ್ರೇಡಿಂಗ್ ವ್ಯಾಲೆಟ್ ನಲ್ಲಿ ರೂ ೪೨.೪೮ ಲಕ್ಷ ರೂ. ಹಣವು ಜಮಾ ಆಗಿರುವ ಬಗ್ಗೆ ಕಂಡು ಬಂದಿದೆ. ಈ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ವಾಟ್ಸಪ್ ಗ್ರೂಪ್‌ನ ಎಡ್ಮಿನ್ ರವರಿಗೆ ಕೇಳಿದ್ದಾರೆ. ಆಗ ಮಾಹಿತಿ ನೀಡದೇ ಗ್ರೂಪ್ ನಿಂದ ಬ್ಲಾಕ್ ಮಾಡಿದ್ದಲ್ಲದೇ ಈ ವಾಟ್ಸಪ್
ಗ್ರೂಪ್‌ನ್ನೂ ಡಿಲೀಟ್ ಮಾಡಿದ್ದಾರೆ ಎಂದು ವಂಚನೆಗೆ ಒಳಗಾದ ಬ್ಯಾಂಕ್ ನೌಕರ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಅಕ್ಟೋಬರ್‌ ೮ರಂದು ವಿವಿಧೆಡೆ ಅಡಿಕೆ ಧಾರಣೆ

ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ (CEN crime station) ದೂರು ದಾಖಲಾಗಿದೆ (fraud case). ಐಟಿ ಕಾಯ್ದೆ (IT act) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ದಸರಾ, ದೀಪಾವಳಿ ನಿಮಿತ್ತ ಹೆಚ್ಚುವರಿ ರೈಲು ಓಡಾಟ