ಮಂಗಳೂರು (Mangaluru): ಇಲ್ಲಿನ ಶ್ರೀ ವೆಂಕಟರಮಣ ದೇವಾಲಯ ಆಚಾರ್ಯ ಮಠ ವಠಾರದ ೧೦೨ನೇ ಶ್ರೀ ಶಾರದಾ ಮಹೋತ್ಸವ (Sharadotsav) ಕಾರ್ಯಕ್ರಮ ಅ. ೮ರಿಂದ ಆರಂಭಗೊಂಡಿದ್ದು, ೧೪ವರೆಗೆ ಅತ್ಯಂತ ವೈಭವಯುತವಾಗಿ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೨ ವರ್ಷದ ಹಿಂದಷ್ಟೇ ನೂರನೇ ವರ್ಷದ ಶಾರದಾ ಮಹೋತ್ಸವವನ್ನು (Sharadotsav) ಶ್ರೀ ಶಾರದಾ ಮಹೋತ್ಸವ ಸಮಿತಿ ಅತ್ಯಂತ ವೈಭವಪೂರ್ಣವಾಗಿ ನಡೆಸಿತ್ತು. ಅದೇ ರೀತಿ ಸಂಭ್ರಮದಿಂದ ಈ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಮಂಗಳೂರು ನಗರ ಹಾಗೂ ಪರವೂರಿನ ಭಕ್ತಾದಿಗಳು ತನುಮನ ಸಹಾಯ ನೀಡಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ಸಿಗೊಳಿಸುತ್ತಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ :  ಹಸಿರು ಪೀಠಕ್ಕೆ ಹೋದವರಿಗೆ ಕಾಂಗ್ರೆಸ್‌ ಬೆನ್ನೆಲುಬು

ಅ. ೮ರಂದು ರಾತ್ರಿ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ರಾಜಾಂಗಣದಿಂದ ಶ್ರೀ ಉಮಾಮಹೇಶ್ವರಿ ದೇವಳ ರಸ್ತೆ, ರಾಮಮಂದಿರ, ನಂದಾ ದೀಪ ರಸ್ತೆ, ಹೂ ಮಾರುಕಟ್ಟೆ ರಸ್ತೆ, ರಥಬೀದಿಯಾಗಿ ಉತ್ಸವ ಸ್ಥಾನಕ್ಕೆ ತರಲಾಯಿತು. ಅ.9ರಂದು ಬೆಳಗ್ಗೆ ೭ ಗಂಟೆಗೆ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲಾಯಿತು.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ‘ನಾಯಕತ್ವ ವಿಕಸನ ಕಾರ್ಯಾಗಾರ’

ಅ.೧೩ವರೆಗೆ ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ. ಪ್ರತಿ ದಿನವೂ ಬೆಳಗ್ಗೆ ೧೦ ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ಶ್ರೀ ಶಾರದಾ ಮಾತೆಯ ದರುಶನವನ್ನು ಪಡೆದುಕೊಳ್ಳಬಹುದು. ಅ.೧೩ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ ಮಾಡಲಾಗುವುದು. ಅಂದು ಬೆಳಗ್ಗೆ ೧೦ ಘಂಟೆಗೆ ವಿದ್ಯಾರಂಭ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ ಗಂಟೆಗೆ ವಿಶೇಷ ದೀಪಾಲಂಕಾರ ಸೇವೆ ಜರಗಲಿದೆ.

ಇದನ್ನೂ ಓದಿ :  ಹೈ ಅಲರ್ಟ್‌ ಆದ ಇಂಟೆಲ್‌ ಏಜೆನ್ಸಿಗಳು

ಅ.೧೪ರಂದು ಸಂಜೆ ೫ ಗಂಟೆಗೆ ಶ್ರೀ ಶಾರದಾ ಮಾತೆಗೆ ಪೂರ್ಣಾಲಂಕಾರ ನಡೆಯಲಿದೆ. ಅದಕ್ಕೂ ಮೊದಲು ಸಾಯಂಕಾಲ ೪.೩೦ಕ್ಕೆ ಸರಿಯಾಗಿ ಶ್ರೀಗಳಿಗೆ ಶ್ರೀ ವೆಂಕಟರಮಣ ದೇವಸ್ಠಾನದ ಆಡಳಿತ ಮಂಡಳಿ ಮತ್ತು ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಶ್ರೀ ದೇವಳದಲ್ಲಿ ಭವ್ಯ ಸ್ವಾಗತ ನೀಡಲಾಗುತ್ತದೆ. ಶ್ರೀ ದೇವರ ಭೇಟಿ, ಶ್ರೀ ಶಾರದಾ ಮಾತೆಯ ವಸಂತ ಮಂಟಪಕ್ಕೆ ಚಿತ್ತೈಸಿ ಶ್ರೀ ಶಾರದಾ ಮಾತೆಗೆ ಶ್ರೀಗಳ ದಿವ್ಯ ಹಸ್ತದಿಂದ ಮಾಹಾ ಆರತಿ, ಸಮಿತಿಯ ವತಿಯಿಂದ ಸ್ವಾಗತ, ಶ್ರೀಗಳಿಂದ ಅಶೀರ್ವಾದಪೂರ್ವಕ ಸಮಿತಿಯರಿಗೆ ಪ್ರಸಾದ, ಶ್ರೀಗಳ ಸ್ವಮಠಕ್ಕೆ ಪ್ರಸ್ಠಾನ ನಡೆಯಲಿದೆ.

ಇದನ್ನೂ ಓದಿ : ಕಡಲಾಮೆಗಾಗಿ ೪ ಕೋಟಿ ವೆಚ್ಚದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪನೆ

ರಾತ್ರಿ ೮.೪೫ಕ್ಕೆ ಶ್ರೀಗಳು ಸರಸ್ವತಿ ಕಲಾಮಂಟಕ್ಕೆ ಚಿತ್ತೈಸಿ ಅಲ್ಲಿರುವ ವೇದಿಕೆಯಲ್ಲಿ ಕುಳಿತು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯ ವೀಕ್ಷಣೆ ಮಾಡುವರು. ಬಳಿಕ ಸ್ವಮಠಕ್ಕೆ ಪ್ರಸ್ಠಾನ ಮಾಡುವರು.

ಇದನ್ನೂ ಓದಿ : ತಿಂಗಳ ಕಾಲ ಕೋಮಾದಲ್ಲಿದ್ದ ಯುವಕ ನಿಧನ 

ರಾತ್ರಿ ೮ ಗಂಟೆಗೆ ಶ್ರೀ ಶಾರದಾ ಮಾತೆಯ ವಿಸರ್ಜನೆಯ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಉತ್ಸವ ಸ್ಥಾನದಿಂದ ಹೊರಡುವ ಮರವಣಿಗೆ ಶ್ರೀ ಮಹಾಮಾಯಿ ದೇವಾಲಯವಾಗಿ, ಕೆನರಾ ಹೈಸ್ಕೂಲಿನ ಹಿಂಬದಿಯಿಂದ ಮಂಜೇಶ್ವರ ಗೋವಿಂದ ಪೈಯ ವೃತ್ತ ತಲುಪಿ ಅಲ್ಲಿಂದ ಡೊಂಗರಕೇರಿಯ ಮೂಲಕ ನ್ಯೂಚಿತ್ರಾ ಟಾಕೀಸ್, ಬಸವನಗುಡಿ, ಚಾಮರಗಲ್ಲಿ, ರಥ ಬೀದಿಯಾಗಿ ಶ್ರೀ ಮಹಾಮಾಯಿ ತೀರ್ಥದಲ್ಲಿ ಸಮಾಪನಗೊಳ್ಳಲಿದೆ.

ಇದನ್ನೂ ಓದಿ :  ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು

ಈ ಮಹೋತ್ಸವದಲ್ಲಿ ಪ್ರತಿ ದಿನವೂ ಸಹಸ್ರಾರು ಭಕ್ತಾದಿಗಳು ಪಾಲ್ಗೊಳ್ಳಲಿದ್ದು , ದೇವಿಯ ಅಶೀರ್ವಾದ ಪಡೆಯುತ್ತಾರೆ. ಅ. ೯ರಿಂದ ೧೩ವರೆಗೆ ಪ್ರತಿದಿನವೂ ರಾತ್ರಿ ೭ ಗಂಟೆಯಿಂದ ೯ ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿವೆ.

ಇದನ್ನೂ ಓದಿ : ಸ್ಟೇಟ್ ಬ್ಯಾಂಕ್ ನೌಕರಗೆ ೧೩.೫೦ ಲಕ್ಷ ರೂ. ಪಂಗನಾಮ

ಅ.೧೦ರಂದು ರಾತ್ರಿ ೮ ಘಂಟೆಗೆ ದುರ್ಗಾ ನಮಸ್ಕಾರ ಸೇವೆ ನಡೆಯಲಿದೆ. ಅದಾದ ಬಳಿಕ ೮.೩೦ರಿಂದ ೧೦ ಗಂಟೆವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆಯೂ ಜರಗಲಿದೆ. ದೇವಿಗೆ ಅರ್ಪಿತವಾದ ಸೀರೆಗಳ ಏಲಂ ಅ.೨೦ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ. ಶಾರದಾ ಮಾತೆಗೆ ಅಲಂಕರಿಸಿ ಸೀರೆಗಳನ್ನು ಪಡೆದುಕೊಳ್ಳಲು ಭಕ್ತಾದಿಗಳಿಗೆ ಅಂದು ಅವಕಾಶ ಇದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ : ಸಾಮೂಹಿಕ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಸಂಪನ್ನ