ಮಂಗಳೂರು: ೨೦೦೮ರಲ್ಲಿ ಉಳ್ಳಾಲ (Ullal) ಪೊಲೀಸ್ ಠಾಣೆಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿ ಯಾಸಿನ್ ಭಟ್ಕಳನನ್ನ (Yasin Bhatkal) ವಿಡಿಯೋ ಕಾನ್ಫರೆನ್ಸ್ ಮೂಲಕ (video conference) ಗುರುವಾರ ಮಂಗಳೂರು (Mangaluru) ಜೆಎಂಎಫ್  ನ್ಯಾಯಾಲಯದ (JMFC) ವಿಚಾರಣೆಗೆ ಹಾಜರುಪಡಿಸಲಾಯಿತು. ಮುಂದಿನ ವಿಚಾರಣೆಯನ್ನು ಆಗಸ್ಟ್ ೮ಕ್ಕೆ ನಿಗದಿಪಡಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೆಹಲಿ (Delhi) ತಿಹಾರ್ ಕೇಂದ್ರ ಕಾರಾಗೃಹದಲ್ಲಿದ್ದ (Tihar Jail ) ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾಸಿನ್ ಭಟ್ಕಳನನ್ನು ವಿಚಾರಣೆಗೆ ಹಾಜರುಪಡಿಸಲಾಗಿದೆ. ಹಲವು ವರ್ಷಗಳಿಂದ ಈತನ ವಿರುದ್ಧದ ಪ್ರಕರಣ ವಿಚಾರಣೆಯಾಗದೇ ನ್ಯಾಯಾಲಯಯಲ್ಲಿ ಬಾಕಿ ಉಳಿದಿತ್ತು.

ವಿಡಿಯೋ ಸಹಿತ ಇದನ್ನೂ ಓದಿ: grand procession/ ಅದ್ದೂರಿ ಮೆರವಣಿಗೆ ಮೂಲಕ ಭಟ್ಕಳ ಮಾರಿ ಜಾತ್ರೆ ಸಂಪನ್ನ

ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದನಾ ಕೃತ್ಯವೆಸಗಲು ಪೂರ್ವ ತಯಾರಿ ಆರೋಪದ ಮೇರೆಗೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಮತ್ತು ಚೆಂಬುಗುಡ್ಡೆ ಎಂಬಲ್ಲಿ ಅಪರಾಧಿಕ ಒಳ ಸಂಚನ್ನು ನಡೆಸಿ ಸ್ಫೋಟಕ ವಸ್ತುಗಳನ್ನು ತಯಾರಿಸಿದ್ದ, ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ (Indian Muzahiddin) ಸಂಘಟನೆಗೆ ಸೇರಿದ್ದ ಆರೋಪಿಗಳನ್ನು ೨೦೦೮, ಅಕ್ಟೋಬರ್ ೪ರಂದು ಹಿಂದಿನ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಡಿಸಿಐಬಿ (DCIB)  ಅಧಿಕಾರಿ ಮತ್ತು ಸಿಬ್ಬಂದಿ ಪತ್ತೆ ಮಾಡಿದ್ದರು. ಪ್ರಕರಣದಲ್ಲಿ ನಿಷೇಧಿತ ಇಂಡಿಯನ್ ಮುಜಾಹೀದ್ದೀನ್ ಸಂಘಟನೆಯ ಸದಸ್ಯರಾದ ೭ ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ೬ ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದರು.

ವಿಡಿಯೋ ಸಹಿತ ಇದನ್ನು ಓದಿ: Goddess Mariyamma/ ಮಾರಿಯಮ್ಮನ ದರ್ಶನಕ್ಕೆ ಜನಸಾಗರ

ಆರೋಪಿಗಳ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿ, ವಿಚಾರಣೆ ನಡೆದು ಆರೋಪಿಗಳಾದ ಸಯ್ಯದ್ ಮೊಹಮ್ಮದ್ ನೌಶಾದ್, ಅಹಮ್ಮದ್ ಬಾವ ಅಬೂಬಕ್ಕರ್, ಫಕೀರ್ ಅಹಮ್ಮದ್ ಎಂಬುವರಿಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆರೋಪಿಗಳಾದ ಮೊಹಮ್ಮದ್ ಆಲಿ, ಜಾವೇದ್ ಆಲಿ, ಮೊಹಮ್ಮದ್ ರಫೀಕ್ ಮತ್ತು ಶಬ್ಬಿರ್ ಭಟ್ಕಳ್ ಎಂಬುವರನ್ನು ಖುಲಾಸೆಗೊಳಿಸಿ, ೨೦೧೭ ಏಪ್ರಿಲ್ ೧೨ರಂದು ಅಂತಿಮ ತೀರ್ಪು ಹೊರಡಿಸಲಾಗಿತ್ತು. ಪ್ರಕರಣದ ನ್ಯಾಯಾಲಯದ ವಿಚಾರಣಾ ಕಾಲದಲ್ಲಿ ಯಾಸೀನ್ ಭಟ್ಕಳ (Yasin Bhatkal ) ತಲೆ ಮರೆಸಿಕೊಂಡಿದ್ದ ಕಾರಣ ವಿಚಾರಣೆ ಬಾಕಿ ಉಳಿದಿತ್ತು.

ಇದನ್ನೂ ಓದಿ: Murudeshwara Circle/ ‘ಭಟ್ಕಳ ಗ್ರಾಮಾಂತರ ವೃತ್ತ’ ಇನ್ನು ಮುಂದೆ ‘ಮುರುಡೇಶ್ವರ ವೃತ್ತ ‘!

ಇಂಡಿಯನ್ ಮುಜಾಹೀದ್ದೀನ್ ಸಹ-ಸಂಸ್ಥಾಪಕ ಯಾಸಿನ್ ಭಟ್ಕಳ ಹೈದರಾಬಾದ್‌ನಲ್ಲಿ (Hyderabad) ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ.

ವಿಡಿಯೋ ಸಹಿತ ಇದನ್ನೂ ಓದಿ: mari Jathre begins/ ಗದ್ದುಗೆ ಏರಿದ ಮಾರಿಯಮ್ಮ