ಭಟ್ಕಳ: ಶ್ರೀ ಕ್ಷೇತ್ರ ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಧಂತ್ಯುತ್ಸವ, ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಅನ್ನಪೂರ್ಣೇಶ್ವರಿ ಭೋಜನಾಲಯ ಹಾಗೂ ಶ್ರೀ ದುರ್ಗಾಪರಮೇಶ್ವರಿ ಸಭಾಭವನದ ಲೋಕಾರ್ಪಣೆ ಮತ್ತು ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿದರು.

ಇದನ್ನೂ ಓದಿ :  ಕಿತ್ರೆ ದೇವಿಮನೆಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಗಮನ – ಭೋಜನಾಲಯ, ಸಭಾಭವನ ಲೋಕಾರ್ಪಣೆ
ನಂತರ ಮಾತನಾಡಿದ ಅವರು, ದೇವಿಮನೆ ದೇವಸ್ಥಾನದಲ್ಲಿ ಕಳೆದ ಸುಮಾರು ೧೨ ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಗಳಾಗಿದ್ದು ಇಂದು ಉದ್ಘಾಟನೆಗೊಂಡ ಅನ್ನಛತ್ರ ನೋಡಿ ಹೃದಯ ತುಂಬಿ ಬರುತ್ತದೆ. ಗ್ರಾಮೀಣ ಭಾಗದಲ್ಲಿರುವ ಈ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಕ್ತರ ಪರಿಶ್ರಮ ಶ್ಲಾಘನೀಯವಾಗಿದೆ. ಅತ್ಯಂತ ಯಶಸ್ವಿಯಾಗಿ ನಡೆದ ಕಾರ್ಯಕ್ರಮಕ್ಕೆ ಎಲ್ಲರ ಶ್ರಮ ಇದೆ ಎಂದರು.

ಇದನ್ನೂ ಓದಿ : ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟರಿಗೆ ಸನ್ಮಾನ
ಅಧ್ಯಕ್ಷತೆಯನ್ನು ದೇವಿಮನೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ವಹಿಸಿದ್ದರು.
ಮುಖ್ಯ ಅತಿಥಿ ರಾಮಚಂದ್ರಾಪುರ ಮಠದ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಶ್ರೀ ಮಠದ ಪರಂಪರೆ, ಸಾಧನೆಗಳು, ವಿಶೇಷತೆಗಳನ್ನು ವಿವರಿಸುತ್ತ ದೇವಿಮನೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. ಶ್ರೀ ರಾಘವೇಶ್ವರ ಸ್ವಾಮೀಜಿಯವರ ಪಾದಸ್ಪರ್ಷದಿಂದ ದೇವಿಮನೆ ಕ್ಷೇತ್ರ ಕ್ಷಿಪ್ರವಾಗಿ ಅಭಿವೃದ್ಧಿಯಾಗಿದ್ದು, ಇಲ್ಲಿನ ಗುರು ಭಕ್ತರ ಹಾಗೂ ಶ್ರೀದೇವಿಯ ಭಕ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಈ ವಿಡಿಯೋ ನೋಡಿ: ದೇವಿಮನೆಯಲ್ಲಿ ರಥೋತ್ಸವ ಸಂಭ್ರಮ. https://fb.watch/qk2mvBFeUe/?mibextid=Nif5oz
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಎಂ. ಗೊಂಡ ಮಾತನಾಡಿ, ಶ್ರೀ ದೇವಿಮನೆ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹೊನ್ನಾವರ ಮಂಡಳದ ಅಧ್ಯಕ್ಷ ಆರ್.ಜಿ. ಹೆಗಡೆ, ಶ್ರೀ ದೇವಿಮನೆ ದೇವಸ್ಥಾನದ ಕಮಿಟಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲ್ಪಟ್ಟ ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು.


ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಎಂ. ಭಟ್ಟ ತೆಕ್ಕನಗದ್ದೆ ಸ್ವಾಗತಿಸಿದರು. ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಹೆಗಡೆ ಮೂಡಲಮನೆ ಹಾಗೂ ಶುಭಾ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಮೋದ ಜೋಷಿ ವಂದಿಸಿದರು.


ಕುಮಾರಿ ನಿಹಾರಿಕಾ ಭಟ್ಟ ಬೆಟ್ಕೂರು ಇವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ರಾಘವೇಂದ್ರ ಹೆಗಡೆ ಕೋಟಖಂಡ, ಸಂವಾದಿನಿ ಶಂಭು ಎಸ್. ಭಟ್ಟ ಕಬ್ರೆ ಸಹಕರಿಸಿದರು. ರಾತ್ರಿ ಇದೇ ವೇದಿಕೆಯಲ್ಲಿ ಸಶಿವಶಾಂತಿಕಾ ಯಕ್ಷಗಾನ ಬಳಗದವರಿಂದ ಅತಿಥಿಕಲಾವಿದರ ಕೂಡುವಿಕೆಯಲ್ಲಿ ನಡೆದ ಲವ-ಕುಶ ಯಕ್ಷಗಾನ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.