ಭಟ್ಕಳ (Bhatkal): ಅನಧಿಕೃತ ವ್ಯಕ್ತಿಗಳಿಂದ ಅರಣ್ಯ ಜಾಗವನ್ನು (forest land) ಮಾರಾಟ ಮತ್ತು ಕಬ್ಜಾ ಮಾಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿನ್ನೆ ಸೋಮವಾರ ವಲಯಾರಣ್ಯಾಧಿಕಾರಿಗೆ (RFO) ಮನವಿ ಸಲ್ಲಿಸಿದ್ದ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕುಕನೀರ ಗ್ರಾಮಸ್ಥರು ಮಂಗಳವಾರ ಭಟ್ಕಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ (ACF) ಮನವಿ ಸಲ್ಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೆಬಳೆ ಗ್ರಾಮದ ಕುಕನೀರ ಮಜಿರೆಯ ಸರ್ವೆ ನಂ. ೨೫೮ ಕ್ಷೇತ್ರ ೦-೦೨-೦೦-೦೦ರಲ್ಲಿ ನಾಗವೇಣಿ ರಾಜು ಶೆಟ್ಟಿ ಇವರು ಅಧಿಕೃತ ಅತಿಕ್ರಮಣಾದಾರರಾಗಿ ವಾಸ್ತವ್ಯ ಹೊಂದಿದ್ದರು. ಇವರು ಕೆಲವು ಸಮಯಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಆದರೆ ಈ ಜಾಗದಲ್ಲಿ ಕಳೆದ ಕೆಲವು ದಿನಗಳಿಂದ ಮೊಹಮ್ಮದ್ ಸಲೀಂ ಬಾಯೀದ್ ಅಕ್ಟರ್ ಎಂಬ ಅನಧಿಕೃತ ವ್ಯಕ್ತಿ ಬಂದು ಕಾಮಗಾರಿ ಕೆಲಸ ಪ್ರಾರಂಭಿಸಿದಾಗ, ಗ್ರಾಮಸ್ಥರು ಅರಣ್ಯ ಇಲಾಖೆಗೆ (forest department) ಮಾಹಿತಿ ನೀಡಿ ಯಾವುದೇ ರೀತಿಯ ಕಾಮಗಾರಿ ನಡೆಸದಂತೆ ಆರೋಪಿ ಮೇಲೆ ಪ್ರಕರಣ ದಾಖಲು ಮಾಡಿಸಿದ್ದರು.
ಇದನ್ನೂ ಓದಿ : ಮೂವರು ಗೋ ಕಳ್ಳರ ಬಂಧನ
ಆದರೆ ಆರೋಪಿಯು ಹೆಬಳೆಯ ಬಾವಿಗದ್ದೆಯ ಚಣ್ಣಯ್ಯ ಶನಿಯಾರ ನಾಯ್ಕ ಎಂಬುವವರಿಗೆ ಹಣ ಕೊಟ್ಟು ಖರೀದಿ ಮಾಡಿರುವುದಾಗಿ ಅರಣ್ಯಧಿಕಾರಿ ಹಾಗೂ ಸ್ಥಳೀಯರಿಗೆ ಹೇಳುತ್ತಾ ಈ ಜಾಗದಲ್ಲಿ ಮತ್ತೆ ಕೆಲಸ ಮಾಡಲು ಪ್ರಯತ್ನಿಸಿದ್ದ. ನಿನ್ನೆ, ಬೆಳಿಗ್ಗೆ ಮತ್ತೆ ಅದೇ ಜಾಗದಲ್ಲಿ (forest land) ಕಾಮಗಾರಿ ಆರಂಭಿಸಿದಾಗ ಸ್ಥಳೀಯರು ವಲಯಾರಣ್ಯಾಧಿಕಾರಿ ಗಮನಕ್ಕೆ ತಂದಿದ್ದರು. ಜಾಗಕ್ಕೆ ಸಂಬಂಧಿಸಿ ಆರೋಪಿಯು ಯಾವುದೇ ದಾಖಲೆ ಹೊಂದಿರದಿದ್ದರೂ ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಕಾಮಗಾರಿ ನಡೆಸುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ : ಮಧ್ಯರಾತ್ರಿವರೆಗೂ ಓದುತ್ತಿದ್ದ ವಿದ್ಯಾರ್ಥಿನಿ ಮಹಡಿಯಿಂದ ಬಿದ್ದು ಸಾವು
ಇದನ್ನು ಗಂಭೀರ ಅಪರಾಧವೆಂದು ಪರಿಗಣಿಸದ ಅರಣ್ಯ ಇಲಾಖೆ ಬಗ್ಗೆ ಸ್ಥಳೀಯರು ಅಸಮಾಧಾನ ಹೊಂದಿದ್ದಾರೆ. ಸೂಕ್ತ ಬೇಲಿ ಅಳವಡಿಸದೆ ಅರಣ್ಯ ಜಾಗವನ್ನು ಸಂರಕ್ಷಿಸಲು ಮುಂದಾಗದ ಅಧಿಕಾರಿಗಳ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮನವಿ ಸಲ್ಲಿಕೆ ಸಂದರ್ಭದಲ್ಲಿ ಭಟ್ಕಳ ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಸ್ಥಳೀಯ ಗ್ರಾಮಸ್ಥರಾದ ವಸಂತ ದೇವಾಡಿಗ, ರವಿ ನಾಯ್ಕ, ರಾಮ ನಾಯ್ಕ, ಕೃಷ್ಣ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
ಇದರ ವಿಡಿಯೋ ಸುದ್ದಿಯನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಕಾರಿಗೆ ಡಿಕ್ಕಿ; ಗಾಯಾಳು ಬೈಕ್ ಸವಾರನ ವಿರುದ್ಧವೇ ದೂರು