ಭಟ್ಕಳ (Bhatkal) : ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಪ್ರತಿಯೊಂದು ವಿಭಾಗದಲ್ಲಿಯೂ ನಮ್ಮಲ್ಲಿಯ ಪ್ರತಿಭೆ ಕಾಣ ಸಿಗುವುದು ಸಾಮಾನ್ಯ. ಅದರಂತೆ ಸಿನೆಮಾ (Cinema) ರಂಗದಲ್ಲಿಯೂ ಕೂಡಾ ನಮ್ಮ ಜಿಲ್ಲೆಯ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಈಗ ಕುಮಟಾದ (Kumta) ಪ್ರತಿಭೆಗಳು ಒಟ್ಟು ಸೇರಿ ಉತ್ತರ ಕನ್ನಡವೇ ಹೆಮ್ಮೆ ಪಡುವಂತ “ರೈಫಲ್ ರಹಸ್ಯ” (Rifle Rahasya) ಎಂಬ ಈ ಕಿರುಚಿತ್ರದ (Short film) ನಿರ್ಮಾಣಕ್ಕೆ ಮುಂದಾಗಿದ್ದು ಚಿತ್ರದ ಶೂಟಿಂಗ್ ಕಾರ್ಯ ಸಂಪೂರ್ಣಗೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಂಪೂರ್ಣ ಶೂಟಿಂಗ್‌ ಉತ್ತರ ಕನ್ನಡದಲ್ಲಿಯೇ ನಡೆಸಿರುವುದು ವಿಶೇಷ.  ಸ್ಥಳೀಯ ಭಾಷಾ ಶೈಲಿಯ ಅಡಿಯಲ್ಲಿ ದ್ವೇಷದ ಕಥೆ, ಕಣ್ಣೀರಿನ ವ್ಯಥೆ ಹಾಗೂ ಭಾವನೆಗಳ ಭಂಡಾರವನ್ನೇ ಅಳವಡಿಸಿರುವ ಕಾವ್ಯಮಯ ಹಾಡುಗಳೊಂದಿಗೆ ಈ ಕಿರುಚಿತ್ರ (Short film) ಕೂಡಿದೆ. ಇದು ಎಲ್ಲ ವರ್ಗದವರನ್ನೂ ಆಕರ್ಷಿಸಲಿದೆ ಎನ್ನುವುದು ಚಿತ್ರ ತಂಡದ ಆಶಯವಾಗಿದೆ. ಈ ಕಿರುಚಿತ್ರದಲ್ಲಿ ಕೌಟುಂಬಿಕತೆಯನ್ನು ನೆಲೆಗೊಡಿಸಿ, ಹಾಸ್ಯ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಎಲ್ಲವನ್ನೂ ಮಿಶ್ರಣ ಮಾಡಿರುವುದು ಎಲ್ಲಾ ವಯಸ್ಸಿನ ಪ್ರೇಕ್ಷಕರೂ ಕೂಡಾ ನೋಡುವಂತದ್ದಾಗಿರುವುದು ಇನ್ನೊಂದು ವಿಶೇಷವಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ :  ಕಾರವಾರದಲ್ಲಿ ಹೊತ್ತಿ ಉರಿದ ಬಸ್ಸು

ಕಿರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಶ್ರೀಧರ್ ಭಟ್ ಕಾಸರಗೋಡು, ಕೃಷ್ಣಾನಂದ ಭಟ್, ಮಹೇಶ್ ಭಟ್ ಚಂದಾವರ್, ಸುಚಿತ್ ಭಟ್, ಕಿಚ್ಚ ಅಭಿರಾಗ್ ಹಾಗೂ ಶಂತನು ಭಟ್ ಅಭಿನಯಿಸಿದ್ದು, ಈ ಕಥಾ ಹಂದರವು ಸ್ಥಳೀಯ ಕಲಾವಿದರ ಪ್ರತಿಭೆಯ ಅನಾವರಣ ಗೊಳಿಸುವ ವೇದಿಕೆಯಾಗುವುದಂತು ಸತ್ಯ. ಉತ್ತರ ಕನ್ನಡವೇ ಹೆಮ್ಮೆ ಪಡುವಂತಹ ಯುವಕರ ಈ ಸಾಧನೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎನ್ನುವ ಹಾರೈಕೆ ಊರಿನ ಪ್ರಮುಖರದ್ದಾಗಿದೆ. ಮುಂದಿನ ಪೀಳಿಗೆಯ “ರೈಫೆಲ್ ರಹಸ್ಯ” ಎಂಬ ಕಿರುಚಿತ್ರ ದ್ವೇಷದ ಕಥೆ, ಕಣ್ಣೀರಿನ ವ್ಯಥೆ, ಭಾವನೆಗಳ ಭಂಡಾರದ ಕಥಾ ಹಂದರವಾಗಿ ತಯಾರಿ ಹಂತದಲ್ಲಿದೆ.

ಇದನ್ನೂ ಓದಿ :  ಕಾರವಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ