ಭಟ್ಕಳ: ಅರಬ್ಬಿ ಸಮುದ್ರದ (Arabian Sea) ನೀರಿನಲ್ಲಿ ಬಿದ್ದು ಮುಳುಗಿ ಮೀನುಗಾರ ಮೃತಪಟ್ಟ (Fisherman death) ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಛತ್ತೀಸ್ಗಡದ (Chhattisgarh) ವಿರೇಂದ್ರ ರಾಮ ತಂದೆ ಸುಧ ರಾಮ (೨೨) ಮೃತ ಯುವಕ. ಈತನು ಕುಡಿದ ಅಮಲಿನಲ್ಲಿ ದಿನಾಂಕ: ೦೧-೦೨-೨೦೨೬ ರಂದು ರಾತ್ರಿ ೧೦:೦೦ ಗಂಟೆಯ ಸುಮಾರಿಗೆ ಮೀನುಗಾರಿಕೆಗೆ ಹೊರಡಲು ಕೃಷ್ಣ ಖಾರ್ವಿ ಇವರ ಸಾಗರ ಶ್ರೀ ಬೋಟ ಮೇಲೆ ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರು. ಬಂದರಿನ ಆಳವಿರುವ ಸಮುದ್ರ ನೀರಿನಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ (Fisherman death).

ಇದನ್ನು ಓದಿ: Cooperative Cup/ ಸಹಕಾರಿ ಕಪ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ – ಜಿ.ವಿ.ಎಸ್.ಎಸ್. ಕೈಕಿಣಿ ಚಾಂಪಿಯನ್

ಈ ಕುರಿತು ಮೃತನ ಅಣ್ಣ ರವಿಕುಮಾರ ಪ್ರಕರಣ ದಾಖಲಿಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಭಟ್ಕಳ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಮಾಡಲಾಗಿದೆ.

ಇದನ್ನು ಓದಿ: national level/ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾಂಜಲಿ ಶಾಲೆಯ ವಿದ್ಯಾರ್ಥಿ