ಭಟ್ಕಳ (Bhatkal): ತಾಲೂಕಿನ ವಿವಿಧೆಡೆ ಬುಧವಾರದಂದು ಇಲ್ಲಿನ ಖಾಸಗಿ ಕ್ಲಿನಿಕ್ (private clinic)ಗಳ ಮೇಲೆ ದಿಢೀರ್ ದಾಳಿ (raid) ಮಾಡಿದ ರಾಜ್ಯ ಕೆ.ಪಿ.ಎಂ.ಈ. ಕಾಯ್ದೆಯ ಜಿಲ್ಲಾ ನೋಡಲ್ ಅಧಿಕಾರಿ ನೇತೃತ್ವದ ತಂಡದಿಂದ ಒಂದು ಕ್ಲಿನಿಕ್ ಜಪ್ತಿ ಮಾಡಿದ್ದು, ಇನ್ನುಳಿದ ಇಬ್ಬರು ಖಾಸಗಿ ಕ್ಲಿನಿಕ್ ವೈದ್ಯರಿಗೆ ನೋಟಿಸ್ ಜಾರಿ ಮಾಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ
(KPME) ನೋಡಲ್ ಅಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ ನೇತೃತ್ವದ ತಂಡವು ಭಟ್ಕಳ ಖಾಸಗಿ ಕ್ಲಿನಿಕ್ ವೈದ್ಯರ ಕುರಿತಾಗಿ ಗುಪ್ತ ಕಾರ್ಯಾಚರಣೆಗಿಳಿದಿದೆ (raid).

ಇದನ್ನೂ ಓದಿ: ಉಡುಪಿ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪದಕಗಳ ಬೇಟೆ

ಬುಧವಾರದಂದು ನೇರವಾಗಿ ತಾಲೂಕು ಆಸ್ಪತ್ರೆಗೆ ಭೇಟಿ‌ ನೀಡಿದ ತಂಡ ನಂತರ ಖಾಸಗಿ ಕ್ಲಿನಿಕ್ ಗಳ ಪರಿಶೀಲನೆಗೆ ತೆರಳಿತು. ಭಟ್ಕಳ ತಾಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ಹಾಗೂ ಅವರ ತಂಡ ಸಾಥ್ ನೀಡಿದರು.

ಇದನ್ನೂ ಓದಿ: ರೈಲು ಪ್ರಯಾಣಿಕರು ಓದಲೇ ಬೇಕಾದ ಸುದ್ದಿಯಿದು !

ಮೊದಲು ಇಲ್ಲಿನ ಪೇಟೆ ಹನುಮಂತ ದೇವಸ್ಥಾನದ ಸಮೀಪದ ಗಂಡು ಮಕ್ಕಳ ಶಾಲೆಯ ಪಕ್ಕದ ರಂಜನ್ ಕ್ಲಿನಿಕ್ ಮೇಲೆ ದಾಳಿ ನಡೆಸಿತು. ಡಾ.‌ವಿವೇಕ‌ ಭಟ್ ಬಳಿಯಿದ್ದ ದಾಖಲೆಗಳ‌ ಪರಿಶೀಲನೆ ನಡೆಸಿತು. ಈ ವೇಳೆ ಯಾವುದೇ ದಾಖಲೆ‌ ಮತ್ತು ಸಂಬಂಧಿತ ಡಿಗ್ರಿಯು ಇಲ್ಲದ ಕಾರಣ ಅವರ ಕ್ಲಿನಿಕನ್ನು ಜಪ್ತಿ ಮಾಡಲಾಯಿತು.

ವಿಡಿಯೋ ಸಹಿತ ಇದನ್ನೂ ಓದಿ:  ನಾಳೆಯಿಂದ ಮುರ್ಡೇಶ್ವರದಲ್ಲಿ ಮೀನುಗಾರಿಕೆ ದಿನಾಚರಣೆ

ನಂತರ ಸರ್ಪನಕಟ್ಟೆಯಲ್ಲಿನ ಶ್ರೀ ದುರ್ಗಾ ಕ್ಲಿನಿಕ್ ತೆರಳಿದ ಅಧಿಕಾರಿಗಳು ಅವರಿಂದ ದಾಖಲೆ ಪರಿಶೀಲನೆ ನಡೆಸಿದರು. ದಾಖಲೆ‌ ಸರಿಯಿದ್ದರೂ ಕ್ಲಿನಿಕ್ ನಲ್ಲಿನ ಬಯೋ ಮೆಡಿಕಲ್ ವೇಸ್ಟ ಸರಿಯಿಲ್ಲದ ಹಿನ್ನೆಲೆ ಅವರಿಗೆ ನೋಟಿಸ್ ನೀಡಿ ಸೂಚನೆ ನೀಡಿದರು. ತೆಂಗಿನಗುಂಡಿ ಹೆಬಳೆ ಹೆರ್ತಾರ್ ಕ್ರಾಸ್ ನಲ್ಲಿರುವ ಡಾ. ವಿನಯ ಹೆಬ್ಬಾರ ಅವರ ಗುರುರಾಜ್ ಕ್ಲಿನಿಕ್ ಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು ಅವರು ಹೋಮಿಯೋಪತಿ ವೈದ್ಯರಾಗಿದ್ದರೂ ಅಲೋಪತಿ ಜೌಷಧಿ ನೀಡುತ್ತಿದ್ದರಿಂದ ಅವರಿಗೆ ನೋಟಿಸ್ ನೀಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ನಾನು ತುಂಬಾ ಕಾಸ್ಟ್ಲಿ, 100 ಕೋಟಿ ಸಾಕಾಗೊಲ್ಲ

ಆಜಾದ್ ನಗರದಲ್ಲಿನ ನೌಮನ್ ಕ್ಲಿನಿಕಗೂ ಪರಿಶೀಲನೆ ನಡೆಸಿದರು. ಹೋಮಿಯೋಪತಿ ವೈದ್ಯರಾಗಿರುವ ಇವರ ಸಂಬಂದಿತ ದಾಖಲೆಗಳು ಸಮರ್ಪಕವಾಗಿದ್ದವು. ಇವರು ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯಿದೆಯಡಿಯಲ್ಲಿ ಪರವಾನಿಗೆ ಪಡೆಯಲು ಅರ್ಜಿ‌ ಸಲ್ಲಿಸಿದ್ದು ಅವರಿಗೆ ಪರವಾನಿಗೆ ಪಡೆದು ಕ್ಲಿನಿಕ್ ನಡೆಸುವಂತೆ ಸೂಚಿಸಿದರು.

ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಕುಟುಂಬಗಳ ಮಾರಾಮಾರಿ