ಕುಮಟಾ (Kumta): ಡಿಪೋದಲ್ಲಿ ನಿಲ್ಲಿಸಿಟ್ಟಿದ್ದ ವಾಕರಸಾ ಸಂಸ್ಥೆಯ ಸಾರಿಗೆ ಬಸ್ ಬೆಂಕಿಗೆ ಆಹುತಿಯಾಗಿರುವ (Bus caught fire) ಘಟನೆ ಸೋಮವಾರ ನಸುಕಿನ ಜಾವ ೨ ಗಂಟೆ ಸುಮಾರಿಗೆ ಕುಮಟಾದಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ರವಿವಾರ ಸಂಜೆ ರೂಟ್‌ ಮುಗಿದ ನಂತರ ಚಾಲಕ ಬಸ್ಸನ್ನು ಡಿಪೋದಲ್ಲಿ ನಿಲ್ಲಿಸಿಟ್ಟಿದ್ದರು. ಬಸ್ಸಿನ ಬಾಗಿಲು-ಕಿಟಕಿ ಬಂದ್ ಮಾಡಿ ಬಸ್‌ ಚಾಲಕ ಮನೆಗೆ ಹೋಗಿದ್ದರು. ಆದರೆ, ಸೋಮವಾರ ನಸುಕಿನ ಜಾವ ೨ ಗಂಟೆ ವೇಳೆಗೆ ಬಸ್ಸಿನಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದ್ದು, ಇದಕ್ಕಿದ್ದಂತೆ ಇಡೀ ಬಸ್‌ ಹೊತ್ತಿ ಉರಿದಿದೆ (Bus caught fire).

ಇದನ್ನೂ ಓದಿ :  ಜ.೧೪ರಿಂದ ಅಳ್ವೆಕೋಡಿಯಲ್ಲಿ ಮಾರಿ ಜಾತ್ರಾ ಮಹೋತ್ಸವ

ಬಸ್ ಡಿಪೋದಲ್ಲಿದ್ದ ಮೆಕಾನಿಕ್ ಬಸ್ಸು ಉರಿಯುತ್ತಿರುವುದನ್ನು ಗಮನಿಸಿ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಬಸ್ಸು ಸುಟ್ಟು ಕರಕಲಾಗಿತ್ತು. ಸ್ಥಳಕ್ಕೆ ಪೊಲೀಸರು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ :   ಜ.೧೪ರಿಂದ ಅಳ್ವೆಕೋಡಿಯಲ್ಲಿ ಮಾರಿ ಜಾತ್ರಾ ಮಹೋತ್ಸವ