ಕಾರವಾರ (Karwar): ಹಿರಿಯ ಚಿತ್ರ ಕಲಾವಿದ (Artist) ಹಾಗೂ ಮೀನುಗಾರ ಸಮಾಜದ ಹಿರಿಯರಾಗಿದ್ದ ತೇಕು ವಿಠೋಬ ತಾಂಡೇಲ (85) ನಿನ್ನೆ ಸೋಮವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಾದ ನಂದೇಶ್‌, ಜ್ಞಾನೇಶ್ವರ, ಪುತ್ರಿಯರಾದ ಭಾರತಿ, ಆಶಾ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳು ಇದ್ದಾರೆ. ಚಿತ್ತಾಕುಲ ಸೀಬರ್ಡ್‌ ಕಾಲೋನಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತೇಕು ತಾಂಡೇಲ ರಚಿಸಿದ ಚಿತ್ರಕಲೆಗಳಿಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ತಾಲೂಕು, ಸ್ಥಳೀಯ ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಜಿಲ್ಲಾ ಮಟ್ಟದ ಪ್ರಶಸ್ತಿಗಳು ಕೂಡ ಅವರಿಗೆ ಬಂದಿವೆ. ವ್ಯಕ್ತಿ ಚಿತ್ರ, ಪ್ರಕೃತಿ, ಪರಿಸರ ಸೇರಿದಂತೆ ವಿವಿಧ ಚಿತ್ರಕಲೆಗಳು ಅವರ ಕಲಾ ಕುಂಚದಿಂದ ಅರಳಿವೆ. ಅವರು ಪುಸ್ತಕ ರೂಪದಲ್ಲಿಯೂ ಕೂಡ ಅವರು ಬಿಡಿಸಿದ ಚಿತ್ರಗಳನ್ನು ಸಂಗ್ರಹ ಮಾಡಿದ್ದಾರೆ. ಕಳೆದ ಬಾರಿ ಅವರು ರಾಜ್ಯೋತ್ಸವ (Rajyotsava) ಪ್ರಶಸ್ತಿಗೆ ಅರ್ಜಿ ಹಾಕಿದ್ದರೂ, ತಮ್ಮನ್ನು ಜಿಲ್ಲಾಡಳಿತ ಗುರುತಿಸದೇ ಇರುವುದಕ್ಕೆ ಹಿರಿಯ ಕಲಾವಿದ (Artist) ತೇಕು ತಾಂಡೇಲ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ :   ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಹಿತ ೭ ಜನರ ವಿರುದ್ಧ ದೂರು ದಾಖಲು