ಭಟ್ಕಳ (Bhatkal) : ಇಲ್ಲಿನ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಶ್ರೀ ಗುರು ಸುಧೀಂದ್ರ (Guru Sudheendra) ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಬಿಸಿಎ ವಿದ್ಯಾರ್ಥಿಗಳಿಗೆ “ಕೃತಕ ಬುದ್ಧಿಮತ್ತೆ (AI) ಹಾಗೂ ಸೈಬರ್ ಭದ್ರತೆ (cyber security)’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಮೇರಿಕಾದ ಟೆಕ್ಸಾಸ್ ಎರಿಲ್ಗಂಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಲಲಿತ್ ಕೆ.ಎಂ. ಮಾತನಾಡಿ, “ಕೃತಕ ಬುದ್ಧಿಮತ್ತೆ ಈ ಯುಗದ ಆವಿಷ್ಕಾರದ ಹೊಸ ಮೈಲಿಗಲ್ಲು. ಯುವಜನತೆ ಸೂಕ್ತವಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು. ಸೈಬರ್ ಅಪರಾಧ ವಿವಿಧ ಆಯಾಮ ಮತ್ತು ಭದ್ರತಾ ಕ್ರಮಗಳ ಕುರಿತು ವಿವರವಾಗಿ ಅವರು ವಿಶ್ಲೇಷಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಗಣ್ಯರ, ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸುವ ಮೂಲಕ ಸೂಕ್ತ ಮಾರ್ಗದರ್ಶನ ನೀಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ : ದೇವರ ಸೇವೆ ಮಾಡಿದ ಮಂಕಾಳ ವೈದ್ಯ
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ, “ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಕೌಶಲ್ಯಯುತ ಶಿಕ್ಷಣ ನೀಡುವುದು ನಮ್ಮ ಆದ್ಯತೆ. ವಿಶೇಷವಾಗಿ ನಮ್ಮ ಬಿಸಿಎ ವಿಭಾಗ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ರೊಬೋಟಿಕ್ಸ್ ಲ್ಯಾಬ್ಗಳ’ನ್ನು ನಿರ್ಮಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ : ತವರಿಗೆ ಆಗಮಿಸಿದ ನಿವೃತ್ತ ಯೋಧಗೆ ಸ್ವಾಗತ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಚೇರಮನ್ ಡಾ. ಸುರೇಶ ನಾಯಕ ಮಾತನಾಡಿ, “ವಿದ್ಯಾರ್ಥಿಗಳು ಎಲ್ಲ ಆಧುನಿಕ ತಂತ್ರಜ್ಞಾನವನ್ನು ಆಧಾರಿತ ಕೌಶಲ್ಯವನ್ನು ರೂಢಿಸಿಕೊಂಡು ಉದ್ಯೋಗ ಸೃಷ್ಟಿಸುವಂತರಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಿಸಿ” ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಎ.ಐ. ಮಶೀನ್ ಲರ್ನಿಂಗ್ ಹಾಗೂ ಸೈಬರ್ ಸೆಕ್ಯುರಿಟಿ ((cyber security) ಕುರಿತ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮದ ಪೋಸ್ಟರನ್ನು ಅನಾವರಣ ಗೊಳಿಸಲಾಯಿತು.
ಇದನ್ನೂ ಓದಿ : ಹಿರಿಯ ನ್ಯಾಯವಾದಿ, ನೋಟರಿ ಶ್ರೇಷ್ಠಿ ನಿಧನ
ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಸಿಎ ವಿಭಾಗದ ಉಪಪ್ರಾಂಶುಪಾಲ ವಿಖ್ಯಾತ ಪ್ರಭು ವಂದಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಟ್ಕಳದ ರೋಟರಿ ಕ್ಲಬ್’ ಖಜಾಂಚಿ ಶ್ರೀನಿವಾಸ ಪಡಿಯಾರ, ಉಶಿರಾ ಸಂಸ್ಥೆಯ ಮುಖ್ಯಸ್ಥ ಮ್ಯಾಥ್ಯೂ, ಶಿರೂರಿನ ಉದ್ಯಮಿ ನಾರಾಯಣ ಮೇಸ್ತ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಆಂದೋಲನ ಮಾದರಿಯಲ್ಲಿ ಬಗರಹುಕುಂ ಅರ್ಜಿ ವಿಲೇವಾರಿ