ಭಟ್ಕಳ (Bhatkal) : ಹೆಂಡತಿ ಮನೆಗೆಂದು ಹೋದ ಇಂಜಿನಿಯರ್ (Engineer) ಮನೆಯ ದಾರಿಯಲ್ಲಿ ಮೃತಪಟ್ಟು ಬಿದ್ದಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಜಾಮಿಯಾಬಾದ ರಸ್ತೆಯಲ್ಲಿರುವ ಫಿರ್ದೋಸ್ ನಗರದ ಮದೀನಾ ಕಾಲೋನಿಯ ಮೋಟಿಯಾ ಗಾರ್ಡನ್ ವಾಸಿ ಮೊಹಮ್ಮದ ಫಹಾದ ತಂದೆ ಫಾರೂಕ್ ಮೋಟಿಯಾ (೩೭) ಮೃತ ವ್ಯಕ್ತಿ. ಇವರು ಸಿವಿಲ್ ಇಂಜಿನಿಯರ್ (Engineer) ಆಗಿದ್ದಾರೆ. ನಿನ್ನೆ ಡಿ.೭ರಂದು ರಾತ್ರಿ ೮.೪೫ಕ್ಕೆ ಹುರುಳಿಸಾಲ ಗುಡಲಕ್ ರಸ್ತೆಯಲ್ಲಿರುವ ತಮ್ಮ ಹೆಂಡತಿ ಮನೆಗೆ ಹೋಗಿದ್ದರು. ರಾತ್ರಿ ೯.೩೦ರ ಸುಮಾರಿಗೆ ಹೆಂಡತಿ ಮನೆಯ ದಾರಿಯಲ್ಲಿ ಮೃತಪಟ್ಟು ಬಿದ್ದುಕೊಂಡಿದ್ದು, ಸಾವಿನಲ್ಲಿ ಸಂಶಯವಿದೆ ಎಂದು ದೂರಿನಲ್ಲಿ (complaint) ತಿಳಿಸಲಾಗಿದೆ. ಈ ಕುರಿತು ಮದಿಹಾ ಅಬ್ದುಲ್ ಬಾಕಿ(೩೮) ಎಂಬುವವರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕಾರು ಡಿಕ್ಕಿಯಾಗಿ ಅಪರಿಚಿತ ಸಾವು; ಯಾರಿವರು ಗೊತ್ತಾ?