ಹುಬ್ಬಳ್ಳಿ (Hubballi) : ಇಲ್ಲಿನ ಸಾಯಿ ನಗರದ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್ ಸೋರಿಕೆಯಾಗಿ (cylinder leak) ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಒಂಭತ್ತು ಜನ ಅಯ್ಯಪ್ಪ (Ayyappa) ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿಂಗಪ್ಪ ಮಲ್ಲಪ್ಪ ಬೇಪೂರು (೬೦) ಮತ್ತು ಸಂಜಯ ಪ್ರಕಾಶ ಸವದತ್ತಿ (೧೮) ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಡಿ.೨೬ರಂದು ಬೆಳಿಗ್ಗೆ ಇಬ್ಬರೂ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರಿದಿದೆ. ಭಾನುವಾರ ತಡರಾತ್ರಿ ಗ್ಯಾಸ್ ಲೀಕ್ ಆಗಿ, ದೀಪದಿಂದ ಬೆಂಕಿ ತಗುಲಿ ಸಿಲಿಂಡರ್ ಸ್ಪೋಟಗೊಂಡಿತ್ತು.  ಕೂದಲೆಳೆ ಅಂತರದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿತ್ತು. ನಿಂಗಪ್ಪ, ವಿನಾಯಕ, ಪ್ರಕಾಶ, ಶಂಕರ, ಮಂಜುನಾಥ, ಸಂಜಯ, ಪ್ರವೀಣ, ತೇಜಸ ಎಂಬ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು.

ಇದನ್ನೂ ಓದಿ :  ಡಿ.೨೭ರಂದು ಉತ್ತರ ಕನ್ನಡ ಸಹಿತ ಹಲವೆಡೆ ಮಳೆ

ಓರ್ವ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.  ಮತ್ತಷ್ಟು ಹೆಚ್ಚಿನ‌ ಚಿಕಿತ್ಸೆ ಹಿನ್ನೆಲೆ ಬೆಂಗಳೂರು‌ (Bengaluru) ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ಪ್ಲಾಸ್ಟಿಕ್ ಸರ್ಜನ್ ಡಾ.ಸ್ಮಿತಾ, ಧಾರವಾಡ (Dharwad) ಎಸ್‌ಡಿಎಂ ಯುನಿವರ್ಸಿಟಿಯ (SDM University) ವೈಸ್‌ ಚಾನ್ಸಲರ್‌ ಡಾ.ನಿರಂಜನಕುಮಾರ ಸಹಿತ ಇಂಟರನೆಟ್‌ ಮೂಲಕ ಅಂತಾರಾಷ್ಟ್ರೀಯ ಮಟ್ಟದ ವಿದೇಶದ ವೈದ್ಯರ ಸಲಹೆ ಪಡೆಯಲಾಗುತ್ತಿದೆ. ೯ ಜನರಲ್ಲಿ ಬಹುತೇಕರಿಗೆ ೮೦ ರಿಂದ ೯೦ ಶೇಕಡಾ ಸುಟ್ಡ ಗಾಯವಾಗಿವೆ. ಶೇ.೨೦ ರಷ್ಟು ಸುಟ್ಟಗಾಯವಾಗಿರೋ ವಿನಾಯಕ ಮೇಲೆ ವಿಶೇಷ ನಿಗಾ ಇಡಲಾಗಿದೆ.

ಇದನ್ನೂ ಓದಿ :  ಮೋರಿಗೆ ಕಾರು ಡಿಕ್ಕಿ; ಅಣ್ಣನ ವಿರುದ್ಧ ತಮ್ಮನಿಂದ ದೂರು

ಸುದ್ದಿ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ (Santosh Lad) ಕಿಮ್ಸ್‌ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದಾರೆ. ಮೃತಪಟ್ಟ ಅಯ್ಯಪ್ಪ (Ayyappa) ಮಾಲಾಧಿಗಾರಿಗಳ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.  ಸರ್ಕಾರ, ಜಿಲ್ಲಾಡಳಿತ, ಕಿಮ್ಸ್ ವೈದ್ಯರು ಅವರನ್ನ ಬದುಕಿಸಲು ಪ್ರಯತ್ನ ಮಾಡಿತು. ನಾಲ್ವರು ಎಕ್ಸ್ಪೋರ್ಟ್ ವೈದ್ಯರನ್ನ ಕರೆಯಿಸಿ ಬದುಕಿಸಲು ಸಕಲ ಪ್ರಯತ್ನ ಮಾಡಲಾಗಿತ್ತು. ಆದರೆ ಇದನ್ನ ಮೀರಿ ಸುಟ್ಟ ಪ್ರಮಾಣ ಹೆಚ್ಚಾಗಿದ್ದರಿಂದ ಉಳಿಸಿಕೊಳ್ಳಲಾಗಲ್ಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :  ಟ್ಯಾಕ್ಸಿಗೆ ಬೈಕ್‌ ಡಿಕ್ಕಿ; ಗಾಯಾಳು ವಿರುದ್ಧ ದೂರು

ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ನಷ್ಟ ಎದುರಿಸುವ ಶಕ್ತಿ ಆ ಕುಟುಂಬಕ್ಕೆ ನೀಡಲಿ. ಮುಖ್ಯಮಂತ್ರಿ (CM Siddaramaiah) ಸಹ ಆ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೃತ ಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ನಿರ್ದೇಶನದ ಮೇಲೆ ಸರ್ಕಾರದಿಂದ ೫ ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ.  ಉಳಿದವರ ಕುಟುಂಬದ ಜೊತೆ ಸಮಾಲೋಚನೆ ಮಾಡಿ ಇನ್ನೂ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತೆ ಎಂದು ಸಚಿವ ಲಾಡ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ :  ಭಟ್ಕಳದ ಮೂವರು ಉಗ್ರರಿಗೆ ಶಿಕ್ಷೆ ಪ್ರಕಟ