ಭಟ್ಕಳ: ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ (Bike skid) ಆಗಿ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಕ್ ಚಲಾಯಿಸುತ್ತಿದ್ದ ಭಟ್ಕಳ ತಾಲೂಕಿನ ಬೇಂಗ್ರೆ ಮಾವಿನಕಟ್ಟೆಯ ನಿವಾಸಿ ಕಮಲೇಶ ತಂದೆ ಕೃಷ್ಣ ದೇವಡಿಗ (೩೩) ಮತ್ತು ಹಿಂಬದಿ ಸವಾರ ಶಿರಾಲಿಯ ಪ್ರದೀಪ ತಂದೆ ಗಜಾನನ ದೇವಡಿಗ (೩೮) ಗಾಯಗೊಂಡವರು. ದಿನಾಂಕ: ೦೬-೦೨-೨೦೨೬ರಂದು ಸಂಜೆ ೭:೧೫ ಗಂಟೆಯ ಸುಮಾರಿಗೆ ಕೊಲ್ಲೂರು ಕಡೆಯಿಂದ ಭಟ್ಕಳಕ್ಕೆ ಬರುತ್ತಿರುವಾಗ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೬ರ ಸರ್ಪನಕಟ್ಟಾ ಅಯ್ಯಪ್ಪ ದೇವಸ್ಥಾನದ ಹತ್ತಿರ ಅಪಘಾತ ನಡೆದಿದೆ. ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ಡಾಗಿದೆ (Bike skid).
ಇದನ್ನು ಓದಿ: Makkala Santhe/ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಸಂತೆ
ಸವಾರರಿಬ್ಬರು ರಸ್ತೆಯ ಮೇಲೆ ಬಿದ್ದಿದ್ದು, ಹಿಂಬದಿ ಸವಾರ ಪ್ರದೀಪ ಅವರಿಗೆ ತಲೆ, ಎಡಗೈ, ಬಲಗೈ, ಬಲಗಾಲು ಮಂಡಿ ಹತ್ತಿರ ರಕ್ತ ಗಾಯ ಮತ್ತು ಬೈಕ್ ಚಲಾಯಿಸುತ್ತಿದ್ದ ಕಮಲೇಶ ಅವರ ತಲೆಯ ಹಿಂಬದಿಯಲ್ಲಿ ಗಾಯವಾಗಿದೆ. ಬೈಕ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಆರೋಪದ ಮೇಲೆ ಸವಾರ ಕಮಲೇಶ ವಿರುದ್ಧ ಹಿಂಬದಿ ಸವಾರ ಪ್ರದೀಪ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಸಹಿತ ಇದನ್ನು ಓದಿ: Chariot festival/ ಭಟ್ಕಳದ ಸೋನಾರಕೇರಿಯಲ್ಲಿ ರಥೋತ್ಸವ ವೈಭವ



