ಯಲ್ಲಾಪುರ (Yallapur ): follow up/ ತಾಲೂಕಿನ ಅರಬೈಲ್ ಘಟ್ಟದಲ್ಲಿ (Arabail ghat) ನಡೆದ ಅಪಘಾತದಲ್ಲಿ ಗಾಯಗೊಂಡ ಮತ್ತೊಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ ೧೦ಕ್ಕೆ ಏರಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಳಗ್ಗೆ ೪.೩೦ರ ಸುಮಾರಿಗೆ ಲಾರಿ ವಿದ್ಯುತ್ ಕಂಬಕ್ಕೆ ತಗುಲಿ, ಪಲ್ಟಿಯಾಗಿ ೫ ಅಡಿ ಕಂದಕಕ್ಕೆ ಬಿದ್ದಿತ್ತು. ಬೆಳಗ್ಗೆ ೫ ಗಂಟೆಗೆ ಪೊಲೀಸರಿಗೆ ವಿಷಯ ತಿಳಿದು, ಕ್ರೇನ್ ಜೊತೆ ಜನರು ಬೆಳಿಗ್ಗೆ ೬ ಗಂಟೆಗೆ ತಲುಪಿದ್ದರು. ಲಾರಿಯಲ್ಲಿ ೮ ಮೃತದೇಹಗಳು ಪತ್ತೆಯಾಗಿತ್ತು. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಇನ್ನೂ ಒಬ್ಬರು ಸತ್ತರು. ಒಟ್ಟು ೯ ಮೃತದೇಹಗಳು ಯಲ್ಲಾಪುರ ಆಸ್ಪತ್ರೆಯಲ್ಲಿವೆ.

ಇದನ್ನು ಓದಿ : ಭೀಕರ ಅಪಘಾತದಲ್ಲಿ ೯ ಜನ ದುರ್ಮರಣ

ಯಲ್ಲಾಪುರದಲ್ಲಿ ೪ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೧೫ ಜನರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಸಾಗಿಸಲಾಗಿದೆ. ಇದೇ ವೇಳೆ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಜಲಾಲ್ ತಾರಾ ಎಂಬುವವರು ಸಾವನ್ನಪ್ಪಿದ್ದಾರೆ. ಹಾಗಾಗಿ ಮೃತರ ಸಂಖ್ಯೆ ೧೦ಕ್ಕೆ ಏರಿದೆ. ೧೮ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸದ್ಯ ನಾಲ್ವರು ಯಲ್ಲಾಪುರ ಆಸ್ಪತ್ರೆಯಲ್ಲಿ, ೧೪ ಜನರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ : ಐದು ದಿನಗಳಾದರೂ ಮನೆಗೆ ಬಾರದ ಯುವತಿ

ಮೃತಪಟ್ಟವರು:
೧. ಫಯಾಜ್‌ ತಂದೆ ಇಮಾಮ್‌ಸಾಬ್‌ (೪೫), ಜಮಖಂಡಿ
೨. ವಾಸಿಮ್‌ ತಂದೆ ಮುಲ್ಲಾ (೨೫) ಮುಡಿಗೇರಿ
೩. ಇಜಾಜ್‌ ತಂದೆ ಮುಷ್ತಾಕ್ ಮುಲ್ಲಾ (೨೦)
೪. ಸಾದುಕ್‌ ತಂದೆ ಬಾಷಾ ಪರಾಸ್‌ (೩೦)
೫. ಗುಲಾಮ್‌ ಹುಸೇನ್‌ ತಂದೆ ಗುಡುಸಾಬ್‌ ಜವಳಿ
೬. ಇಮ್ತಿಯಾಜ್ ತಂದೆ ಮೊಹಮ್ಮದ್‌ ಜಾಪರ್‌ ಮುಡಗೇರಿ (೪೦)
೭. ಅಲ್ಪಾಜ್‌ ತಂದೆ ಜಾಫರ್ ಮಂಡಕಿ (೨೫)
೮. ಜಿಲಾನಿ ತಂದೆ ಅಬ್ದುಲ್‌ ಗಪಾರ್‌ ಜಕಾತಿ (೨೦)
೯. ಅಸ್ಲಾಂ ತಂದೆ ಬಾಬು ಬೇಣ್ಣಿ (೨೪) ವರ್ಷ
೧೦. ಜಲಾಲ್‌ ತಾರಾ (೩೦)

ವಿಡಿಯೋ ಸಹಿತ ಇದನ್ನು ಓದಿ : ಪೊಲೀಸರ ವಿರುದ್ಧ ಆಟೋ ಚಾಲಕರ ದಿಢೀರ್ ಪ್ರತಿಭಟನೆ

ಹುಬ್ಬಳಿ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವವರು:
೧. ಅಶ್ರಪ್‌ ತಂದೆ ನಬಿ ಸಾಬ್‌, ಲಾರಿ ಡ್ರೈವರ್‌ (೧೮)
೨. ಖ್ವಾಜಾ ತಂದೆ ಮೊಹಮ್ಮದ್‌ ಗೌಸ್ ಕಿಸಮತಗಾರ್‌ (೨೨)
೩. ಮೊಹಮ್ಮದ್‌ ಸಾದಿಕ ತಂದೆ ಖ್ವಾಜಾಮೀರ್‌ ಬತ್ತೇರಿ (೨೫)
೪. ಖ್ವಾಜಾ ಮೈನು ತಂದೆ ಬಷೀರ್‌ ಅಹಮ್ಮದ್‌ ಕಾಲೆಕಾಲನ್ನವರ್‌ (೨೪)
೫. ನಿಜಾಮ್‌ (೩೦)
೬. ಮದ್ಲಾನ್‌ ಸಾಬ್‌ (೨೪)
೭. ಜಾಫರ್‌ ತಂದೆ ಮುಕ್ತಿಯಾರ್‌ ಪ್ರಾಸ್‌ (೨೨)

ಇದನ್ನು ಓದಿ : ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲಿಯೇ ಸಾವು

ಯಲ್ಲಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು :
೧. ಮಲ್ಲಿಕ ರೆಹಾನ್‌ ತಂದೆ ಮೊಹಮ್ಮದ್‌ ರಫೀಕ್‌ ಅಕ್ಕಿ (೨೧)
೨. ಅಫ್ತಾಬ್ ತಂದೆ ಬಷೀರ್‌ ಅಹಮ್ಮದ್‌ ಮಂಚಕಿ (೨೩)
೩. ಗೌಸ್‌ ಮೈದ್ದೀನ್‌ ತಂದೆ ಅಬ್ದುಲ್‌ ಗಣಿ ಬೊಮ್ಮನಹಳ್ಳಿ (೩೦)
೪. ಇರ್ಪಾನ್‌ ತಂದೆ ಮುಕ್ಷುಲ್‌ ಗುಡಿಗೇರಿ (೧೭)
೫. ನೂರ ಅಹಮ್ಮದ್‌ ತಂದೆ ಮೊಹಮ್ಮದ್‌ ಜಾಪರ್‌ ಜಮಖಂಡಿ (೩೦)
೬. ಅಪ್ಸರ್‌ ಕಾಂಜಾಡ್‌ (೩೪)
೭. ಸುಭಾಷ ಗೌಡರ್‌ (೧೭)
೮. ಖಾದ್ರಿ ತಂದೆ ಗೂಡು ಸಾಬ್‌ ಜವಳಿ (೨೬)
೯. ಸಾಬೀರ್‌ ಅಹಮ್ಮದ ಬಾಬಾ ಹುಸೇನ್‌ ಗವಾರಿ (೩೮)
೧೦. ಮರ್ದಾನ್‌ ಸಾಬ್‌ ತಂದೆ ಕಮಲ್‌ ಬಾಷಾ ತಾರಾಡಿಗ (೨೨)
೧೧. ರಪಾಯಿ ತಂದೆ ಬಾಕರ್‌ ಚೌರ (೨೧)
೧೨. ಮೊಹಮ್ಮದ್‌ ಗೌಸ ತಂದೆ ಗಫಾರ್ ಅಕ್ತರ್‌ (೨೨)

(Follow up)

ಇದನ್ನು ಓದಿ : ನಾಲ್ಕನೆಯ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ