ಭಟ್ಕಳ (Bhatkal) : ಶನಿವಾರದಂದು ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲ್ ಕಮಲಾವತಿ ಶಾನಭಾಗ ಸಭಾಂಗಣದಲ್ಲಿ ನಡೆದ ಉತ್ತರ ಕನ್ನಡ (Uttara Kannada) ಜಿಲ್ಲಾ ಮಟ್ಟದ ಜನಸ್ಪಂದನ (Janaspandana) ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಉದ್ಘಾಟಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆರನೇ ಜಿಲ್ಲಾ ಮಟ್ಟದ ಜನಸ್ಪಂದನ (Janaspandana) ಕಾರ್ಯಕ್ರಮ ಇದಾಗಿದೆ. ಈ ಹಿಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದಿರುವಂತಹ ಅರ್ಜಿಗಳನ್ನು ಈ ಪೈಕಿ ೯೦% ವಿಲೇವಾರಿ ಮಾಡಿ ಉಳಿದ ಸಮಸ್ಯೆಗಳಿಗೆ ಪರಿಹಾರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅದರಂತೆ ಇಂದು ಕೂಡಾ ಜನರು ಸಮಸ್ಯೆಗಳನ್ನು ಹೊತ್ತು ಇಲ್ಲಿಗೆ ಬಂದಿದ್ದೀರಿ. ಅರ್ಜಿದಾರರಿಗೆ ಪರಿಹಾರ ಮಾಡಿಕೊಡಲಾಗುವುದು. ಇಲ್ಲಿ ಆಗದೆ ಇರುವ ಅರ್ಜಿಗಳನ್ನು ಕೆಲವೇ ದಿನಗಳಲ್ಲಿ ಇತ್ಯರ್ಥ ಮಾಡಿಕೊಡಲಾಗುತ್ತದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಇದನ್ನೂ ಓದಿ : mock drill / ಭಟ್ಕಳ ಬಂದರಿನಲ್ಲಿ ಅಣಕು ಕಾರ್ಯಾಚರಣೆ
ಒಂದು ವೇಳೆ ನಿಮ್ಮ ಕೆಲಸ ಇಲ್ಲಿ ಇತ್ಯರ್ಥ ಆಗದೆ ಇದ್ದಲ್ಲಿ ಮುಂದಿನ ೧೦ ದಿನಗಳಲ್ಲಿ ಪರಿಹರಿಸಿಕೊಡಲಾಗುವುದು. ಜನರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕಾರವಾರಕ್ಕೆ ಜಿಲ್ಲಾಧಿಕಾರಿ ಬಳಿ ಹೊತ್ತುಕೊಂಡು ಬರುವ ಪರಿಸ್ಥಿತಿ ಇರಬಾರದು. ಸ್ಥಳೀಯ ಮಟ್ಟದಲ್ಲೇ ಪರಿಹಾರ ಕೊಡಬೇಕು ಎಂಬುದು ಉದ್ದೇಶ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಪರಿಹಾರ ಸಿಗದಿದ್ದರೆ ರಾಜ್ಯ ಮಟ್ಟದಲ್ಲಿ ಪರಿಹಾರ ಕೊಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ : motorcycle collision/ ಮೋಟಾರ್ ಸೈಕಲ್ ಡಿಕ್ಕಿಯಾಗಿ ಇಬ್ಬರಿಗೆ ಗಾಯ
೧೨ ತಾಲೂಕುಗಳ ೨೪ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ಹಾಗೂ ಕ್ರೋಮ್ ಬುಕ್ಗಳನ್ನು ನೀಡಲಾಯಿತು. ನೇಮಕಾತಿ ಆದೇಶ ಪ್ರತಿಗಳನ್ನು ಮಂಜೂರು ಮಾಡಲಾಯಿತು. ಮೀನುಗಾರಿಕೆ ನಡೆಸುತ್ತಿರುವಾಗ ಆಕಸ್ಮಿಕ ನಿಧನ ಹೊಂದಿರುವವರಿಗೆ ಇಲಾಖೆಯಿಂದ ಸಂಕಷ್ಟ ಪರಿಹಾರ ನಿಧಿಯಿಂದ ೧೦ ಲಕ್ಷ ಮಂಜೂರಾತಿ ಪತ್ರ ನೀಡಲಾಯಿತು.
ಇದನ್ನೂ ಓದಿ : vishwakarma trophy/ ರಾಜು ಬಾಯ್ಸ್ ಮಡಿಲಿಗೆ ವಿಶ್ವಕರ್ಮ ಟ್ರೋಫಿ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರೀಯಾ, ಅಪರ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ, ಗ್ಯಾರಂಟಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಕಾಂದೂ, ಕುಮಟಾ (Kumta) ಸಹಾಯಕ ಆಯುಕ್ತ ಕನಿಷ್ಕ, ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ. ಪುರಸಭೆ ಪ್ರಭಾರ ಅಧ್ಯಕ್ಷ ಅಲ್ತಾಫ್ ಖರೂರಿ ಉಪಸ್ಥಿತರಿದ್ದರು. ಭಟ್ಕಳ ಸಹಾಯಕ ಆಯುಕ್ತೆ ಕಾವ್ಯ ರಾಣಿ ಸ್ವಾಗತಿಸಿದರು. ಜಿಲ್ಲೆಯಿಂದ ಬಂದ ಅನೇಕರು ತಮ್ಮ ಅಹವಾಲುಗಳ ಅರ್ಜಿಗಳನ್ನು ಹಾಗೂ ತಮ್ಮ ಸಮಸ್ಯೆಗಳನ್ನು ಸಚಿವರು ಮತ್ತು ಅಧಿಕಾರಿಗಳ ಮುಂದೆ ಇಟ್ಟರು.
ಇದನ್ನೂ ಓದಿ : black belt / ಬ್ಲ್ಯಾಕ್ ಬೆಲ್ಟ್ ಪ್ರದಾನ