ಭಟ್ಕಳ: ಜೋಕಾಲಿ ಆಡುವಾಗ ಕುತ್ತಿಗೆಗೆ ಚೂಡಿದಾರದ ಶಾಲು ಅಕಸ್ಮಾತಾಗಿ ಬಿಗಿದು ಅಸ್ವಸ್ಥಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೆ ಮೃತಪಟ್ಟ ದುರ್ಘಟನೆ ಭಟ್ಕಳ (Bhatkal) ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ (tragic incident).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತೆರ್ನಮಕ್ಕಿ ಸಬ್ಬತ್ತಿ ನಿವಾಸಿ ಪ್ರಣಿತಾ ಜಗನ್ನಾಥ ನಾಯ್ಕ(12) ಮೃತ ಬಾಲಕಿ. ಮಳೆ ಹಿನ್ನೆಲೆ ಗುರುವಾರ ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ಜೋಕಾಲಿಗೆ ಕಟ್ಟಿದ ಚೂಡಿದಾರದ ಶಾಲು ಬಾಲಕಿಯ ಕುತ್ತಿಗೆಗೆ ಬಿಗಿದು ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೆ ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದಲ್ಲೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ (tragic incident). ಈ ಕುರಿತು ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

ಇದನ್ನು ಓದಿ: stolen car recovered/ ಭಟ್ಕಳದಲ್ಲಿ ಕಳವಾದ ಡಿಜೈರ್‌ ಕಾರು 48 ಗಂಟೆಯಲ್ಲಿ ಪತ್ತೆ