ಭಟ್ಕಳ: ಮುರ್ಡೇಶ್ವರ (Murudeshwar) ಜಾತ್ರಾ ಸಮಯದಲ್ಲಿ ರಿಕ್ಷಾ ನಿಲ್ಲಿಸಲು ಸೂಕ್ತ ಸ್ಥಳದ ವ್ಯವಸ್ಥೆ ಮಾಡಿಕೊಡುವಂತೆ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘ (ರಿ) ಮಾವಳ್ಳಿ, ಮುರ್ಡೇಶ್ವರ ವತಿಯಿಂದ ಮಾವಳ್ಳಿ 2 ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
“ಪ್ರತಿ ವರ್ಷ ನಡೆಯವ ಮಾತೋಭಾರ ಶ್ರೀ ಮುರ್ಡೇಶ್ವರ (Murudeshwar) ಜಾತ್ರಾ ಸಮಯದಲ್ಲಿ ದೇವಸ್ಥಾನ ಬಳಿ ಮಾವಳ್ಳಿ ಗ್ರಾಮ ಪಂಚಾಯತ್ ಎದುರು ಮತ್ತು ಕಲ್ಯಾಣಿ ಹಿಂಭಾಗದಲ್ಲಿ ಇರುವ ಪ್ರಮುಖ ರಿಕ್ಷಾ ನಡೆಯುವ ನಿಲ್ದಾಣದಲ್ಲಿ ನಿಲ್ಲುವ ಎಲ್ಲಾ ರಿಕ್ಷಾಗಳನ್ನು ರಥೋತ್ಸವ ದಿನದಿಂದ 3 ದಿನಗಳ ಕಾಲ ಮಧ್ಯಾಹ್ನ 2ರಿಂದ ರಾತ್ರಿ 9 ಗಂಟೆಯವರೆಗೆ ಬಸ್ ನಿಲ್ದಾಣದ ಒಳಗಡೆ ರಿಕ್ಷಾ ನಿಲ್ಲಿಸಿ ಸಾರ್ವಜನಿಕರ ಸೇವೆಯ ಜೊತೆಗೆ ಬಾಡಿಗೆ ಮಾಡಿ ಜೀವನ ನಡೆಸಲಾಗುತ್ತಿತ್ತು. ಕಳೆದ ವರ್ಷ ಕೂಡ ನಡೆದ ಜಾತ್ರಾ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬಸ್ ನಿಲ್ದಾಣದ ಒಳಗಡೆ ರಿಕ್ಷಾ ನಿಲ್ಲಿಸಿ ಬಾಡಿಗೆ ಮಾಡಿದ್ದೇವು. ರಥೋತ್ಸವ ನಡೆದ ಮಾರನೆಯ ದಿನ ಅಂದರೆ ದಿನಾಂಕ 20/01/2024 ರ ಸಂಜೆ 6:30 ಸುಮಾರಿಗೆ ಜಯಾ ಪ್ಯಾರಡೈಸ್ ಲಾಡ್ಜ್ ಹೋಗುವ ಕ್ರಾಸ್ ಬಳಿ ಹಾಕಿದ ಬ್ಯಾರಿಕೇಡ್ ಗೇಟ್ ಹತ್ತಿರ ಕರ್ತವ್ಯದಲ್ಲಿ ಇದ್ದ ಪೋಲಿಸರು ನಮ್ಮ ಸಂಘಕ್ಕೆ ಯಾವುದೇ ಪೂರ್ವ ಮಾಹಿತಿ ಕೊಡದೆ ಏಕಾಏಕಿ ಬ್ಯಾರಿಕೇಡ್ ಗೇಟ್ ಹಾಕಿ ಆಟೋ ರಿಕ್ಷಾ ಬಸ್ ನಿಲ್ದಾಣದವರೆಗೆ ಹೋಗುವುದಕ್ಕೆ ತಡೆ ಮಾಡಿದ್ದರು ಮತ್ತು ಪ್ರವಾಸಿಗರ ವಾಹನ ಮತ್ತು ಸರ್ಕಾರಿ ಬಸ್ ಜಾತ್ರಾ ಪೇಟೆಯ ಒಳಗಡೆ ಹೋಗುವುದಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ಮುರ್ಡೇಶ್ವರ ಗೇಟ್ ನಿಂದ ಬಾಡಿಗೆ ತೆಗೆದುಕೊಂಡು ಬಂದ ನಮ್ಮ ಆಟೋ ಚಾಲಕರ ಆಟೋ ಮತ್ತು ಭಟ್ಕಳ ತಾಲ್ಲೂಕಿನಾದ್ಯಂದ ಜಾತ್ರಾ ಪೇಟೆಗೆ ಬಂದ ವಾಹನಗಳು ಇದರ ಜೊತೆಗೆ ಪ್ರವಾಸಿಗರ ವಾಹನ ಸೇರಿ ಟ್ರಾಫಿಕ್ ಜಾಮ್ ಆಗಿದ್ದು, ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು ಮತ್ತು ಚಾಲಕರ ಆಟೋ ಮುಂದೆ ಹೋಗಲು ಆಗದೆ ಹಿಂದೆ ಹೋಗಲು ಆಗದೆ ತುಂಬಾ ತೊಂದರೆ ಪಟ್ಟಿದ್ದರು. ರಿಕ್ಷಾ ನಿಲ್ಲಿಸಲು ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಬ್ಯಾರಿಕೇಡ್ ಗೇಟ್ ಹಾಕಿದನ್ನು ಅನಿವಾರ್ಯವಾಗಿ ನಮ್ಮ ಚಾಲಕರು ಅಧಿಕಾರಿಗಳ ಈ ನಡೆಯನ್ನು ಪ್ರಶ್ನಿಸಬೇಕಾಯಿತು. ಕಳೆದ ವರ್ಷ ಆದ ಘಟನೆಗಳಿಗೆ ಗ್ರಾಮ ಪಂಚಾಯತ್ ಮತ್ತು ಅಧಿಕಾರಿ ತೆಗೆದುಕೊಂಡ ತಪ್ಪು ನಿರ್ಣಯಯವೇ ಕಾರಣವಾಗಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Clearance/ ರಂಗಿನಕಟ್ಟೆ ಅಶ್ವತ್ಥ ಕಟ್ಟೆ ತೆರವಿಗೆ ದಿನಾಂಕ ನಿಗದಿ
“ಪ್ರವಾಸಿಗರ ವಾಹನ ಪ್ರತಿವರ್ಷದಂತೆ ಕಳೆದ ವರ್ಷವೂ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದ ಖಾಸಗಿ ಜಮೀನಿನಲ್ಲಿ ಮತ್ತು ತಾತ್ಕಾಲಿಕ ಸಂತೆ ಮಾರ್ಕೆಟ್(ಯುನಿಯನ್ ಬ್ಯಾಂಕ್ ಎದರು) ನಡೆಯುವ ಜಾಗದಲ್ಲಿ ಮಾಡಿದ್ದೇ ಆದರೆ ಯಾವುದೇ ರೀತಿಯ ಗೊಂದಲ ಆಗುತ್ತಿರಲಿಲ್ಲ. ಒಂದು ವೇಳೆ ಜಾತ್ರಾ ಪೇಟೆಯಲ್ಲಿ ಜನಸಂಖ್ಯೆ ಒತ್ತಡ ಜಾಸ್ತಿ ಆಗಿದ್ದೆ ಆದರೆ ಜಯಾ ಪ್ಯಾರಡೈಸ್ ಲಾಡ್ಜ್ ಬಳಿ ರಸ್ತೆಯ ಪಕ್ಕ ಒಂದು ಬದಿಯಲ್ಲಿ ಆಟೋ ನಿಲ್ಲಿಸಿ ಬಾಡಿಗೆ ಮಾಡುವ ಅವಕಾಶ ಇರುತ್ತಿತ್ತು. ಪ್ರವಾಸಿಗರ ವಾಹನದ ಪಾರ್ಕಿಂಗ್ ವ್ಯವಸ್ಥೆ ಜಾತ್ರಾ ಪೇಟೆಯ ಸಮೀಪ ಮಾಡಿದರಿಂದ ಅಲ್ಲಿ ರಿಕ್ಷಾ ನಿಲ್ಲಿಸುವ ಅವಕಾಶ ಇರಲಿಲ್ಲ. ಕಾರಣ ಪ್ರವಾಸಿಗರ ವಾಹನ ಪಾರ್ಕಿಂಗ್ ಗೆ ಹೋಗಲು ಪಾರ್ಕಿಂಗ್ ನಿಂದ ಹೊರ ಹೋಗಲು ಇದೊಂದೇ ರಸ್ತೆಯ ಮಾರ್ಗವಾದರಿಂದ ಈ ಒಂದೇ ಕಾರಣಕ್ಕಾಗಿ ಬಸ್ ನಿಲ್ದಾಣದವರೆಗೆ ರಿಕ್ಷಾ ಹೋಗುವುದಕ್ಕೆ ಅವಕಾಶಕ್ಕಾಗಿ ಅಧಿಕಾರಿಗಳ ಜೊತೆಗೆ ಪ್ರಶ್ನೆ ಮಾಡಬೇಕಾಗಿ ಬಂದಿತ್ತು” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: Bomb threat/ ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ
ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಖಜಾಂಚಿ ವೆಂಕಟೇಶ ನಾಯ್ಕ, ಸದಸ್ಯರಾದ ಲಿಂಗಯ್ಯ ನಾಯ್ಕ, ಗಣಪತಿ ನಾಯ್ಕ, ಶೇಖರ ನಾಯ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಪಡಿಯಾರ, ಪಿಡಿಓ ಅಪೂರ್ಣ ನಾಯ್ಕ ಇದ್ದರು.
ಇದನ್ನು ಓದಿ: Golden chain/ ಕೋರಿಯರ್ ನೆಪದಲ್ಲಿ ಅಜ್ಜಿಯ ಚಿನ್ನದ ಸರ ಹರಿದು ಪರಾರಿ



