ಭಟ್ಕಳ (Bhatkal): ಗೇರೆಣ್ಣೆ (cashew oil) ತುಂಬಿದ ಟ್ಯಾಂಕರವೊಂದು ಮುಂದೆ ಹೋಗುತ್ತಿದ್ದ ಬಸ್ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಯಾದ (tanker overturned) ಘಟನೆ ಮೂಢ ಭಟ್ಕಳ ಬೈಪಾಸ್ ಸಮೀಪ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಲಾರಿ ಚಾಲಕ ರಾಜಸ್ಥಾನ (Rajasthan) ಮೂಲದ ಮದನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ (mangaluru) ಗೇರೆಣ್ಣೆ ತುಂಬಿದ ಟ್ಯಾಂಕರ ಹರಿಯಾಣ (haryana) ಕಡೆಗೆ ಹೋಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ : ಕರಡಿ ದಾಳಿಯಿಂದ ವೃದ್ಧ ಗಂಭೀರ
ಪುರವರ್ಗ ಕಡೆಯಿಂದ ಮೂಢ ಭಟ್ಕಳ ಬೈಪಾಸ್ ಕಡೆಗೆ ಬರುತ್ತಿದ್ದ ವೇಳೆಗೆ ಮುಂಬದಿಯಲ್ಲಿ ಹೋಗುತ್ತಿದ್ದ ಬಸ್ ಚಾಲಕ ರಾಷ್ಟ್ರೀಯ ಹೆದ್ದಾರಿಗೆ (national highway) ಹಾಕಲಾಗಿದ್ದ ಹಂಪ್ ನೋಡಿ ತಕ್ಷಣ ಬ್ರೇಕ್ ಹಾಕಿದ್ದಾರೆ. ಇದನ್ನು ಗಮನಿಸಿದ ಟ್ಯಾಂಕರ ಚಾಲಕ ಸಮಯ ಪ್ರಜ್ಞೆಯಿಂದ ಬಸ್ ತಪ್ಪಿಸಲು ಹೋಗಿ ಎಡ ಭಾಗಕ್ಕೆ ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿ ಮನೆಬಿಟ್ಟು ಹೋದ ಮಗ ಹಾಸಿಗೆ ಹಿಡಿದ; ತಂದೆ ಆತ್ಮಹತ್ಯೆ
ಆದರೆ ಟ್ಯಾಂಕರ್ ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಸಣ್ಣ ಪ್ರಪಾತಕ್ಕೆ ಬಿದ್ದಿದೆ (tanker overturned). ಇದರಿಂದಾಗಿ ಗೇರೆಣ್ಣೆ ತುಂಬಿದ ಟ್ಯಾಂಕರ್ ರಂಧ್ರವಾಗಿ ಸೋರಿಕೆಯಾಗಿದೆ. ಈ ಅಪಘಾತದಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಪಲ್ಟಿಯಾಗಿದ್ದ ಟ್ಯಾಂಕರನ ಡೀಸೆಲ್ (diesel) ತೆಗೆದು ಯಾವುದೇ ಅನಾಹುತ ಆಗದಂತೆ ಮುಂಜಾಗ್ರತೆ ವಹಿಸಿದ್ದಾರೆ.
ಇದನ್ನೂ ಓದಿ : ಇಬ್ಬರು ನಾಪತ್ತೆ; ಪ್ರತ್ಯೇಕ ಪ್ರಕರಣ ದಾಖಲು
ಅಪಘಾತಕ್ಕೆ ಐ.ಆರ್.ಬಿ. (IRB) ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ ೧೮ರಂದು ವಿವಿಧೆಡೆ ಅಡಿಕೆ ಧಾರಣೆ