ಭಟ್ಕಳ: ಮುರ್ಡೇಶ್ವರದ (murudeshwara) ಉತ್ತರಕೊಪ್ಪ ರಸ್ತೆಯಲ್ಲಿರುವ ಕೀರ್ತಿ ಲಾಡ್ಜ್ ನಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಿಪಿಐ ಜಗದೀಶ ಹಂಚನಾಳ ಅವರ ನೇತೃತ್ವದಲ್ಲಿ ರೂಂ ನಂ 206ಕ್ಕೆ ದಾಳಿ ನಡೆಸಿದಾಗ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ₹7,750 ನಗದು ಹಾಗೂ 11 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನು ಓದಿ: Sharavati project/ ಸುವರ್ಣ ಸೌಧದ ಮುಂದೆ ಬೃಹತ್ ಪ್ರತಿಭಟನೆ

ಸುಬ್ರಮಣ್ಯ ಜಟ್ಟಾ ನಾಯ್ಕ (ಗುಮ್ಮನಹಕ್ಕು), ನಾರಾಯಣ ಮಂಜಪ್ಪ ನಾಯ್ಕ (ತೆರ್ನಮಕ್ಕಿ), ಕೃಷ್ಣಾ ಮಂಜುನಾಥ ನಾಯ್ಕ (ಕಾಯ್ಕಿಣಿ–ಬಿದ್ರಮನೆ), ರಮೇಶ ನಾಗಪ್ಪ ನಾಯ್ಕ (ಅದ್ರಮನೆ, ಬಸ್ತಿ), ಗೋಪಾಲ ನಾರಾಯಣ ನಾಯ್ಕ (ಬಸ್ತಿ–ಬಿದ್ರಮನೆ), ಮಹೇಶ ಗಣಪತಿ ನಾಯ್ಕ, ನಾಗರಾಜ ಮಂಜುನಾಥ ನಾಯ್ಕ, ಭಾಸ್ಕರ ಪರಮೇಶ್ವರ ನಾಯ್ಕ, ರೋಹಿದಾಸ ಮಂಜುನಾಥ ನಾಯ್ಕ, ರಾಜೇಶ ಮಾದೇವ ನಾಯ್ಕ (ಎಲ್ಲರೂ ಸಭಾತಿ–ತೆರ್ನಮಕ್ಕಿ, ಮುರ್ಡೇಶ್ವರ), ಶ್ರೀನಿವಾಸ ಮಂಜುನಾಥ ನಾಯ್ಕ (ಹೆರಾಡಿ) ಬಂಧಿತರು.

ಇದನ್ನು ಓದಿ: Bhatkal utsav/ ನಾಲ್ಕು ದಿನಗಳ ಕಾಲ ಭಟ್ಕಳ ಉತ್ಸವ

ಮುರ್ಡೇಶ್ವರ (murudeshwara) ಪಿಎಸ್‌ಐ ಹಣಮಂತ ಬಿರಾದರ್ ಹಾಗೂ ಮಂಕಿ ಪಿಎಸ್‌ಐ ಭರತಕುಮಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಜೂಜಾಟಕ್ಕೆ ಅವಕಾಶ ನೀಡಿದ ಆರೋಪದ ಮೇಲೆ ಕೀರ್ತಿ ಲಾಡ್ಡ ಮ್ಯಾನೇಜರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ: Murudeshwar/ ರಿಕ್ಷಾ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಮನವಿ