ಭಟ್ಕಳ: ಮೂವರಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು (Accident), ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿರುವ ಬಗ್ಗೆ ಕಾರು ಚಾಲಕನ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಕ್ ಸವಾರ ಬೆಂಗ್ರೆ-೨ರ ಮಾವಿನಕಟ್ಟೆ ನಿವಾಸಿ ಮುಕುಂದ ವೆಂಕಟ್ರಮಣ ನಾಯ್ಕ (೩೩) ದೂರು ದಾಖಲಿಸಿದ್ದಾರೆ. ಮಂಗಳೂರಿನ (Mangaluru) ಕುಂಠಿಕಾನ ವಾಸಿ ರೋಹಿತ ತಂದೆ ಸಂಜಿವ ಕಾಂಚನ (೫೯) ಕಾರು ಚಲಾಯಿಸುತ್ತಿದ್ದರು.

ಇದನ್ನು ಓದಿ: woman dies/ ಒಲೆಯ ಬೆಂಕಿ ತಗುಲಿ ಗಂಭೀರಗೊಂಡಿದ್ದ ವೃದ್ಧೆ ಕೊನೆಯುಸಿರು

ದೂರಿನಲ್ಲಿ ತಿಳಿಸಿರುವಂತೆ, ಜ ೧೯ರಂದು ಮಧ್ಯಾಹ್ನ ೦೨:೩೦ ಗಂಟೆಯ ಸಮಯಕ್ಕೆ ಪಿರ್ಯಾದಿ ಮತ್ತು ಅವರ ಬಾವ ಗಾಯಾಳು ಮಲ್ಲಾರಿಯ ಮಹೇಶ ತಂದೆ ಮಂಜುನಾಥ ನಾಯ್ಕ (೨೯) ಹಾಗೂ ಬಂಗಾರಮಕ್ಕಿಯ ಯುವರಾಜ ತಂದೆ ಮಾದೇವ ನಾಯ್ಕ (೧೯) ಬೈಕ್ ಮೇಲೆ ಮನೆಗೆ ಹೋಗುತ್ತಿದ್ದರು.

ಇದನ್ನು ಓದಿ: Video viral/ ಕಚೇರಿಯಲ್ಲೇ ಡಿಸಿಆರ್ಇ ಡಿಜಿಪಿ ರಾಮಚಂದ್ರ ರಾವ್

ಮುರ್ಡೇಶ್ವರಕ್ಕೆ ಬಂದು ಮರಳಿ ಮನೆಗೆ ಹೋಗುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ-೬೬ರ ಮುಖಾಂತರ ಮುರ್ಡೇಶ್ವರ (Murudeshwar) ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವಾಗ ೩:೪೫ ಗಂಟೆಯ ಸಮಯಕ್ಕೆ ಬಂಗಾರಮಕ್ಕಿ ಹತ್ತಿರ ಇರುವಾಗ ಇವರ ಮುಂದಿನಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಹೋಗುತ್ತಿದ್ದ ಅವರ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ (Accident). ಬೈಕಿನಲ್ಲಿದ್ದವರು ರಸ್ತೆಯ ಮೇಲೆ ಬಿದ್ದಿದ್ದರಿಂದ ಮಹೇಶ ಇವರಿಗೆ ಎಡ ಕಾಲಿನ ಮಂಡಿಯ ಕೆಳಗೆ ಪಟ್ಟಾಗಿದ್ದು, ಯುವರಾಜ ಇವನಿಗೆ ತೆರೆಚಿದ ಗಾಯವಾಗಿದೆ.

ಇದನ್ನು ಓದಿ: Bhatkal GSB/ ಭಟ್ಕಳ ಜಿ ಎಸ್ ಬಿ ವಾರ್ಷಿಕೋತ್ಸವ ಸಂಪನ್ನ