ಭಟ್ಕಳ: ೨೦೨೪ ನೇ ಸಾಲಿನ ರಾಷ್ಟ್ರಮಟ್ಟದ ಕಂಪನಿ ಸೆಕ್ರೆಟರಿ – ಸಿ.ಎಸ್.ಇ.ಇ.ಟಿ.(CSEET) ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ(achievement) ಮಾಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕಾಲೇಜಿನ ವಿದ್ಯಾರ್ಥಿಗಳಾದ ಆಶಿತಾ ಎ ಮೊಗೇರ, ಅಮೃತಾ ಜಿ ಪೈ (ಬಿ.ಕಾಂ-೧ ಸೆಮ್), ರಕ್ಷಾ ಎಸ್ ನಾಯ್ಕ (ಬಿ.ಕಾಂ-೨ ಸೆಮ್), ನಾಗಶ್ರೀ ಪಿ ಹರಿದಾಸ್ (ಬಿ.ಕಾಂ-೪ ಸೆಮ್) ಸಿಎಸ್ಇಇಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಸಿ.ಎಸ್. ಎಕ್ಸಿಕ್ಯುಟಿವ್ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ : ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಸೇತುವೆ ಮುಳುಗಡೆ

ಈ ಸಾಧನೆ (Achievement) ಮೂಲಕ ಕಾಲೇಜಿಗೆ ಕೀರ್ತಿ ತಂದ ಈ ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಮೆಸ್. ಗಗನಕುಸುಮವಲ್ಲ ಎಂದು ಸಾಬೀತುಪಡಿಸಿದ್ದಾರೆ. ಅಲ್ಲದೆ, ಸಿಎಸ್ ಆಕಾಂಕ್ಷಿಗಳಿಗೆ ಭವಿಷತ್ತಿನಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜು ಹೊಸ ಆಶಾಕಿರಣವನ್ನು ಮೂಡಿಸಿದೆ.

ಇದನ್ನೂ ಓದಿ :  ಭಟ್ಕಳದಿಂದ ಮುಂಬೈಗೆ ತೆರಳಿ ಕಟ್ಟಿದ ಸಂಸ್ಥೆಗೆ ನೂರು ವರ್ಷ

ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ನ ಛೇರ್ಮನ್ ಡಾ. ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಇತರ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಸಿ.ಎ.-ಸಿ.ಎಸ್.-ಸಿ.ಎಂ.ಎ. ತರಬೇತಿಯ ಸಂಯೋಜಕ ಫಣಿಯಪ್ಪಯ್ಯ ಹೆಬ್ಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.