ಹುಬ್ಬಳ್ಳಿ (Hubballi): ದಸರಾ ಹಬ್ಬದ (Dasara Festival) ಪ್ರಯುಕ್ತ ಹೆಚ್ಚಿನ ಜನರು ತಂತಮ್ಮ ಊರುಗಳಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿ (Hubli), ಧಾರವಾಡ(Dharwad), ಗದಗ(Gadag), ಬೆಳಗಾವಿ(Belagavi), ಉತ್ತರ ಕನ್ನಡ(Uttara Kannada), ಹಾವೇರಿ(Haveri), ಚಿಕ್ಕೋಡಿ(Chikkodi), ಬಾಗಲಕೋಟೆಯಿಂದ (Bagalkot) ಸುಮಾರು ೨೨೦ ಹೆಚ್ಚುವರಿ ವಿಶೇಷ ಸಾರಿಗೆ ಸೇವೆಗಳನ್ನು ನೀಡಲು ನಿರ್ಧರಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶುಕ್ರವಾರ, ಅಕ್ಟೋಬರ್ ೧೧ರಂದು, ಮಹಾನವಮಿ/ಆಯುಧಪೂಜೆಯನ್ನು (Mahanavami) ಆಚರಿಸಲಾಗುತ್ತದೆ. ನಂತರ ಅಕ್ಟೋಬರ್ ೧೨ ಮತ್ತು ೧೩ರಂದು ವಿಜಯದಶಮಿ (Vijayadashami) ಆಚರಿಸಲಾಗುತ್ತದೆ. ಆದ್ದರಿಂದ, ಬೆಂಗಳೂರು ಮತ್ತು ಇತರ ಪ್ರಮುಖ ಸ್ಥಳಗಳಿಂದ ತಮ್ಮ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಹೆಚ್ಚುವರಿ ಸಾರಿಗೆ ಸೇವೆಗಳನ್ನು ಒದಗಿಸಲಾಗುತ್ತದೆ.
ಇದನ್ನೂ ಓದಿ : ಗರಿಷ್ಠ ಮಟ್ಟಕೇರಿದ ಚಿನ್ನದ ಬೆಲೆ; ಬೆಳ್ಳಿ ಇಳಿಕೆ
ಅಕ್ಟೋಬರ್ ೧೦ರ ರಾತ್ರಿ ಮತ್ತು ಅಕ್ಟೋಬರ್ ೧೧ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಮತ್ತು ನೆರೆಯ ರಾಜ್ಯಗಳ ವಿವಿಧ ನಗರಗಳಿಗೆ ಪ್ರಯಾಣಿಸುವವರಿಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯಗಳು ಲಭ್ಯವಿರುತ್ತವೆ. ಹಬ್ಬದ ನಂತರ, ಅಕ್ಟೋಬರ್ ೧೩ ಮತ್ತು ಅಕ್ಟೋಬರ್ ೧೪ರಂದು ಹಾಗೂ ನಂತರದ ದಿನಗಳಲ್ಲಿ ಪ್ರಮುಖ ಸ್ಥಳಗಳಿಂದ ಪ್ರಯಾಣಿಕರ ಬೇಡಿಕೆಯನ್ನು ಆಧರಿಸಿ ಹೆಚ್ಚುವರಿ ಸೇವೆಗಳನ್ನು ಸಹ ನಿರ್ವಹಿಸಲಾಗುತ್ತದೆ. ಪ್ರಯಾಣಿಕರು ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಈ ವಿಶೇಷ ಸಾರಿಗೆ ಸೇವೆಗಳನ್ನು ಬಳಸಿಕೊಳ್ಳುವಂತೆ ಮತ್ತು ಒದಗಿಸುತ್ತಿರುವ ಹೆಚ್ಚುವರಿ ಸೇವೆಗಳ ಲಾಭವನ್ನು ಪಡೆದುಕೊಳ್ಳುವಂತೆ ವಾಕರಸಾ ಸಂಸ್ಥೆ (NWKRTC ) ವಿನಂತಿಸಿಕೊಂಡಿದೆ.
ಇದನ್ನೂ ಓದಿ : ಪ್ರತಿಭಾವಂತ ವಿದ್ಯಾರ್ಥಿಗೆ ಕ್ರಿಕೆಟಿಗ ಕೆ.ಎಲ್.ರಾಹುಲ್ ನೆರವು