ಭಟ್ಕಳ: ಅತಿ ವೇಗ ಮತ್ತು ನಿರ್ಲಕ್ಷತನದ ಚಾಲನೆಯಿಂದ ಬೈಕೊಂದು ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ (Bike collision) ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕುರಿತು ಯಲ್ವಡಿಕವೂರ ಸರ್ಪನಕಟ್ಟಾ ತಿರ್ಕನಾಯ್ಕರ ಮನೆಯ ದೇವಯ್ಯ ತಂದೆ ದುರ್ಗಪ್ಪ ನಾಯ್ಕ (೪೭) ದೂರು ದಾಖಲಿಸಿದ್ದಾರೆ. ಭಟ್ಕಳ ತಾಲೂಕಿನ ಬೆಳಕೆ ಮಯೂರ ದಾಬಾ ಹತ್ತಿರ ಇರುವ ಕ್ರಾಸ್‌ನಲ್ಲಿ ಈ ಅಪಘಾತ (Bike collision) ನಡೆದಿದೆ. ಉಡುಪಿ (Udupi) ಜಿಲ್ಲೆಯ ಬೈಂದೂರು (Byndooru) ತಾಲೂಕಿನ ಎಡ್ತಾರೆ ಹೊಸೂರು, ಶಿರೂರು ನಿವಾಸಿ ನಾಗರಾಜ ತಂದೆ ಶೇಷಾ ಮರಾಠಿ ಆರೋಪಿ.
ಇದನ್ನು ಓದಿ: Accused arrested/ ೩೦ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಜನವರಿ ೬ರಂದು ರಾತ್ರಿ ೦೮-೩೦ ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಭಟ್ಕಳ (Bhatkal) ಕಡೆಯಿಂದ ಶಿರೂರು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದ ನಾಗರಾಜ ತಂದೆ ಶೇಷಾ ಮರಾಠಿ ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ಒಮ್ಮೆಲೆ ಬಲಕ್ಕೆ ತಿರುಗಿಸಿದ್ದಾರೆ. ಅದೇ ದಿಸೆಯಲ್ಲಿ ಅಂದರೆ ಭಟ್ಕಳ ಕಡೆಯಿಂದ ಶಿರೂರು ಕಡೆಗೆ ಶಿರೂರು ತೂದಳ್ಳಿಯ ಆಟೋ ಚಾಲಕ ಕೆ.ಎಸ್ ವಿಲ್ಸಂಟ್ ತಂದೆ ಕೆ.ಎಮ್ ಸಭಾಸ್ಟಿನ್ (೪೭) ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Bangaramakki/ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಏಳು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ



