ಭಟ್ಕಳ (Bhatkal) : ತಾಲೂಕಿನ ವೆಂಕಟಾಪುರ ಬಪ್ಪುಂಡದ ಶ್ರೀ ಯಕ್ಷ ಚೌಡೇಶ್ವರಿ ದೇವಸ್ಥಾನದ ಕುರಿತು ಭಕ್ತಿಗೀತೆಗಳ ಅಲ್ಬಮ್ ರವಿವಾರ ಬಿಡುಗಡೆಗೊಂಡಿತು (Album release).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶ್ರೀ ಯಕ್ಷ ಚೌಡೇಶ್ವರಿ ದೇವಸ್ಥಾನದ ವತಿಯಿಂದ ಈ ಭಕ್ತಿಗೀತೆ ಅಲ್ಬಮ್ ನಿರ್ಮಾಣ ಮಾಡಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಸುಗಮ ಸಂಗೀತ ಗಾಯಕ, ಭಾವಕವಿ ಉಮೇಶ ಮುಂಡಳ್ಳಿ ಅವರು ಸಾಹಿತ್ಯ ಬರೆದು ಸ್ವರಸಂಯೋಜಿಸಿ ತಾವೇ ಹಾಡಿರುತ್ತಾರೆ. ಯಾವ ಜನ್ಮದು ನಂಟು ಯಕ್ಷ ಚೌಡೇಶ್ವರಿ ಹಾಗೂ ಬಾರಮ್ಮ ತಾಯೆ ಯಕ್ಷ ಚೌಡೇಶ್ವರಿ ಎನ್ನುವ ಈ ಸುಮಧುರ ಗೀತೆಗೆ ಕೀಬೋರ್ಡ್ ನಲ್ಲಿ ವಿಘ್ನೇಶ್ ಗೌಡ ಹಾಗೂ ತಬಲ ದಲ್ಲಿ ಆದಿತ್ಯ ದೇವಾಡಿಗ ಸಹಕರಿಸಿದ್ದಾರೆ.
ಇದನ್ನೂ ಓದಿ : Mankal Vaidya/ ಗೋ ಕಳ್ಳರಿಗೆ ಸಚಿವ ಮಂಕಾಳ ವೈದ್ಯ ಖಡಕ್ ಎಚ್ಚರಿಕೆ
ದೇವಸ್ಥಾನದ ಐದನೇ ವರ್ಷದ ವರ್ಧಂತಿ ಉತ್ಸವದ ಮೊದಲ ದಿನವಾದ ರವಿವಾರ ರಾತ್ರಿ ಭಕ್ತಜನರ ಸಮ್ಮುಖದಲ್ಲಿ ಈ ಭಕ್ತಿ ಗೀತೆ ಅಲ್ಬಮ್ ವೇದಮೂರ್ತಿ ಸುಬ್ರಮಣ್ಯ ಪಂಡಿತರು ಬಿಡುಗಡೆಗೊಳಿಸಿದರು (Album release). ಈ ಸಂದರ್ಭದಲ್ಲಿ ಗಾಯಕ, ಕವಿ, ಸ್ವರ ಸಂಯೋಜಕ ಉಮೇಶ ಮುಂಡಳ್ಳಿ, ದೇವಸ್ಥಾನದ ಮುಖ್ಯಸ್ಥ ಶ್ರೀಧರ ನಾಯ್ಕ, ಆದಿತ್ಯ ದೇವಾಡಿಗ, ಹರೀಶ ಶೇಟ ಧಾರೇಶ್ವರ, ದೀಕ್ಷಾ ಖಾರ್ವಿ ಮೊದಲಾದವರು ಇದ್ದರು. ನಂತರ ಉಮೇಶ ಮುಂಡಳ್ಳಿ ಅವರ ನಿನಾದ ಸಂಗೀತ ಸಂಚಯದವರಿಂದ ಎರಡು ಗಂಟೆಗಳ ಕಾಲ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ವತಿಯಿಂದ ಉಮೇಶ ಮುಂಡಳ್ಳಿ ಹಾಗೂ ಬಳಗದವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : Bike Accident/ ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಸಾವು