ಭಟ್ಕಳ (Bhatkal) : ಹೋಳಿ ಹಬ್ಬದ (Holi Festival) ಹಿನ್ನಲೆಯಲ್ಲಿ ಪಟ್ಟಣದ ಜಿಎಸ್‌ಬಿ (GSB) ಮಹಿಳಾ ವೃಂದ ಹಾಗೂ ಜಿಎಸ್‌ಎಸ್ ಭಟ್ಕಳ ವತಿಯಿಂದ ಸಮಾಜ ಬಾಂಧವರಿಗಾಗಿ ವಡೇರ ಮಠದ ಕಂಪೌಡಿನಲ್ಲಿ ಭಾನುವಾರ ಆಮ್ಗೆಲ್ ಹೋಳಿ ಕಾರ್ಯಕ್ರಮ ಎರ್ಪಡಿಸಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಮ್ಗೆಲ್ ಹೋಳಿ (Holi) ಆಚರಣೆಯ ಹಿನ್ನಲೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಮಾಜ ಬಾಂಧವರು ಆಗಮಿಸಿ ಪರಸ್ಪರ ಬಣ್ಣ ಎರಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಬಣ್ಣ ಹಚ್ಚಿ ಸಂಭ್ರಮಿಸಿದರು. ಶುಕ್ರವಾರ ಆಚರಿಸಬೇಕಿದ್ದ ಹೋಳಿಯನ್ನು ಭಾನುವಾರ ರಜೆಯ ಹಿನ್ನಲೆಯಲ್ಲಿ ಆಚರಿಸಲಾಯಿತು. ಎಲ್ಲರೂ ಸೇರಿಕೊಂಡು ಆಚರಿಸಿದ್ದು ಹೋಳಿ ಹಬ್ಬಕ್ಕೆ ಮತ್ತಷ್ಟು ಮೆರಗು ಬಂದಿತ್ತು.
ಇದನ್ನೂ ಓದಿ : police raid/ ಗರ್ ಗರ್ ಮಂಡ್ಲ ಆಡುತ್ತಿದ್ದ ೨೬ ಜನರ ವಿರುದ್ಧ ಪ್ರಕರಣ
ಬಣ್ಣದ ನೀರು ಎರಚಲು ಟ್ಯಾಂಕರ್‌ಗಳಲ್ಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬಣ್ಣದ ನೀರಿನ ಎರಚಾಟ ಭಾನುವಾರದ ಭಯಂಕರ ಸೆಖೆಯಲ್ಲಿ ಮುದ ನೀಡಿತು. ಬಾಲಕರು, ಯುವ ಜನರ ಉತ್ಸಾಹದ ನಡುವೆ ಮಧ್ಯ ವಯಸ್ಕರು ಸಹ ರಂಗಿನಾಟದಲ್ಲಿ ಭಾಗಿಯಾದರು. ಜಿಎಸ್‌ಬಿ ಮಹಿಳಾ ವೃಂದದವರು ಪರಸ್ಪರ ಬಣ್ಣ ಎರಚಿಕೊಂಡು ಉತ್ಸಾಹದಿಂದ ಕುಣಿದಾಡಿದರು. ಗುರುವಾರ ರಾತ್ರಿ ಇದೇ ಸ್ಥಳದಲ್ಲಿ ವೃಕ್ಷರೂಪಿ ಸುಮಿತೆಯನ್ನು ಅಗ್ನಿಗೆ ಅರ್ಪಿಸಿ ಕಾಮದಹನ ಮಾಡಲಾಗಿತ್ತು.
ಇದನ್ನೂ ಓದಿ : Karwar/ ವಿಶೇಷ ಚೇತನ ಬಾಲಕನ ಸಾಧನೆ