ಭಟ್ಕಳ (Bhatkal): ತಾಲೂಕಿನೆಲ್ಲೆಡೆ ಅನಂತ ಚತುರ್ದಶಿ (Anantha Chaturdashi) ವ್ರತಾಚರಣೆಯನ್ನು ಈ ಬಾರಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಸುಮಾರು ೧೦ ದೇವಸ್ಥಾನಗಳಲ್ಲಿ ವಿಶೇಷವಾಗಿ ಸಿಂಗರಿಸಿದ ಕಲಶಗಳನ್ನು ನೋಡಲು ಭಕ್ತರ ಸರತಿಯ ಸಾಲು ಎಲ್ಲಡೆ ಕಂಡು ಬಂತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅನಂತ ಚತುರ್ದಶಿ ವ್ರತ (ನೊಂಪಿ) ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳಲ್ಲಿ ಶ್ರೀ ದೇವರಿಗೆ ವಿಶೇಷ ಸರ್ವಾಭರಣದೊಂದಿಗೆ ಅಲಂಕರಿಸಿ ಪೂಜೆ ನೆರವೇರಿತು. ಪ್ರಾರಂಭದಲ್ಲಿ ಶ್ರೀ ಅನಂತ ಕಲಶ ಪ್ರತಿಷ್ಠೆ , ವಿದ್ವತ್ ವೈದಿಕರಿಂದ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀ ಅನಂತ ದೇವರ ವಿಶೇಷ ಮುಖ ಕಲಶದ ಮೇಲೆ ಸಿಂಗರಿಸಿ, ದೇವಳದ ಪರಿಸರವನ್ನು ಹೂ-ಹಣ್ಣು ಹಂಪಲು, ತರಕಾರಿಗಳಿಂದ ಸಿಂಗರಿಸಲಾಯಿತು.
ಇದನ್ನೂ ಓದಿ : ಸೆಪ್ಟೆಂಬರ್ ೧೭ರಂದು ವಿವಿಧೆಡೆ ಅಡಿಕೆ ಧಾರಣೆ
ಅನಂತ ಚತುರ್ದಶಿ (Anantha Chaturdashi) ವ್ರತವನ್ನು ಯತಿ ಚಾತುರ್ಮಾಸ್ಯದ (Chathurmasya) ಕೊನೆಯ ವ್ರತವೆಂದು ಹೇಳಲಾಗುತ್ತದೆ. ವ್ಯಾಸಪೂರ್ಣಿಮೆಯಂದು ವ್ಯಾಸಪೂಜೆ ಮಾಡಿ, ಚಾತುರ್ಮಾಸ್ಯ ವ್ರತಕ್ಕೆ ಚಾಲನೆ ನೀಡಲಾಗುತ್ತದೆ. ಕೊನೆಯದಾಗಿ ಅನಂತನ ವ್ರತಾಚರಣೆಯ ನಂತರ ಯತಿಗಳು ಮೃತಿಕಾ ವಿಸರ್ಜನೆ ನಡೆಸುತ್ತಾರೆ. ಈ ಹಿನ್ನಲೆಯಲ್ಲೂ ವಿಶಿಷ್ಟತೆ ಪಡೆದ ಅನಂತ ಚತುರ್ದಶಿಯ ಕಲಶದ ದರ್ಶನ ಪಡೆದರೆ ಸಂಕಷ್ಟಗಳು ದೂರವಾಗಿ ದೈವಿ ಅನುಗ್ರಹ ಪ್ರಾಪ್ತವಾಗುತ್ತದೆ ಎನ್ನುವದು ನಂಬಿಕೆ.
ಇದನ್ನೂ ಓದಿ : ಇತಿಹಾಸದ ಪುಟ ಸೇರಲಿದೆ ಕೊಂಕಣ ರೈಲ್ವೆ
ಶಿರಾಲಿ, ಮುರ್ಡೇಶ್ವರ (Murudeshwar) ಸೇರಿದಂತೆ ವಿವಿಧ ದೇವಸ್ಥಾನಗಳಲ್ಲೂ ಅನಂತ ಚತುರ್ದಶಿ ಕಲಶ ಪೃತಿಷ್ಠಾಪನೆ ಮಾಡಲಾಗಿತ್ತು. ಅತಿ ಹೆಚ್ಚಿನ ಕಲಸವನ್ನು ನೋಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿಂದ ಭಕ್ತರು ಸರ್ವ ಸಂಕಷ್ಟದಿಂದಲೂ ಮುಕ್ತಿ ನೀಡುವಂತೆ ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ : ಸಶಸ್ತ್ರ ಕಾನ್ಸಟೇಬಲ್ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ