ಭಟ್ಕಳ: ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ (Anantkumar Hegde) ಭಟ್ಕಳಕ್ಕೆ ಬಂದು ಹೋದರು. ಆದರೆ ಅವರ ರಾಜಕೀಯ ರಂಗಕ್ಕೆ ಮರುಪ್ರವೇಶ ಮಾಡುವ ವಿಚಾರ ನಿಗೂಢವಾಗಿಯೇ ಉಳಿಯಿತು. ಮತ್ತೆ ರಾಜಕೀಯಕ್ಕೆ ಬರ‍್ತಾರೆ, ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಳ್ತಾರೆ, ಭಟ್ಕಳದಿಂದ ಸ್ಪರ್ಧಿಸ್ತಾರೆ …. ಎಂಬ ಊಹಾಪೋಹಗಳಿಗೂ ಸ್ಪಷ್ಟತೆ ಸಿಗಲಿಲ್ಲ. ಎಲ್ಲದಕ್ಕೂ ಭಟ್ಕಳದಲ್ಲಿ ಮಾತನಾಡುತ್ತೇನೆ ಎಂದಿದ್ದ ಅನಂತಕುಮಾರ ಹೆಗಡೆ ರಾಜಕೀಯದ ಬಗ್ಗೆ ಏನನ್ನೂ ಹೇಳದೆ ಅವರ ಬೆಂಬಲಿಗರಿಗೆ, ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ನಗರದ ಹಳೇ ಬಸ್ ನಿಲ್ದಾಣದ ಸಮೀಪ ನಡೆದ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾಷಣದುದ್ದಕ್ಕೂ ಹಿಂದುತ್ವ, ಆರೆಸ್ಸೆಸ್ ಬಗ್ಗೆ ಮಾತ್ರ ಮಾತನಾಡಿದರು. ಎರಡು ವರ್ಷಗಳ ಬಳಿಕ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಭಾಷಣ ಬಗ್ಗೆ ಸಹಜವಾಗಿ ಎಲ್ಲರಲ್ಲಿ ಕುತೂಹಲವಿತ್ತು.

Margosa Mahal/ ಭಟ್ಕಳ ತಾಲೂಕಿನ ಸುತ್ತಮುತ್ತ ‘ಮರ್ಗೋಸ ಮಹಲ್’ ಚಿತ್ರೀಕರಣ

ಆದರೆ, ಸುಮಾರು ೪೫ ನಿಮಿಷಗಳ ಕಾಲದ ಭಾಷಣದಲ್ಲಿ ಎಲ್ಲಿಯೂ ರಾಜಕೀಯದ ಕುರಿತು ಮಾತನಾಡಲಿಲ್ಲ. ಅನಂತಕುಮಾರ್ ಹೆಗಡೆಯವರು ಬರುತ್ತಾರೆ, ರಾಜಕೀಯದ ಮರು ಪ್ರವೇಶದ ಬಗ್ಗೆ ಮಾತನಾಡುತ್ತಾರೆ ಎನ್ನುವ ಆಸೆಯನ್ನಿಟ್ಟುಕೊಂಡು ಬಂದ ಕಾರ್ಯಕರ್ತರನೇಕರಿಗೆ ಬೇಸರವಾಯಿತು. ಕಾರ್ಯಕ್ರಮದ ನಂತರ ಅನಂತಕುಮಾರ ಹೆಗಡೆಯವರು ನಿರ್ಗಮಿಸುವ ವೇಳೆಯಲ್ಲಿ ‘ಮುಂದಿನ ಮುಖ್ಯಮಂತ್ರಿ ಅನಂತಕುಮಾರ ಹೆಗಡೆ (Anantkumar Hegde)’ ಎನ್ನುವ ಘೋಷಣೆ ಕೇಳಿ ಬಂತು.

Vidya Vahini Express/ ಗ್ರಾಮಸ್ಥರ ಪಾಲಿನ ಅಕ್ಷರ ದೇಗುಲ: ಮಾದರಿ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’ 

ಭಾಷಣದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಅನಂತಕುಮಾರ ಹೆಗಡೆ, ಹಿಂದೂ ಸಮುದಾಯದಲ್ಲಿ ಐಕ್ಯತೆ ಅಗತ್ಯವಿದೆ. ಸಮಾಜದಲ್ಲಿ ಜಾತಿಗಿಂತ ವ್ಯಕ್ತಿಯ ಯೋಗ್ಯತೆ ಮುಖ್ಯ. ಹಿಂದೂಗಳು ಒಗ್ಗಟ್ಟಿನಲ್ಲಿರದಿದ್ದರೆ ಅಪಾಯವಿದೆ. ಇತಿಹಾಸದಲ್ಲಿ ಕೆಲವು ಒಳಗಿನ ದ್ರೋಹಗಳೇ ದೇಶಕ್ಕೆ ಹಾನಿ ಮಾಡಿವೆ. ಹಿಂದೂಗಳು ಒಂದಾಗಿ ನಿಲ್ಲಬೇಕೆಂದು ಕರೆ ನೀಡಿದರು. ಇನ್ನೊಂದು ಕಡೆ, ಶಿಕ್ಷಣ ವ್ಯವಸ್ಥೆ ಕೇವಲ ಹಣ ಸಂಪಾದನೆಗೆ ಸೀಮಿತವಾಗುತ್ತಿರುವುದಾಗಿ ಅವರು ವಿಷಾದ ವ್ಯಕ್ತಪಡಿಸಿದ ಅವರು, ಜೀವನದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳಿಗೆ ಮಹತ್ವ ನೀಡಬೇಕು ಎಂದರು.

government school/ ಮೂಡಶಿರಾಲಿಯ ಸರಕಾರಿ ಶಾಲೆಯಲ್ಲಿ ಸಂಭ್ರಮ 

ಆರ್‌ಎಸ್‌ಎಸ್ ಸಂಘಟನೆ ಕುರಿತು ಮಾತನಾಡಿದ ಅವರು, ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ವಿಶ್ವದ ಹಲವು ದೇಶಗಳಲ್ಲಿ ಗೌರವ ಪಡೆಯುತ್ತಿದೆ. ಇಂದು ಜಗತ್ತಿನ ಅನೇಕ ಭಾಗಗಳಲ್ಲಿ ಭಾರತೀಯ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಆಫ್ರಿಕಾದಲ್ಲಿಯೂ ಗಣೇಶ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಭಾರತೀಯ ಸಂಸ್ಕೃತಿಯ ಪ್ರಭಾವ ಜಗತ್ತಿನಾದ್ಯಂತ ಹೆಚ್ಚುತ್ತಿದೆ ಎಂದು ಹೇಳಿದರು.

Police parade/ ಹಿಂದೂ ಸಮಾಜೋತ್ಸವ ಹಿನ್ನೆಲೆ ಭಟ್ಕಳದಲ್ಲಿ ಪೊಲೀಸ್ ಪರೇಡ್

ನೂರು ವರ್ಷಗಳ ಹಿಂದೆ ನಾಗಪುರದಲ್ಲಿ ಕೇವಲ ಕೆಲವೇ ಕೆಲವರು ಸೇರಿಕೊಂಡು ಹುಟ್ಟು ಹಾಕಿದ ಆರ್.ಎಸ್.ಎಸ್. ಇಂದು ಜಗತ್ತೇ ಒಪ್ಪಿಕೊಳ್ಳುವಂತೆ ಆಗಿದೆ. ಅಂದಿನ ಆರ್.ಎಸ್.ಎಸ್.ಗೂ ಇಂದಿನ ಆರ್.ಎಸ್.ಎಸ್.ಗೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೂ ಸಮಾಜದ ಜಾಗೃತಿ ಇಂದು ಜಗತ್ತಿಗೇ ತಲುಪಿದೆ. ಜಗತ್ತು ಭಾರತವನ್ನು ಅತ್ಯಂತ ಗೌರವದಿಂದ ಕಾಣುತ್ತದೆ ಎಂದರೆ ಅದು ಆರ್.ಎಸ್.ಎಸ್.ನ ಕೊಡುಗೆ ಎಂದರು.

bike rally/ ‘ನಗರ ಹಿಂದೂ ಸಂಗಮ’ ಅಂಗವಾಗಿ ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಭಾರತ ಮೊದಲಿನಿಂದಲೂ ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ವಿವಿಧ ದೇಶಗಳಲ್ಲಿ ನಾಗರೀಕತೆ ಬೆಳಗಿದಿದ್ದರೆ ಅದು ಭಾರತದಿಂದ, ಜಗತ್ತಿಗೆ ಆಯುರ್ವೇದವನ್ನು, ಗಣಿತವನ್ನು, ವಿಜ್ಞಾನವನ್ನು ಹಾಗೂ ಖಗೋಳ ಶಾಸ್ತçವನ್ನು ಸಹ ನೀಡಿದ ಭಾರತ ಇಂದು ವಿಶ್ವದೆಲ್ಲೆಡೆ ಯೋಗವನ್ನು ಅಳವಡಿಸಕೊಳ್ಳುವಂತೆ ಮಾಡಲು ಯಶಸ್ವಿಯಾಗಿದೆ ಎಂದರು.

arrested/ ಹೆದ್ದಾರಿಯಲ್ಲಿ ದರೋಡೆ ಸಂಚು: ಹುರುಳಿಸಾಲ ಯುವಕನ ಬಂಧನ

ಹಿಂದು ಸಮಾಜದಲ್ಲಿ ಭಾಷೆ, ಜಾತಿ, ಗುಂಪು ಯಾವುದೂ ಮುಖ್ಯವಾಗುವುದಿಲ್ಲ, ನಾವೆಲ್ಲ ಹಿಂದೂಗಳು ಎನ್ನುವುದು ಮಾತ್ರ ಮುಖ್ಯವಾಗುತ್ತದೆ. ಯಾವುದೇ ಸಂದರ್ಭದಲ್ಲಿ ನಮ್ಮನ್ನು ಕರೆದಾಗ ನಾನೋರ್ವ ಹಿಂದೂ ಎಂದು ಹೋಗಬೇಕು. ಸಮಾಜದ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಭಾಗಿಗಳಾಗಬೇಕು. ಇಂದು ಭಾರತಕ್ಕೆ ಇಡೀ ಜಗತ್ತೇ ತಲೆಬಾಗುತ್ತಿದೆ, ಆದರೆ ಭಾರತವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದ್ದರೂ ಸಹ ನಮ್ಮ ದೇಶ ಕಂಡು ಕೇಳರಿಯದ ವೇಗದಲ್ಲಿ ಮುನ್ನೆಡೆಯುತ್ತಿದೆ. ಭಾರತದ ಇತಿಹಾಸವನ್ನೇ ತಿರುಚಿ ತಿರುಚಿ ನಮಗೆ ಹೇಳಲಾಗಿದೆ. ಜಗತ್ತಿನ ಮಹಾ ದಂಡನಾಯಕ ಯಾರೆಂದು ಕೇಳಿದರೆ ಅದು ಕಾಶ್ಮೀರದ ಲಲಿತಾದಿತ್ಯ. ಈತ ಜಗತ್ತನ್ನೇ ಗೆದ್ದು ಬಂದಿದ್ದ. ಆತ ಈಡಿಗ ಸಮುದಾಯದ ರಾಜನೆನ್ನುವುದು ವಿಶೇಷ ಎಂದರು.

Draft notification/ ಭಟ್ಕಳ ನಗರಸಭೆಗೆ ವಾರ್ಡ್ ವಿಂಗಡಣೆ: ಕರಡು ಅಧಿಸೂಚನೆ ಪ್ರಕಟ 

ನಾವು ಜಗತ್ತನ್ನೇ ಮೆಟ್ಟಿ ನಿಂತವರು ಎನ್ನುವ ಕಲ್ಪನೆ ನಮಗಿಲ್ಲ, ಬೇರೆಯವರ ಇತಿಹಾಸವನ್ನು ನೋಡಿ ಅದುವೇ ಶ್ರೇಷ್ಠ ಎಂದು ಬಿಂಬಿಸಿದ್ದರಿಂದ ಅದನ್ನೇ  ನಂಬಿಕೊಂಡು ಬಂದವರು ನಾವು. ಅದಕ್ಕಾಗಿಯೇ ೧೦೦ ವರ್ಷಗಳ ಹಿಂದೆ ಆರ್.ಎಸ್.ಎಸ್. ಹುಟ್ಟಿಕೊಂಡಿದೆ. ಅದನ್ನು ಮಟ್ಟ ಹಾಕುತ್ತೇವೆ, ಮುಗಿಸಿ ಬಿಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವವರು ಮಿಣುಕು ಹುಳ ಇದ್ದಂತೆ, ಬೆಳಿಗ್ಗೆ ಎದ್ದು ಕೂಗುವ ಕೋಳಿ ಇದ್ದಂತೆ. ಆರ್.ಎಸ್.ಎಸ್. ಸದೃಢವಾಗಿದೆ ಅದನ್ನು ಜಗತ್ತಿನ ಯಾರೂ ಕೂಡಾ ತಡೆಯಲಾರರು. ಜಗತ್ತಿನ ಯಾರಿಗೂ ಕೂಡಾ ಹಿಂದೂ ಸಮಾಜವನ್ನು ಹಿಮ್ಮೆಟ್ಟಿಸುವ ತಾಕತ್ತು ಇಲ್ಲ ಎಂದ ಅವರು ತಾಕತ್ತಿದ್ದರೆ ಆರ್.ಎಸ್.ಎಸ್.ನ್ನು ನಿಲ್ಲಿಸಿ ನೋಡೋಣ ಎಂದು ಸವಾಲು ಹಾಕಿದರು.

LPG bookings/ ಪೆಟ್ರೋಲ್ ಆಯ್ತು, ಭಟ್ಕಳದಲ್ಲಿ ಎಲ್‌ಪಿಜಿ ಬುಕಿಂಗ್‌ನಲ್ಲೂ ಏರಿಕೆ

ನಾವು ದುರ್ಬಲರಾಗಿರುವ ತನಕ ನಮ್ಮನ್ನು ತುಳಿಯುವವರಿರುತ್ತಾರೆ, ತಲೆ ಎತ್ತಿ ನಿಂತರೆ ಯಾರೂ ನಮ್ಮನ್ನು ತಡೆಯಲಾರರು. ಹಿಂದೂಗಳಿದ್ದಲ್ಲಿ ಶಾಂತಿಯಿದೆ. ತಮ್ಮದು ಶಾಂತಿಯ ಧರ್ಮ ಎನ್ನುವವರು ಎಲ್ಲಿ ಇದ್ದಾರೆ. ಜಗತ್ತಿನ ಯಾವ ಇಸ್ಲಾಂ ದೇಶದಲ್ಲಿ ಇಂದು ಶಾಂತಿಯಿದೆ ಎಂದು ಪ್ರಶ್ನಿಸಿದ ಅವರು, ಭಾರತದಲ್ಲಿ ಶಾಂತಿಯಿದ್ದರೆ ಜಗತ್ತಿನೆಲ್ಲೆಡೆ ಶಾಂತಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಿಂದೂಗಳು ತಾಯಿ ನೆಲವನ್ನು ಪೂಜಿಸುವವರು, ಯಾವ ದೇಶದಲ್ಲಿ ನಾವಿರುತ್ತೇವೆಯೋ ಅಲ್ಲಿನ ನೆಲವನ್ನು ಪೂಜಿಸುತ್ತೇವೆ. ಅಮೆರಿಕದಲ್ಲಿನ ಭಾರತೀಯರು ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವುದೇ ದೇಶದಲ್ಲಿರಲಿ ಅಲ್ಲಿನ ಸಂಸ್ಕೃತಿಯನ್ನು ನೆಲವನ್ನು ಗೌರವಿಸುವ ಧರ್ಮ ನಮ್ಮದು ಎಂದರು.

Lok Adalat/ ಮಾರ್ಚ್ ೧೪ರಂದು ಭಟ್ಕಳ ನ್ಯಾಯಾಲಯದಲ್ಲಿ ಲೋಕ ಅದಾಲತ್