ಭಟ್ಕಳ: ತಾಲೂಕಿನ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ನ್ಯೂ ಇಂಗ್ಲೀಷ್ ಸಭಾಭವನದಲ್ಲಿ ಶನಿವಾರ ಕಲಾ ಸೌರಭ ಸಂಗೀತ ವಿದ್ಯಾರ್ಥಿಗಳ ಅದ್ಬುತ ಕಲಾ ಪ್ರದರ್ಶನ (talent show) ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಲಾ ಸೌರಭ ಸಂಗೀತ ಶಾಲೆ ಹಾಗೂ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಸಂಗೀತ ಹಾಗೂ ತಬಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ (talent show) ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಕಲಾ ಸೌರಭ ಮುಖ್ಯಸ್ಥ ಕೇದಾರ ಕೊಲ್ಲೆ ಹಾಗೂ ಭಟ್ಕಳ ಎಜ್ಯುಕೇಷನ್ ಸಂಸ್ಥೆಯ ರಾಜೇಶ ನಾಯಕ ಉದ್ಘಾಟಿಸಿದರು. ನ್ಯೂ ಇಂಗ್ಲಿಷ್ ಸ್ಕೂಲ್ ಮುಖ್ಯಾಧ್ಯಾಪಕ ಗಣಪತಿ ಶಿರೂರು ಉಪಸ್ಥಿತರಿದ್ದರು.

ಇದನ್ನು ಓದಿ: arrested/ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದವ ಪೊಲೀಸ್ ಅತಿಥಿ

ವಿದ್ಯಾರ್ಥಿಗಳು ತಾವು ಕಲಿತ ಕಲಾ ಪ್ರಕಾರಗಳನ್ನು ಅಮೋಘವಾಗಿ ಪ್ರದರ್ಶನಗೈದರು. ಐದು ಗಂಟೆಗಳ ಸುದೀರ್ಘ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ ರಾಗಗಳು, ತಬಲ ಸೋಲೊ ಹಾಗೂ ಗಾಯನ ಸಾಥ್ ನೀಡಿದ ರೀತಿ ಹಾಗೂ ಹಿರಿಯ ವಿದ್ಯಾರ್ಥಿ ಪರಶುರಾಮ್ ಅವರ ತಬಲಾ ವಾದನ ಎಲ್ಲರ ಹುಬ್ಬೇರಿಸುವಂತೆ ಮಾಡಿತು.

ಇದನ್ನು ಓದಿ: Land dispute/ ಜಾಗದ ವಿಷಯದಲ್ಲಿ ಕುಟುಂಬಗಳ ನಡುವೆ ಗಲಾಟೆ 

ಕೊನೆಯಲ್ಲಿ ಸಂಗೀತ ಗುರುಗಳಾದ ಸ್ಮಿತಾ ಹೆಬ್ಬಾರ ಅವರಿಂದ ಗಾಯನ ಪ್ರಸ್ತುತಿ ನೆರೆದವರನ್ನು ಮಂತ್ರ ಮುಗ್ಧಗೊಳಿಸಿತು. ವಿದ್ವಾನ್ ಬಾಲಚಂದ್ರ ಹೆಬ್ಬಾರ ಅವರ ತಬಲಾ ವಾದನ ಹಾಗೂ ಎಂ ಎನ್ ಹೆಗಡೆಯವರ ಹಾರ್ಮೋನಿಯಂ ಸಾಥ್ ಅಮೋಘವಾಗಿತ್ತು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಸ್ಮೀತಾ ಹೆಬ್ಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂರ್ಣಿಮಾ ನಾಯ್ಕ ಹಾಗೂ ಮಂಜುಳಾ ಶಿರೂರಕರ್ ಕಾರ್ಯಕ್ರಮ ನಿರ್ವಹಿಸಿದರು.

ಇದನ್ನು ಓದಿ: Outstanding Achiever/ ಕರ್ನಾಟಕ ಸಾಧಕ ಶ್ರೇಷ್ಠ ರಾಜ್ಯ ಪ್ರಶಸ್ತಿ ಪ್ರದಾನ